Connect with us

ಇತರ

2025-26 ನೇ ಸಾಲಿನ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಶೈಲಜಾ ರಾಜೇಶ್

Published

on

ಬಂಟ್ವಾಳ: ಸದಾ ನಗು ಮೊಗದ ಮುಗ್ದ ಮನಸ್ಸು,ಜೀವ ಮತ್ತು ಜೀವನ ನ್ಯಾಯ ಮತ್ತು ಅನ್ಯಾಯದ ಬಗ್ಗೆ ತಿಳಿದು, ಧರ್ಮ ಮಾಗದ ಹಾದಿಯಲ್ಲಿ ಜೀವನ ಕಳೆದು, ಪ್ರತಿಭೆಯನ್ನೇ ಬಂಡವಾಳವನ್ನಾಗಿಸಿ,ಕ್ರೀಡಾ ಕ್ಷೇತ್ರದಲ್ಲಿ ಹೆಸರು ಗಳಿಸಿ, ನ್ಯಾಯ ದೇವತೆಯ ಮಡಿಲಲ್ಲಿ ತನ್ನ ಸೇವೆಯನ್ನು ಮಾಡುತ್ತಾ ಸಮಾಜದ ಕಣ್ಣೀರ ಮನಸ್ಸುಗಳಿಗೆ ಉಸಿರನ್ನಿಟ್ಟು ಕಾಪಾಡುತ್ತಿರುವ ಸಮಾಜಸೇವಕಿ ನ್ಯಾಯವಾದಿ ಶ್ರೀಮತಿ ಶೈಲಜಾ ರಾಜೇಶ್.

 

ಶ್ರೀಮತಿ ಶೈಲಜಾ ರಾಜೇಶ್ ರವರು ಕೃಷ್ಣಸುವರ್ಣ ಮತ್ತು ಗಿರಿಜಾ ಸುವರ್ಣ ದಂಪತಿಗಳ ಮುದ್ದಿನ ಮಗಳಾಗಿ ಅಮ್ಮನ ಸಾತ್ವಿಕ,ಸದ್ಗುಣ,ಗುಣಗಳನ್ನು ಮತ್ತು ಅಪ್ಪನ ಧೈರ್ಯ,ಆತ್ಮವಿಶ್ವಾಸ,ಸ್ವಾಭಿಮಾನಿಗಳ ನ್ನೂ ರಕ್ತಗತವಾಗಿ ಮೈಗೂಡಿಸಿಕೊಂಡಿರುವ ಇವರು ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲು, ದೈತೋಟಮನೆಯಲ್ಲಿ ಜನಿಸಿದರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ತನ್ನ ಹುಟ್ಟೂರಿನಲ್ಲಿ ಪೂರೈಸಿದ ಇವರು,ಮುಂಡಾಜೆ ಪದ ವಿ ಪೂರ್ವ ವಿದ್ಯಾಲಯದಲ್ಲಿ ಪಿಯುಸಿ ವಿಧ್ಯಾಭ್ಯಾಸ ವನ್ನು ಮುಗಿಸಿ,ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ಮಂಗಳೂರಿನಲ್ಲಿ ಕಾನೂನು ಪದವಿಯನ್ನು ಅಭ್ಯಸಿಸಿದ್ದಾರೆ. ಹುಟ್ಟಿನಿಂದ ಬಹಳ ಚುರುಕಿನ ವ್ಯಕ್ತಿತ್ವದವರಾದ,ಧೈರ್ಯಶಾಲಿ ಯಾದ ಇವರು ಪ್ರತಿಭಾನ್ವಿತ ವಿದ್ಯಾರ್ಥಿನಿ.ಜೀವನದಲ್ಲಿ ಏನೇ ಎಡರು ತೊಡರುಗಳನ್ನು ದಾಟಿ ಯಶಸ್ವಿಯಾಗಿ ….ಮುನ್ನುಗ್ಗಿದ ವರು..
ನೃತ್ಯ ಹಾಗೂ ಕ್ರೀಡೆಯಲ್ಲಿ ಪ್ರತಿ ಬಾರಿಯೂ ಬಹುಮಾನ ಪಡೆದಕೊಂಡ ಹೆಗ್ಗಳಿಕೆ ಇವರದ್ದು .ಸಂಗೀತ ಹಾಗೂ ನೃತ್ಯ ಕ್ಷೇತ್ರಗಳಲ್ಲಿ ಹಲವಾರು ಸನ್ಮಾನ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡವರು.ರಾಜ್ಯಮಟ್ಟದ ಕಬ್ಬಡಿ ಕ್ರೀಡಾಪಟು,ತ್ರೋಬಾಲ್ ಚಾಂಪಿಯನ್ ಶಿಪ್ ನ ಉತ್ತಮ ಆಟಗಾರ್ತಿ ಎಂಬ ಪ್ರಶಸ್ತಿಯನ್ನು ತನ್ನ ಮಡಿಲು ತುಂಬಿದ ಸಾಧಕಿ.

