Published
5 months agoon
By
Akkare News
ಗ್ಯಾರಂಟಿ ಲೈಫ್ ಟೈಮ್ ಗ್ಯಾರಂಟಿ:
ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿ ಯೋಜನೆ ರಾಜ್ಯದ ಲೈಫ್ ಟೈಮ್ ಯೋಜನೆಯಾಗಲಿದ್ದು ಮುಂದಿನ ಬಾರಿಯೂ ಕಾಂಗ್ರೆಸ್ ಸರಕಾರವೇ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದ ಶಾಸಕರು
ಇಷ್ಟು ವರ್ಷ ರಾಜ್ಯವನ್ನು ಆಳಿದ ಸರಕಾರಗಳು ಗ್ಯಾರಂಟಿ ಯೋಜನೆಯನ್ನು ಕೊಟ್ಟಿಲ್ಲ, ಎರಡೂವರೆ ವರ್ಷದ ಹಿಂದೆ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಪಂಚ ಗ್ಯಾರಂಟಿಯನ್ನು ಜಾರಿ ಮಾಡಿ ಬಡವರಿಗೆ ನೆರವು ನೀಡುವ ಕಾರ್ಯ ನಡೆಯುತ್ತಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ತೆಂಕಿಲ ಕಾಲನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿಮಾತನಾಡಿದರು.
ಸಿ ಎಂ ಸಿದ್ದರಾಮಯ್ಯ ಅವರಿಗೆ ದಲಿತರ ಮೇಲೆ ಅತ್ಯಂತ ಪ್ರೀತಿ ಇದೆ. ದಲಿತ ಸಮುದಾಯಕ್ಕೆ ಕಾಂಗ್ರೆಸ್ ಸರಕಾರ ನೂರಾರು ಯೋಜನೆಗಳನ್ನು ನೀಡಿದ್ದಾರೆ. ಇಷ್ಟೊಂದು ಯೋಜನೆಗಳನ್ನು ನೀಡಿರುವ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ಸನ್ನು ಎಂದಿಗೂ ನಾವು ಮರೆಯಬಾರದು ಎಂದು ಶಾಸಕರು ಹೇಳಿದರು.
ವೇದಿಕೆಯಲ್ಲಿ ಟ್ರಸ್ಟ್ ಪ್ರಮುಖರಾದ ನಿರಂಜನ್ ರೈ, ಕೃಷ್ಣಪ್ರಸಾದ್ ಆಳ್ವ,ತಾಲೂಕು ಮೊಗೇರ ಸಂಘದ ಅಧ್ಯಕ್ಷ ಸುಂದರ ಕೇಪು, ಬಶೀರ್ ಪರ್ಲಡ್ಕ, ಮೋನು ಬಪ್ಪಳಿಗೆ,ಮಹಾಬಲ ರೈ ವಳತ್ತಡ್ಕ,ತೆಂಕಿಕ ಆದಿಮೊಗೆರ್ಕಳ ಸೇವಾ ಸಮಿತಿ ಅಧ್ಯಕ್ಷ ಲೋಹಿತಾಕ್ಷ ,ರಫೀಕ್ ಮೊಟ್ಟೆತ್ತಡ್ಕ,ಅಲೀ ಪರ್ಲಡ್ಕ,
ಮುಕೇಶ್ ಕೆಮ್ಮಿಂಜೆ ಸ್ವಾಗತಿಸಿ ವಂದಿಸಿದರು.