Published
5 months agoon
By
Akkare News
ಗಾಂಧೀಜಿ, ಶಾಸ್ತ್ರೀಜಿ ಯಂತಹ ರಾಷ್ಟ್ರಪ್ರೇಮಿ ವ್ಯಕ್ತಿಗಳು ಈ ಶಾಲೆಯಿಂದ ಮೂಡಿ ಬರಲಿ – ಸೀತಾರಾಮ ಕೇವಳ
ಬನ್ನೂರು : ಇಲ್ಲಿನ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಯವರ 156ನೇ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಜಿ ಯವರ 121ನೇ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶಾಲಾಡಳಿತ ಸಮಿತಿಯ ನಿರ್ದೇಶಕರಾದ ಸೀತಾರಾಮ ಕೇವಳ ದೀಪ ಪ್ರಜ್ವಲಿಸಿ, ಗಾಂಧೀಜಿ ಹಾಗೂ ಶಾಸ್ತ್ರೀಜಿ ಯವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಗೈದು ಬಳಿಕ ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಭಾರತದ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರೀಜಿ ಯಂತಹ ದಿವ್ಯ ಚೇತನ ಗಳನ್ನು ಸ್ಮರಿಸುವುದು ಮತ್ತು ಅವರ ಬದುಕಿನ ಆದರ್ಶಗಳನ್ನು ಅನುಸರಿಸುವ ಮೂಲಕ ರಾಷ್ಟ್ರಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು. ಇಂತಹ ವ್ಯಕ್ತಿತ್ವ ಇರುವ ಪ್ರತಿಭೆಗಳು ಮುಂದಿನ ದಿನಗಳಲ್ಲಿ ಈ ಶಾಲೆಯಿಂದ ಮೂಡಿಬರುವಂತಾಗಬೇಕು ಎಂದು ಶುಭ ಹಾರೈಸಿದರು.
ಶಾಲಾ ಆಡಳಿತ ಸಮಿತಿ ಅಧ್ಯಕ್ಷರಾದ ವೆಂಕಟರಮಣ ಗೌಡರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಷ್ಟ್ರ ಚಿಂತನೆ ಮಾಡುವ ವ್ಯಕ್ತಿಗಳ ನಿರ್ಮಾಣ ಶಾಲೆಯಿಂದ ಆರಂಭವಾಗಬೇಕು ರಾಷ್ಟ್ರೀಯ ಮೌಲ್ಯಗಳ ಆಧಾರದಲ್ಲಿ ವಿದ್ಯಾರ್ಥಿಗಳು ಇಂತಹ ವ್ಯಕ್ತಿಗಳ ಜೀವನ ಆದರ್ಶ ಸಿದ್ಧಾಂತಗಳನ್ನು ಅರಿತುಕೊಂಡು ಸಮೃದ್ಧವಾದ ರಾಷ್ಟ್ರ ನಿರ್ಮಾಣ ದಲ್ಲಿ ಕೈಜೋಡಿಸಬೇಕು ಎಂದರು.
ಶಾಲಾ ಆಡಳಿತ ಸಮಿತಿಯ ಸಂಚಾಲಕ ಎ ವಿ ನಾರಾಯಣ ನಿರ್ದೇಶಕರುಗಳಾದ ಗಂಗಾಧರ ಗೌಡ, ಶ್ರೀಮತಿ ಪ್ರತಿಭಾ ದೇವಿ ಶುಭ ಹಾರೈಸಿದರು. ಬನ್ನೂರು ಸರಕಾರಿ ಶಾಲಾ ಶಿಕ್ಷಕಿ ಸುಷ್ಮಾ ಹಾಗೂ ಮನೆಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.