ಸುಮಾರು 1000 ಕ್ಕೂ ಜಾಸ್ತಿ ಮಕ್ಕಳಿಗೆ ಉಚಿತವಾಗಿ ನೃತ್ಯ ಕಲಿಸಿ,ಸುಮಾರು 800ಕ್ಕೂ ಹೆಚ್ಚು ನೃತ್ಯ ನಿರ್ದೇಶನ ಮಾಡಿ ವೇದಿಕೆಯಲ್ಲಿ ಪ್ರದರ್ಶನವನ್ನು ನೀಡಿರುತ್ತಾರೆ. ಪ್ರತಿಭೆಗಳ ಪಾಲಿಗೆ ಬೆಳಕಾಗುವ ಇವರು ಹಲವಾರು ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುತ್ತಿದ್ದಾರೆ.ಶಾಂಭವಿ ಕಿರುಚಿತ್ರದ ನಿರ್ಮಾಪಕರು ಹಾಗೂ ನಾಯಕಿಯೂ ಹೌದು.ಈ ಚಿತ್ರ ದ ಅಭಿನಯಕ್ಕಾಗಿ ಜೆಸಿಐ ಅಂತಾರಾಷ್ಟ್ರೀಯ ಕಿರುಚಿತ್ರ ಸ್ಪರ್ಧೆ ಯಲ್ಲಿ ಅತ್ಯುತ್ತಮ ನಟಿ ಎಂಬ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಇದಲ್ಲದೇ ಅವೆಷ್ಟೋ ಕಾರ್ಯಕ್ರಮಗಳ ನಿರೂಪಣೆಯನ್ನು ಮಾಡುತ್ತಾ ತನ್ನ ಮಾತಿನ ಸಿಹಿಯನ್ನು ಜನರಿಗೆ ಉಣಬಡಿಸಿದ್ದಾರೆ.ಶ್ರೀ ಶೈಲ ಪೊಡಕ್ಷನ್ ಯೂಟ್ಯೂಬ್ ಚಾನೆಲ್ ನ ಸಂಸ್ಥಾಪಕರು ಆಗಿದ್ದಾರೆ.ಹಲವಾರು ಸಂಗೀತ ಪ್ರತಿಭೆಗಳಿಗೆ ಅವಕಾಶ ಇತ್ತು,ಹಲವಾರು ಸಾಹಿತ್ಯಗಳಿಗೆ ಹಿನ್ನೆಲೆ ದ್ವನಿ ನೀಡಿರುತ್ತಾರೆ. ಧಾರ್ಮಿಕ ಪ್ರವಚನ ಮತ್ತು ಸ್ಫೂರ್ತಿದಾಯಕ ಭಾಷಣ, ದಿಕ್ಸೂಚಿ ಭಾಷಣಕಾರರಾಗಿದ್ದು,ಇವರು ಮಕ್ಕಳು, ಸಾರ್ವಜನಿಕರಿಗೆ,ಮಕ್ಕಳಿಗೆ, ಮಹಿಳೆಯರಿಗೆ ಲೆಕ್ಕವಿಲ್ಲದಷ್ಟು ತರಬೇತಿ ಶಿಬಿರವನ್ನು ಆಯೋಜಿಸಿದ್ದಾರೆ.

