Published
10 months agoon
By
Akkare News
ಪುತ್ತೂರು ಬನ್ನೂರಿನ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 26/ 9 /2025 ರಂದು ಶಾರದ ಪೂಜೆ ,ಭಜನೋತ್ಸವ, ಅಕ್ಷರಾಭ್ಯಾಸ ಮತ್ತು ಆಯುಧ ಪೂಜೆಯನ್ನು ಬಹಳ ವಿಜೃಂಭಣೆಯಿಂದ ನಡೆಸಲಾಯಿತು.ಮಕ್ಕಳಿಂದ ದೀಪ ಬೆಳಗಿಸಿ,ಭಜನೆಯನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ರಾಜ್ಯ ಧಾರ್ಮಿಕ ಪರಿಷತ್ತಿನ ಮಾಜಿ ಸದಸ್ಯರಾದ ಶ್ರೀ ಮುರಳಿ ಕೃಷ್ಣ ಹಸಂತಡ್ಕ ರವರು ಮಾತನಾಡಿ ಶಿಕ್ಷಣದ ಮುಖ್ಯ ಗುರಿ ಜ್ಞಾನ ಸಂಪಾದನೆ. ಜ್ಞಾನದಿಂದ ಸಮಾಜದ ಪರಿವರ್ತನೆ ಕೆಲಸ ಸಾಧ್ಯ ಎಂಬುದನ್ನು ತಿಳಿಸಿದರು.ಜಗತ್ತಿನಲ್ಲಿ ದೈವಿ ಶಕ್ತಿಯ ಕಾರಣದಿಂದ ಪ್ರತಿಯೊಂದು ಅ ಅಣುರೇಣುಗಳು ಬದುಕಲು ಸಾಧ್ಯ ,ಹಾಗಾಗಿ ಎಲ್ಲರೂ ಉತ್ತಮ ಪ್ರಜೆಗಳಾಗಿ ಬಾಳಿ ಎಲ್ಲರೂ ನಮ್ಮವರು ಎಂಬ ಯೋಚನೆ ನಮ್ಮಲ್ಲಿ ಬರಬೇಕು .ಮಕ್ಕಳಲ್ಲಿ ಸಂಸ್ಕೃತಿ ಬೆಳೆಯುವುದು ಭಜನೆ ,ಪೂಜೆ ಮೂಲಕ ಸಾಧ್ಯ ಎನ್ನುವ ಅರಿವು ಮೂಡಿಸಿದರು. ಎವಿಜಿ ಸಂಸ್ಥೆಯು ಮಕ್ಕಳಿಗೆ ಜ್ಞಾನ ಸಂಪಾದನೆಯನ್ನು ಧಾರೆ ಎರೆಯುತ್ತಿದೆ ಎಂದು ಸಂಸ್ಥೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಸಭೆಯ ಅಧ್ಯಕ್ಷತೆಯನ್ನು ಶಾಲಾ ಅಧ್ಯಕ್ಷರಾದ ಶ್ರೀ ವೆಂಕಟರಮಣ ಗೌಡ ಕಳುವಾಜೆ ವಹಿಸಿದ್ದು ಸಂಸ್ಕೃತಿ, ಭಜನೆಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಶುಭ ಸಂದರ್ಭದಲ್ಲಿ ವೇದಿಕೆಯ ಗಣ್ಯರಿಂದ ಎವಿಜಿ ಅಸೋಸಿಯಟ್ಸ್ ಸಂಸ್ಥೆಯ ಕಚೇರಿ ವ್ಯವಸ್ಥಾಪಕ ಶ್ರೀ ಚೇತನ್ ಕುಮಾರ್ ಮತ್ತು ಕಾರ್ಪೆಂಟರ್ ಎವಿಜಿ ಸಮೂಹ ಸಂಸ್ಥೆಯ ಶ್ರೀ ಉಮೇಶ್ ಇವರನ್ನು ಸನ್ಮಾನಿಸಲಾಯಿತು.
ಪ್ರಾಸ್ತಾವಿಕವಾಗಿ ಸಂಚಾಲಕರಾದ ಶ್ರೀ ಎ. ವಿ ನಾರಾಯಣ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಅಕ್ಷರ ಅಭ್ಯಾಸ , ಆಯುಧ ಪೂಜೆ ಹಾಗೂ ಶಾರದ ಪೂಜೆಯು ಧಾರ್ಮಿಕ ವಿಧಿ ವಿಧಾನದಲ್ಲಿ ನೆರವೇರಿತು. ವೇದಿಕೆಯಲ್ಲಿ ಶಾಲಾ ಆಡಳಿತ ಅಧಿಕಾರಿಯಾದ ಶ್ರೀ ಗುಡ್ಡಪ್ಪಗೌಡ ಬಲ್ಯ ,ಉಪಾಧ್ಯಕ್ಷರಾದ ಶ್ರೀ ಉಮೇಶ್ ಮಲುವೇಳು ,ಶಾಲಾ ನಿರ್ದೇಶಕರಾದ ಶ್ರೀ ಕೊರಗಪ್ಪ ಗೌಡ ಹಾಗೂ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸೌಮ್ಯಶ್ರೀ ಹೆಗಡೆ ಮತ್ತು ಶಾಲಾ ಮುಖ್ಯೋಪಾಧ್ಯರಾದ ಶ್ರೀ ಅಮರ್ ನಾಥ್ ಪಟ್ಟೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾದ ಶ್ರೀಮತಿ ಪುಷ್ಪಾವತಿ ಕಳುವಾಜೆ ,ಶ್ರೀಮತಿ ಪ್ರತಿಭಾದೇವಿ ,ಶ್ರೀಮತಿ ದೀಕ್ಷಾ, ಶ್ರೀ ಗಂಗಾಧರ ಗೌಡ ,ಶ್ರೀ ಸೀತಾರಾಮ ಕೇವಳ , ಶಿಕ್ಷಕರಕ್ಷಕ ಸಂಘದ ಪದಾಧಿಕಾರಿಗಳು ,ಪೋಷಕರು ಬೋಧಕ ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ವಿದ್ಯಾರ್ಥಿನಿಯರಾದ ಕುಮಾರಿ ಶಿವಾನಿ , ಅದ್ವಿತಿ ಬಂಜನ್,ಎ. ಎನ್ ಜೋಶ್ನಾ ಗೌಡ ಪ್ರಾರ್ಥಿಸಿದರು. ಶಿಕ್ಷಕಿಯಾದ ಶ್ರೀಮತಿ ರಾಧಾ ಸ್ವಾಗತಿಸಿ, ಶ್ರೀಮತಿ ಹಿತ ಶ್ರೀ ವಂದನಾರ್ಪಣೆಗೈದು, ಶ್ರೀಮತಿ ಶ್ವೇತಾ ಕಾರ್ಯಕ್ರಮವನ್ನು ನಿರೂಪಿಸಿದರು.