Connect with us

ಇತರ

ಪಟಾಕಿ ಅಂಗಡಿಯ NOC ಗೆ ತಹಸೀಲ್ದಾರ್ 10.000 ರೂ ಬೇಡಿಕೆಯ ವಿಚಾರ.. ಲಂಚ ಕೇಳುವ ಅಧಿಕಾರಿಗಳನ್ನು ಲೋಕಾಯುಕ್ತ ಬಲೆಗೆ ಬೀಳಿಸಿ ಎಚ್. ಮಹಮ್ಮದ್ ಅಲಿ ಅಗ್ರಹ

Published

on

ದೀಪಾವಳಿ ಪ್ರಯುಕ್ತ ನಗರಸಭಾ ವ್ಯಾಪ್ತಿ ಸಹಿತ ಪುತ್ತೂರು ತಾಲೂಕಿನ ವಿವಿಧ ಕಡೆ ಪಟಾಕಿ ಅಂಗಡಿಗಳನ್ನು ತೆರೆಯುವರೇ ಪರವಾನಿಗೆ ಪಡೆಯುವರೇ ಹಲವಾರು ವ್ಯಾಪಾರಸ್ತರು ಅರ್ಜಿ ಸಲ್ಲಿಸಿದ್ದು, ಪರವಾನಿಗೆ ಪಡೆಯಲು ನಿಯಮದಂತೆ ತಾಲೂಕು ತಹಸೀಲ್ದಾರ NOC ಅಗತ್ಯವಿರುತ್ತದೆ.

ಆದರೆ ಪುತ್ತೂರು ಪ್ರಭಾರ ತಹಸೀಲ್ದಾರ್ ಪಟಾಕಿ ಅಂಗಡಿಗೆ NOC ನೀಡಲು ಪ್ರತಿ ಕಡತಕ್ಕೆ 10.000 ರೂಪಾಯಿ ಲಂಚ ಕೇಳುತ್ತಿದ್ದು ಲಂಚ ಕೊಡದವರ ಕಡತವನ್ನು ಪೆಂಡಿಂಗ್ ಇಟ್ಟು ತೊಂದರೆ ಕೊಡುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು ತಹಸೀಲ್ದಾರ್ ಹಣದ ಡಿಮ್ಯಾಂಡ್ ಮಾಡಿ ತೊಂದರೆ ಕೊಡದೆ ಪಟಾಕಿ ಅಂಗಡಿಗಳಿಗೆ ಕೂಡಲೇ NOC ನೀಡಬೇಕೆಂದು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಅಲಿ ಆಗ್ರಹಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪುತ್ತೂರು ತಾಲೂಕು ಕಚೇರಿಗೆ ಲೋಕಾಯುಕ್ತ ದಾಳಿ ನಡೆಸಿ ಲಂಚ ಸ್ವೀಕರಿಸುತ್ತಿದ್ದ ಪ್ರಥಮ ದರ್ಜೆ ಸಹಾಯಕ ಸುನಿಲ್ ಕುಮಾರ್ ರನ್ನು ಬಂದಿಸಿದ್ದು, ಈ ಸಂದರ್ಭದಲ್ಲಿ ತಹಸೀಲ್ದಾರ್ ಕೂಡಲಿಗಿ ಕಚೇರಿಯಿಂದ ಪರಾರಿಯಾಗಿ ಅಡಗಿ ಕೂತ ಪ್ರಕರಣವು ಹಸಿಹಸಿ ಯಾಗಿರುವ ಈ ಸಂದರ್ಭದಲ್ಲಿ ಪಟಾಕಿ ಅಂಗಡಿಯ NOC ಗೆ ಪ್ರಬಾರ ತಹಸೀಲ್ದಾರ್ ಲಂಚ ಹಣ ಕ್ಕೆ ಡಿಮ್ಯಾಂಡ್ ಮಾಡುತ್ತಿರುವುದು ನೋಡಿದರೆ ಈ ಅಧಿಕಾರಿಗಳಿಗೆ ಯಾವ ಭಯವಿಲ್ಲವೆಂದು ಕಾಣುತ್ತದೆ.

ಸೋಮವಾರದಿಂದ ದೀಪಾವಳಿ ಹಬ್ಬ ಪ್ರಾರಂಭ ವಾಗುವುದರಿಂದ ತಹಸೀಲ್ದಾರ್ ಯಾವುದೇ ವಿಳಂಬ ಮಾಡದೆ ಪಟಾಕಿ ಅಂಗಡಿ NOC ನೀಡಲು ಕ್ರಮ ಕೈಗೊಳ್ಳಬೇಕು, ಎಂದು ಆಗ್ರಹಿಸಿದ ಮಹಮ್ಮದ್ ಅಲಿ ಯವರು ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿ ನಿಮಗೆ ಗೌರವ ಕೊಡುತ್ತೇವೆ ಅದು ಬಿಟ್ಟು ಲಂಚಕ್ಕಾಗಿ ಜನರಿಗೆ ತೊಂದರೆ ಕೊಡುವ ಕೆಲಸ ಮಾಡಿದರೆ ಅಂತವರಿಗೆ ಹೇಗೆ ಬುದ್ದಿ ಕಲಿಸ ಬೇಕೆಂದು ನಮಗೆ ಚೆನ್ನಾಗಿ ಗೊತ್ತಿದೆ ಎಂದು ಎಚ್ಚರಿಕೆ ನೀಡಿದ ಮಹಮ್ಮದ್ ಅಲಿಯವರು ಇಲಾಖೆಗಳ ಯಾರೇ ಅಧಿಕಾರಿಗಳಿರಲಿ ಲಂಚ ಕೇಳಿದರೆ ಅಂತಹ ಅಧಿಕಾರಿಗಳನ್ನು ಲೋಕಾಯುಕ್ತಕ್ಕೆ ಟ್ರ್ಯಾಪ್ ಮಾಡಿಸಿ ಎಂದು ಮಹಮ್ಮದ್ ಅಲಿ ಯವರು ಅಗ್ರಹಿಸಿದರು.


Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version