ಸಮಾಜ ನನಗೆ ಏನು ನೀಡಿದೆ ಅನ್ನೊದಕ್ಕಿಂತ, ನಾನು ಸಮಾಜಕ್ಕೆ ಏನನ್ನೂ ನೀಡುತ್ತೀನಿ ಅನ್ನೊದು ಮುಖ್ಯವಾಗುತ್ತೇ ಅನ್ನುವ ಶೈಲಜಾರವರು ನೊಂದ ಮನಸ್ಸುಗಳ ಕಣ್ಣೀರ ರಸದಾರೆಯನ್ನು ಒರೆಸುವ ಕೆಲಸವನ್ನು ಮಾಡುತ್ತಿದ್ದಾರೆ. ಕಳೆದ 15ವರ್ಷದ ಹಿಂದೆ ಇವರ ಕನಸಿನ ಕೂಸಾಗಿ ಸ್ಥಾಪಿತವಾದ “ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ.) ಬಾಳ್ತಿಲ ಇದನ್ನು ಹುಟ್ಟು ಹಾಕಿದ ಮಹಾನ್ ಚೈತನ್ಯ. ಈ ಸಂಸ್ಥೆಯ ಮೂಲಕ ಹಲವಾರು ಕ್ಯಾನ್ಸರ್ ಪೀಡಿತರಿಗೆ, ನೊಂದ ಮಹಿಳೆಯರಿಗೆ,ಬಡವರಿಗೆ ಆಶ್ರಮಗಳಿಗೆ ಸಹಾಯ ಮಾಡುವುದರ ಜೊತೆಗೆ ಹಲವಾರು ಜೀವ ಮತ್ತು ಜೀವನಗಳಿಗೆ ಬೆಳಕಾಗಿದ್ದಾರೆ. ಅದಲ್ಲದೇ ಲೆಕ್ಕವಿಲ್ಲದಷ್ಟು,ಕ್ಯಾನ್ಸರ್ ಪೀಡಿತರಿಗೆ ಧನ ಸಹಾಯ ರಕ್ತದೊತ್ತಡ ಮತ್ತು ರಕ್ತ ಪರೀಕ್ಷೆ,ರಕ್ತ ದಾನ ಶಿಬಿರ ಆರೋಗ್ಯ ಮಾಹಿತಿ ಮತ್ತು ವೃದ್ದಾಶ್ರಮದಲ್ಲಿ ಧನಸಹಾಯ, ನೊಂದ ಮಹಿಳೆಗೆ ಅಂಗವಿಕಲರಿಗೆ ಸಾಂತ್ವನ,ಬುದ್ಧಿಮಾಂದ್ಯ ರಿಗೆ, ಗಂಡ ಹೆಂಡತಿ ಸಮಸ್ಯೆಗೆ ಆಪ್ತ ಸಮಾಲೋಚನೆ ನಡೆಸಿ ಹಲವಾರು ಅಶಕ್ತರಿಗೆ ನೆರವಾದ ಹಿರಿಮೆ ಇವರದ್ದು.ಹಲವಾರು ಗಂಡ ಹೆಂಡತಿ ಸಮಸ್ಯೆಗೆ ಪರಿಹಾರ,ಹಲವಾರು ಹೆಣ್ಣುಮಕ್ಕಳ ನೋವಿಗೆ ಸ್ಪಂದಿಸುವುದು,ಇದನ್ನು ಕಂಡ ಹಲವಾರು ಸಂಘ ಸಂಸ್ಥೆಗಳು ಇವರ ಪ್ರತಿಭೆ,ಪ್ರೇರಣೆಯ ಮಾತಿಗಾಗಿ ಮೇರು ವ್ಯಕ್ತಿತ್ವವನ್ನು ಕಂಡು ನೆರೆಕರೆಯ ಊರು,ದೂರದ ಊರಿನವರು,ಶಾಲಾ ,ಕಾಲೇಜು ದೊಡ್ಡ ದೊಡ್ಡ ವಿದ್ಯಾ ಸಂಸ್ಥೆಗಳು ಆಳ್ವಾಸ್ ಕಾಲೇಜು,ಎಸ್ ಡಿ ಎಂ ,ಮೂಲ್ಕಿ ವಿಜಯ ಕಾಲೇಜು,ಸುರತ್ಕಲ್ ಗೋವಿಂದಾ ಸ ಕಾಲೇಜು,,ಹಲವಾರು ವಿದ್ಯಾಸಂಸ್ಥೆಗಳು….. ಇವರ ದಿಕ್ಸೂಚಿ ಭಾಷಣ ಕಾಗಿ ಬೇಡಿಕೆ ಇರುವವರು…..ಅಲ್ಲದೆ ದೇಶ ವಿದೇಶ ಗಳಿಂದಲೂ ಕೂಡ ಇವರು…ಬಹು ಬೇಡಿಕೆ ಯ ಅಭಿಮಾನಿಗಳ ಮನಸ್ಸನ್ನೂ ಗೆದ್ದಿರುವರು.

