Connect with us

ಇತರ

ಬಿಸಿಲೆಘಾಟ್ ನಲ್ಲಿ ನಡೆದ ಅಪಘಾತದ ಗಾಯಾಳು ಸಾಗಿಸುತ್ತಿದ್ದ ಅಂಬುಲನ್ಸ್ ಗೆ ಅಡ್ಡಬಂದು ಹುಚ್ಚಾಟ ಮೆರೆದ ಸ್ಕೂಟರ್ ಸವಾರ

Published

on

ಮಂಗಳೂರು ಅಕ್ಟೋಬರ್ 30: ಬಿಸಿಲೆ ಘಾಟ್ ನಲ್ಲಿ ಮದುವೆಗೆ ಹೊರಟಿದ್ದ ವಾಹನವೊಂದು ಪಲ್ಟಿಯಾಗಿ ಹಲವಾರು ಮಂದಿ ಗಾಯಗೊಂಡಿದ್ದರು. ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಮಂಗಳೂರು ಆಸ್ಪತ್ರೆಗೆ ಕರೆತರುತ್ತಿದ್ದ ಆಂಬ್ಯುಲೆನ್ಸ್ ವಾಹನಕ್ಕೆ ಸ್ಕೂಟರ್ ಸವಾರನೊಬ್ಬ ಅಡ್ಡಬಂದು ಹುಚ್ಚಾಟ ನಡೆಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಿಸಿಲೆ ಘಾಟ್ ನಲ್ಲಿ ನಡೆದ ಬಸ್ ಅಪಘಾತದಲ್ಲಿ ಸುಮಾರು 20 ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದು ಹಲವರನ್ನು ವಿವಿಧ ಆಸ್ಪತ್ರೆಗೆ ಸಾಗಿಸಲಾಗಿದೆ. ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದ ತೀವ್ರ ಗಾಯಗೊಂಡ ಮಹಿಳೆಯನ್ನು ಮಂಗಳೂರು ಆಸ್ಪತ್ರೆಗೆ ತುರ್ತು ಸಾಗಿಸುವ ಮದ್ಯೆ BC ರೋಡ್ ಬಳಿ ಸ್ಕೂಟಿ ಸವಾರನೊಬ್ಬ ಅಂಬುಲನ್ಸ್ ಗೆ ದಾರಿಮಾಡಿಕೊಡದೆ ಸುಮಾರು 4 ಕಿಲೋ ಮೀಟರ್ ಸತಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ
ಅಂಬುಲನ್ಸ್ ಚಾಲಕ ಹಾರ್ನ್ ಹಾಕಿದರೂ ಸೈರನ್ ಶಬ್ದವಿದ್ದರೂ ಸ್ಕೂಟಿ ಸವಾರ ದಾರಿ ಬಿಟ್ಟುಕೊಡಲಿಲ್ಲ,ಸ್ಕೂಟಿ ಸವಾರನ ಹುಚ್ಚಾಟವನ್ನು ಸಹಚಾಲಕ ಕಾರ್ತಿಕ್ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಾರೆ. ಆಂಬ್ಯುಲೆನ್ಸ್ ಗೆ ದಾರಿ ಕೊಡುವಷ್ಟು ಮಾನವೀಯತೆ ಸ್ಕೂಟರ್ ಸವಾರನಿಗೆ ಇಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version