Connect with us

ಇತರ

ನದಿಯಲ್ಲಿ ಎತ್ತುಗಳಿಗೆ ಸ್ನಾನ ಮಾಡಿಸುವ ವೇಳೆ ವ್ಯಕ್ತಿಯನ್ನೇ ಎಳೆದೊಯ್ದ ಮೊಸಳೆ

Published

on

ಮುದ್ದೇಬಿಹಾಳ: ತಾಲೂಕಿನ ಕುಂಚಗನೂರು ಗ್ರಾಮದ ಹತ್ತಿರ ಇರುವ ಕೃಷ್ಣಾ ನದಿಯಲ್ಲಿ ಗ್ರಾಮಸ್ತ ಕಾಶಪ್ಪ ಹಣಮಂತ ಕಂಬಳಿ (38) ಎಂಬಾತನನ್ನು ಮೊಸಳೆಯೊಂದು ನೀರಲ್ಲಿ ಎಳೆದೊಯ್ದಿರುವ ಘಟನೆ ಶನಿವಾರ (ಆ.23) ಬೆಳಿಗ್ಗೆ ನಡೆದಿದೆ.

ಅಮವಾಸ್ಯೆ ಹಿನ್ನೆಲೆ ತನ್ನೆರಡು ಎತ್ತುಗಳಿಗೆ ಮೈತೊಳೆಸಲು ನದಿಯ ಹತ್ತಿರ ಹೋಗಿದ್ದಾಗ ಈ ಘಟನೆ ನಡೆದಿದೆ.

ಅರಣ್ಯ ಇಲಾಖೆ, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ನದಿಯಲ್ಲಿ ದೋಣಿ, ತೆಪ್ಪದ ಮೂಲಕ ಶವಕ್ಕಾಗಿ ಶೋಧ ನಡೆಸಿದ್ದಾರೆ. ಕಾಶಪ್ಪನಿಗೆ ಪತ್ನಿ, ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ನದಿ ದಂಡೆಯಲ್ಲಿ ಸೇರಿದ್ದು ಶವಕ್ಕಾಗಿ ಶೋಧ ಕಾರ್ಯಾಚರಣೆ ಬಿರುಸುಗೊಂಡಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version