Connect with us

ಇತರ

ವಲಯ ಕಾಂಗ್ರೆಸ್ ನರಿಮೊಗರು ಸ್ವಾತಂತ್ರ್ಯ ದಿನಾಚರಣೆ ಆಚರಣೆ ಹಿರಿಯ ನಾಗರಿಕರಿಗೆ ಶಾಸಕರಿಂದ ಸನ್ಮಾನ

Published

on

ಪುತ್ತೂರು : ಆ.15.ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ವಲಯ ಕಾಂಗ್ರೆಸ್ ನರಿಮೊಗರು ವತಿಯಿಂದ ನರಿಮೊಗರು ಗ್ರಾಮದ 11 ಜನ ಹಿರಿಯ ನಾಗರಿಕರಿಗೆ ಸನ್ಮಾನ ನಡೆಯಿತು .ಈ ಕಾರ್ಯ ಕ್ರಮಕ್ಕೆ ಮಾನ್ಯ ಶಾಸಕರಾದ ಅಶೋಕ್ ಕುಮಾರ್ ರೈ ಅವರು ಬೇಟಿ ನೀಡಿ 100 ನೇ ಹುಟ್ಟು ಹಬ್ಬ ಆಚರಿಸುತ್ತಿರುವ ಕಾವೇರಮ್ಮ ಎಂಬವರಿಗೆ ಶಾಸಕರು ಸನ್ಮಾನ ಮಾಡಿ ಶುಭ ಹಾರೈಸಿದರು .

ಶಾಸಕರಿಗೆ ಈ ಕಾರ್ಯ ಕ್ರಮವನ್ನು ನೋಡಿ ಬಾರಿ ಸಂತೋಷ ವ್ಯಕ್ತಪಡಿಸಿದರು ಇನ್ನು ಮುಂದೆಯೂ ಇಂಥ ಒಳ್ಳೊಳ್ಳೆಯ ಕಾರ್ಯಕ್ರಮವನ್ನು ಮಾಡಬೇಕು ಎಂದು ವಲಯ ಅಧ್ಯಕ್ಷರಾದ ಹೊನ್ನಪ್ಪ ಪೂಜಾರಿ ಅವರನ್ನು ತಿಳಿಸಿದರು .ಈ ಸನ್ಮಾನ ಕಾರ್ಯಕ್ರಮದಲ್ಲಿ ಬ್ಲಾಕ್ ಅದ್ಯಕ್ಷರು ಆದಂತ ಕೃಷ್ಣ ಪ್ರಸಾದ್ ಆಳ್ವ ,ವಲಯ ಪ್ರದಾನ ಕಾರ್ಯದರ್ಶಿಯಾದ ಪೂರ್ಣೇಶ್ ಭಂಡಾರಿ ,ಬ್ಲಾಕ್ ಪದಾಧಿಕಾರಿಗಳು ,ನರಿಮೊಗರು ವಲಯದ ವಲಯ ಉಸ್ತುವಾರಿ ಯಾಕೂಬ್ ಮುಲಾರ್ , ಬ್ಲಾಕ್ ಮಹಿಳಾ ಘಟಕದ ಕಾರ್ಯಾಧ್ಯಕ್ಷರಾದ ಚಂದ್ರ ಪ್ರಭ ಗೌಡ ,ನರಿಮೊಗರು ಗ್ರಾಮದ ಪಂಚಾಯತ್ ಸದಸ್ಯರು ,ವಲಯ ಸಮೀತಿ ಸದಸ್ಯರು ,ಬೂತ್ ಅದ್ಯಕ್ಷರು ,ಮಹಿಳಾ ಘಟಕದ ಅದ್ಯಕ್ಷರು ಮತ್ತು ಸದಸ್ಯರು ,ಮುಂಚೂಣಿ ಘಟಕದ ಅದ್ಯಕ್ಷರು ಹಾಗು ಕಾಂಗ್ರೆಸ್ಸಿನ ಸಕ್ರೀಯ ಕಾರ್ಯಕರ್ತರು ಈ ಸನ್ಮಾನ ಕಾರ್ಯಕ್ರಮದ ಯಶಸ್ವಿಗೆ ಭಾಗಿಯಾಗಿದ್ದರು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version