ಜೆ.ಸಿ.ಐ ಜೋಡುಮಾರ್ಗ ನೇತ್ರಾವತಿಯ ಪೂರ್ವ ಅಧ್ಯಕ್ಷರು ಆಗಿರುವ ಇವರು,ವಲಯ ತರಬೇತುದಾರ ರಾಗಿ ಹಲವಾರು ತರಬೇತಿಗಳನ್ನು, ಕಾರ್ಯಕ್ರಮಗಳನ್ನು ಸಮಾಜಸೇವೆಯನ್ನು ಮಾಡಿ,ಅಂತಾರಾಷ್ಟ್ರೀಯ ಪ್ರಶಸ್ತಿ ಗಳಾದ ರೈತ ಸ್ನೇಹಿ ಪುರಸ್ಕಾರ,ಸಿಲ್ವರ್ ಸ್ಟಾರ್ ಲೋಮ್ ಪ್ರಸಿಡೆಂಟ್, ಸ್ಪೀಚ್ ಕ್ರಾಪ್ಟ್ ಅವ್ಟ್ ಸ್ಟ್ಯಾಂಡಿಂಗ್ ಅವಾರ್ಡ್(speach craft outstanding award) ,”ಅತ್ಯುತ್ತಮ ಅಧ್ಯಕ್ಷೆ” ಪ್ರಶಸ್ತಿ, zone training outstanding leader award ಕೋರೋನಾ ಸಮಯದಲ್ಲಿ ಬಡಕುಟುಂಬಗಳಿಗೆ ಕಿಟ್ ವಿತರಣೆ ಮತ್ತು ಧನಸಹಾಯಕ್ಕಾಗಿ “ಜೀರೊ ಹಂಗರ್” ಪ್ರಶಸ್ತಿ, ಜನಸ್ನೇಹಿ ಪುರಸ್ಕಾರ ಅಲ್ಲದೇ ಹಲವಾರು ಸಂಘ ಸಂಸ್ಥೆಗಳಿಂದ ಹಲವಾರು ಸನ್ಮಾನ ಪ್ರಶಸ್ತಿಗಳು ಇವರಿಗೆ ಲಭಿಸಿವೆ.ಇವರ ಕಲಿತ ವಿದ್ಯಾಮಂದಿರದಲ್ಲಿಯೇ(mundaje pre university college ,belthangady) ಇವರನ್ನು ಗೌರವಿಸಿ ಸನ್ಮಾನಿಸಿದ ಕ್ಷಣವನ್ನು ಅವಿಸ್ಮರಣೀಯ ಕ್ಷಣವೆಂದು ಭಾವಿಸುತ್ತಾರೆ.

ನನ್ನ ಎಲ್ಲಾ ಸಾಧನೆಗೆ ನನ್ನ ತಂದೆಯೇ ಸ್ಪೂರ್ತಿ ಎನ್ನುವ ಇವರಿಗೆ ಸೋಲು ಮತ್ತು ಗೆಲುವಿನ ಸಮಾನಾಂತರ ಬೆಳವಣಿಗೆ ಮತ್ತು ಸಾಧಿಸಬೇಕೆಂಬ ಹಠ ಸ್ಪೂರ್ತಿ ಎಂದು ಹೇಳುತ್ತಾರೆ. ಕಳೆದ 15 ವರ್ಷಗಳಿಂದ ಬಿ.ಸಿ.ರೋಡ್ ನಲ್ಲಿ ನ್ಯಾಯವಾದಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಲ್ಲಿ ಆಪ್ತ ಸಮಾಲೋಚಕಿಯಾಗಿ(Mangalore,vitla,bcrd)ಕಾರ್ಯ ನಿರ್ವಹಿಸುತ್ತಿದ್ದಾರೆ.ಡಾ.ರಾಜೇಶ್ ಪೂಜಾರಿ(ಪತಿ) ಮತ್ತು ಶೌರ್ಯ,ಶ್ರೇಷ್ಠ ಎಂಬ ಮುದ್ದಾದ ಮಕ್ಕಳೊಂದಿಗೆ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.

