Published
7 months agoon
By
Akkare News
ಪುತ್ತೂರು: ೧೨ ವರ್ಷಗ ಹಿಂದೆ ಧರ್ಮಸ್ಥಳದಲ್ಲಿ ಸೌಜನ್ಯಾ ಎಂಬ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಈ ಕೊಲೆಯನ್ನು ಅಲ್ಲಿನವರೇ ಮಾಡಿದ್ದಾರೆ ಎಂಬ ಆರೋಪಗಳಿತ್ತು ಇದು ಗೊಂದಲವನ್ನೇ ಸೃಷ್ಟಿಸಿತ್ತು ಈ ಪ್ರಕರಣದ ಆರೋಪಿಗಳ ಬಂಧವಾಗಿತ್ತು ಆ ಬಳಿಕ ಬಿಡುಗಡೆಯಾಗಿದ್ದರು. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಬಹು ಚರ್ಚಿತವಾಗಿತ್ತು. ಈಗಲೂ ಆ ವಿಚಾರ ಸಾಮಾಜಿಕ ತಾಣದಲ್ಲಿ ಚರ್ಚೆಯಾಗುತ್ತಿದೆ.
ಕಳೆದ ೧೫ ದಿನಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದಿದೆ ಎಂಬ ಘಟನೆಯನ್ನು ಎಸ್ ಐ ಟಿ ತನಿಖೆಗೆ ಕರ್ನಾಟಕದ ಕಾಂಗ್ರೆಸ್ ಸರಕಾರ ಆದೇಶ ಮಾಡಿದೆ. ರಾಜ್ಯ ಸರಕಾರದ ಈ ಆದೇಶಕ್ಕೆ ಎಲ್ಲಾ ಕಡೆಯಿಂದಲೂ ಬೆಂಬಲ ವ್ಯಕ್ತವಾಗಿದೆ. ಧರ್ಮಸ್ಥಳದವರೂ ಇದನ್ನು ಬೆಂಬಲಿಸಿದ್ದಾರೆ. ಎಸ್ ಐಟಿ ತನಿಖೆ ನಡೆದರೆ ಕಳೆದ ೧೨ ವರ್ಷಗಳಿಂದ ಇದ್ದ ಗೊಂದಲಕ್ಕೆ ಸಂಪೂರ್ಣ ತೆರೆ ಬೀಳಲಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ , ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಗೃಹ ಸಚಿವರಾದ ಡಾ. ಎಚ್ ಜಿ ಪರಮೇಶ್ವರ್ ಅವರಿಗೆ ಎಸ್ ಐ ಟಿ ತನಿಖೆಗೆ ಆದೇಶ ನೀಡಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು. ಎಸ್ ಐಟಿ ತನಿಖೆಗೆ ಎಲ್ಲರಿಂದಲೂ ಸ್ವಾಗತ ವ್ಯಕ್ತವಾಗಿರುವುದು ಸಂತಸವಾಗಿದೆ.
ಧರ್ಮಸ್ಥಳ ಕ್ಷೇತ್ರಕ್ಕೆ ದೇಶ ವಿದೇಶಗಳಲ್ಲಿಯೂ ಭಕ್ತಾದಿಗಳಿದ್ದಾರೆ. ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಬರುವ ವರದಿಗಳಿಂದ ಭಕ್ತರು ಗೊಂದಲದಲ್ಲಿದ್ದಾರೆ. ಅಲ್ಲಿ ಏನು ನಡೆದಿದೆ ಎಂಬ ಕುತೂಹಲ, ಆತಂಕ ಭಕ್ತರಲ್ಲಿದೆ ಇದು ನಿವಾರಣೆಯಾಗಬೇಕಾದರೆ ಎಸ್ ಐ ಟಿ ತನಿಖೆ ನಡೆದರೆ ಮಾತ್ರ ಸಾಧ್ಯ ಎಂದು ಮನಗಂಡ ಕರ್ನಾಟಕದ ಕಾಂಗ್ರೆಸ್ ಸರಕಾರ ಎಸ್ ಐ ಟಿ ತನಿಖೆಗೆ ಆದೇಶ ಮಾಡಿದೆ ಇದು ಅಬಿನಂದನಾರ್ಹವಾಗಿದೆ ಎಂದು ಅಶೋಕ್ ರೈ ಹೇಳಿದರು.
ಕಾಂಗ್ರೆಸ್ ಪಕ್ಷ ಯಾವುದೇ ಧರ್ಮದ ವಿರೋಧಿಯಲ್ಲ. ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಧರ್ಮಸ್ಥಳ ಕ್ಷೇತ್ರದ ಬಗ್ಗೆ ನಮಗೆ ಗೌರವ ಇದೆ, ಸರಕಾರಕ್ಕೂ ಗೌರವ ಇದೆ.
ಸೌಜನ್ಯಾ ಅತ್ಯಾಚಾರ ಕೊಲೆಯ ಪ್ರಕರಣದ ಬಳಿಕ ಕ್ಷೇತ್ರದ ಬಗ್ಗೆ ಭಕ್ತರು ಗೊಂದಲ್ಲಿದ್ದ ಕಾರಣ ಕಾಂಗ್ರೆಸ್ ಸರಕಾರ ಪ್ರಕರಣವನ್ನು ಎಸ್ ಐ ಟಿ ತನಿಖೆಗೆ ಆದೇಶ ಮಾಡಿದೆ ಮುಂದಿನ ದಿನಗಳಲ್ಲಿ ಎಸ್ ಐ ಟಇ ತನಿಖೆಯಿಂದ ವರದಿ ಬಂದ ಬಳಿಕ ಗೊಂದಲಕ್ಕೆ ಸಂಪೂರ್ಣ ತೆರೆ ಬೀಳಲಿದ್ದು ಅಲ್ಲಿಯ ತನಕ ಯಾರೂ ಮಾತನಾಡದೆ ತನಿಖೆಗೆ ಬೆಂಬಲ ನೀಡಬೇಕು ಎಂದು ಶಾಸಕರು ಮನವಿ ಮಾಡಿದರು.
‘