Connect with us

ಇತರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣೆ

Published

on

ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ (ರಿ.) ವಿಟ್ಲ ವತಿಯಿಂದ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಟ್ಲ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಕೃಷ್ಣಯ್ಯ ಬಲ್ಲಾಳ್ ವಹಿಸಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕರಾವಳಿ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ ಯೋಜನೆಯು ನಡೆದು ಬಂದ ದಾರಿ, ಪೂಜ್ಯರು ಸಮಾಜಕ್ಕೆ ಕೊಟ್ಟ ಕೊಡುಗೆಗಳು, ಕ್ಷೇತ್ರದಿಂದ ನಡೆಯುವ ಸೇವಾ ಚಟುವಟಿಕೆಗಳು ಬಗ್ಗೆ ಮಾಹಿತಿ ನೀಡಿತ್ತಾ, ಕರ್ನಾಟಕ ರಾಜ್ಯಾದ್ಯಂತ 1.25 ಲಕ್ಷ ಮಕ್ಕಳಿಗೆ ಒಂದು ಕೋಟಿ 53 ಲಕ್ಷ ರೂಪಾಯಿ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಮತ್ತು ಕರ್ನಾಟಕ ರಾಜ್ಯದ್ಯಂತ 1050 ಶಾಲೆಗಳಿಗೆ ಜ್ಞಾನ ದೀಪ ಶಿಕ್ಷಕರನ್ನು ಒದಗಿಸಿ ಇದಕ್ಕೆ ಪ್ರತಿವರ್ಷ 95 ಲಕ್ಷ ರೂಪಾಯಿ ವಿನಿಯೋಗಿಸಲಾಗುತ್ತಿದೆ ಎಂದರು.

ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಧಿಕಾರಿ ಮಂಜುನಾಥ್ ಎಮ್ ಜಿ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣೆ ಮಾಡಿ ಮಾತನಾಡಿ ಧರ್ಮಸ್ಥಳದಿಂದ ಶಿಕ್ಷಣಕ್ಕೆ ಒತ್ತು ನೀಡಿ ನೀಡುವ ಜ್ಞಾನದೀಪ ಶಿಕ್ಷಕರು, ಬೆಂಚು ಡೆಸ್ಕ್ , ಶಾಲಾ ಕಟ್ಟಡ, ಶೌಚಾಲಯ, ಲೈಬ್ರರಿ, ಕಂಪ್ಯೂಟರ್, ನೈತಿಕ ಶಿಕ್ಷಣ ಮುಂತಾದ ಪ್ರೋತ್ಸಾಹ, ಸರಕಾರಿ ಶಾಲೆ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು. ವಿದ್ಯಾರ್ಥಿಗಳು ಶ್ರೀ ಕ್ಷೇತ್ರದಿಂದ ಪ್ರಸಾದ ರೂಪದಲ್ಲಿ ಸಿಗುವಂತ ವಿದ್ಯಾರ್ಥಿ ವೇತನವನ್ನು ಸದುಪಯೋಗ ಪಡೆದುಕೊಂಡು ಉತ್ತಮ ವಿದ್ಯಾರ್ಥಿಗಳಾಗಿ ಭವಿಷ್ಯ ರೂಪಿಸಿಕೊಂಡು ಮುಂದೆ ತಾವುಗಳು ಸಮಾಜ ಸೇವೆ ಮಾಡುವ ಗುಣ ಹೊಂದಿ ಎಂದರು.
ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ಆಳ್ವ, ಕೆಯ್ಯುರ್ ನಾರಾಯಣ ಭಟ್, ಜನಜಾಗೃತಿ ವೇದಿಕೆಯ ಸದಸ್ಯರಾದ ನಟೇಶ್ ವಿಟ್ಲ, ಉಮಾನಾಥ್ ಶೆಟ್ಟಿ, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಕರುಣಾಕರ ಗೌಡ ವಲಯದ ಅಧ್ಯಕ್ಷರುಗಳಾದ ರಾಜೇದ್ರ ರೈ, ಶ್ರೀಮತಿ ಪ್ರಮೀಳಾ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿಟ್ಲ ತಾಲೂಕಿನಲ್ಲಿ ಪ್ರಸ್ತುತ ವರ್ಷ ಆಯ್ಕೆಯಾದ 136 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ವಿದ್ಯಾರ್ಥಿ ವೇತನ ಪತ್ರ ಹಾಗೂ 27 ಜ್ಞಾನದೀಪಾ ಶಿಕ್ಷಕರಿಗೆ ಸಮವಸ್ತ್ರ ಉಡುಗೊರೆ ವಿತರಣೆ ಮಾಡಲಾಯಿತು.

ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ತಾಲೂಕು ಯೋಜನಾಧಿಕಾರಿ ಸುರೇಶ್ ಗೌಡ ಸ್ವಾಗತಿಸಿ, ವಿಟ್ಲ ವಲಯದ ಮೇಲ್ವಿಚಾರಕ ಜಗದೀಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version