ಸಮಾಜದಲ್ಲಿ ಯಾರು ನಿಜವಾಗಿಯೂ ನೊಂದಿರುತ್ತಾರೋ ಅವರಿಗೆ ನ್ಯಾಯ ಕೊಡಿಸಬೇಕು. ನಾವು ಮನುಷ್ಯರಾಗಿ ಇನ್ನೊಬ್ಬರ ಕಣ್ಣೀರನ್ನು ಒರೆಸಿ ನಗುವನ್ನು ಮೂಡಿಸಬೇಕೆ ಹೊರತು ಅವರ ಕಣ್ಣೀರಿಗೆ ನಾವು ಕಾರಣವಾಗಬಾರದು. ಮನುಷ್ಯ ಬುದ್ದಿ ಜೀವಿ,ಶ್ರಮ ಜೀವಿ. ಎಲ್ಲವೂ ಅನುಭವಿಸುವ ಭಾವನೆಗ ವ್ಯಕ್ತಿತ್ವ ಇರುವುದು ಮನುಷ್ಯನಿಗೆ.ಎಲ್ಲರೂ ಗೌರವ ,ಪ್ರೀತಿ ಮನುಷ್ಯತ್ವ ಮಾನವೀಯ ಮೌಲ್ಯ ಅಳವಡಿಸಿಕೊಂಡು ಎಲ್ಲರೂ ಖುಷಿಯಾಗಿ ಬಾಳಿ ಬದುಕಬೇಕು.

ಪ್ರೀತಿ ವಿಶ್ವಾಸದಿಂದ ಬಾಳಬೇಕು.ಯಾವುದೇ ತೊಂದರೆಯಾದರೂ ತಾಳ್ಮೆಯಿಂದ ಬಗೆಹರಿಸಬೇಕು. ತಾಳ್ಮೆಯಿಂದ ಜೀವನ ಗೆಲ್ಲಬಹುದು.ಪ್ರಯತ್ನ ಪಟ್ಟರೆ ಸಫಲತೆ ಖಂಡಿತ ಸಿಕ್ಕೇ ಸಿಗುತ್ತದೆ ಎಂದು ಹೇಳುವ ಶೈಲಜಾ ರಾಜೇಶ್ ರವರ ಸಮಾಜಮುಖಿ ಕಾರ್ಯಗಳು ನಿತ್ಯ ನಿರಂತರವಾಗಿರಲಿ.ದೈವ ದೇವರು ಇನ್ನಷ್ಟು ಕೆಲಸಕಾರ್ಯಗಳನ್ನು ಇವರಿಂದ ಮಾಡಿಸಲಿ ಎಂಬುದೇ ನನ್ನ ಹಾರೈಕೆ.
ವಾತ್ಸಲ್ಯಮಯಿಯ ಸಂಸ್ಥಾಪಕಿ, ಬಹುಪ್ರತಿಭೆಗಳ ಸಾಧಕಿ. ನೊಂದವರ ಬಾಳಿಗೆ ಭರವಸೆಯ ಬೆಳಕು. ನ್ಯಾಯದೇವತೆಯ ಕಣ್ಣು.ತುಳುನಾಡ ಬೆಳಗೋ ಸಮಾಜದ ಸೇವಕಿ ಶ್ರೀಮತಿ ಶೈಲಜಾ ರಾಜೇಶ್.ನಾಟ್ಯ ರಾಣಿ,ನೃತ್ಯ ತಾರೆ ,ರಾಜ್ಯ ಮಹಿಳಾ ರತ್ನ ಪ್ರಶಸ್ತಿ,ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಶಸ್ತಿ,ಅಂತಾರಾಷ್ಟ್ರೀಯ ಕಿರುಚಿತ್ರ ಅತ್ಯುತ್ತಮ ನಟಿ ಪ್ರಶಸ್ತಿ,ಪಡೆದಿರುತ್ತಾರೆ.ಹಲವಾರು ರಾಜ್ಯ,ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡಕೊಂಡ ಇವರು ಮಹಿಳೆಯರ ಸರ್ವತೋಮುಖ ಸೇವೆಯನ್ನು ಗುರುತಿಸಿ ಕರ್ನಾಟಕ ಸರಕಾರ ವು ,” ಅಂತಾರಾಷ್ಟ್ರೀಯ ಮಹಿಳಾ ದಿನಚರಣೆ ಯಂದು , ಸನ್ಮಾನ್ಯ ಬಸವರಾಜ್ ಬೊಮ್ಮಾಯಿ ಮಾಜಿ ಮುಖ್ಯ ಮಂತ್ರಿಯವರು, ಕರ್ನಾಟಕ ಸರಕಾರದ ಪ್ರತಿಷ್ಠಿತ “ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ” ಯನ್ನೂ ನೀಡಿ ಗೌರವಿಸಿದ್ದಾರೆ ಬಾಳ್ತಿಲ ಗ್ರಾಮದ ಅರ್ಧನಾರೀಶ್ವರ ದೇವಸ್ಥಾನದ ವಾಸುಕಿ ನಾಗಾಲಯದ ಆಡಳಿತ ಮೊಕ್ತೇಸರ ರು,ಅರ್ಧನಾರೀಶ್ವರ ದೇವಸ್ಥಾನ ದ ಆಡಳಿತ ಮೊಕ್ತೇಸರ ಆಗಿರುತ್ತಾರೆ.ದ.ಕ.ಜಿಲ್ಲಾ ಮೂರ್ತೆದಾರ ಸಹಕಾರಿ ಬ್ಯಾಂಕಿನ ನಿರ್ದೇಶಕರು ಆಗಿರುತ್ತಾರೆ.ಅಂತಾರಾಷ್ಟ್ರೀಯ ಸಂಸ್ತೆಯ ವಲಯ ತರಬೇತು ದಾರ ರಾಗಿ ಅತ್ಯುತ್ತಮ ನಾಯಕಿ ಪ್ರಶಸ್ತಿ ಪಡೆದ outstanding performance Nondige ತೇರ್ಗಡೆ ಹೊಂದಿರುತ್ತಾರೆ.4 ವರ್ಷ ದ ಫೇಸ್ಬುಕ್ ಪ್ರೇಮ ಪ್ರಕರಣ……ಮಂಗಳಮುಖಿ ಯೂ ಹೆಣ್ಣಿನ ಬಾಳಲ್ಲಿ ಚೆಲ್ಲಾಟ ಆಡಿ ಇದನ್ನು ಒಂದೇ ದಿನದಲ್ಲಿ ಅಂತ್ಯ ಕಾಣಿಸಿ ಮಾನಸಿಕ ಸಮತೋಲನ ಕಳೆದುಕೊಂಡ ಹೆಣ್ಣಿನ ಜೀವನ ಮತ್ತು ಮನೆಯವರನ್ನು ಕಾಪಾಡಿ ದ ಹಿರಿಮೆ ಇವರದ್ದು,……ಅಮ್ಮಾ ಎನ್ನುವ ಆಲ್ಬಂ .. ಸಾಂಗ್….ಅದರಲ್ಲಿ ನಿರ್ಮಾಪಕರಾಗಿ ಅಮ್ಮನಾಗಿ ಅಭಿನಯ….ಮಾಡಿ….. ಜನಮೆಚ್ಚುಗೆ ಗೆ ಪಾತ್ರರಾಗಿರುಗುತ್ತಾರೆ.ಶಾಂಭವಿ ಎನ್ನುವ ಕಿರುಚಿತ್ರವನ್ನು ನಿರ್ಮಾಣ ಮಾಡಿ ನಾಯಕಿಯ ಪಾತ್ರವನ್ನು ಅಭಿನಯಿಸಿ …ಹೆಣ್ಣು ಜೀವನದಲ್ಲಿ ಬರುವ ಸವಾಲುಗಳನ್ನು ….ಸ್ವಾಭಿಮಾನದಿಂದ ಹೇಗೆ ಎದುರಿಸಬಲ್ಲಲು..ಎಂಬುದನ್ನು ಸಾರುವಂತಹ ನೈಜ ಕತೆಯನ್ನು ಹೊಂದುವಂತಹ ಸಮಾಜಕ್ಕೆ ಸಂದೇಶ ವನ್ನೂ ಸಾರುವಂತಹ ಅದ್ಭುತ ಕತೆಯನ್ನು ….ಅದರ ಜೊತೆಗೆ ಹಲವಾರು ಪ್ರತಿಭೆಗಳಿಗೆ ಪ್ರೋತ್ಸಾಹ ವನ್ನು ನೀಡಿರುತ್ತಾರೆ….. ಪ್ರತಿಷ್ಠಿತ ಯುವವಾಹಿನಿ ಬಂಟ್ವಾಳ ಘಟಕದ ಸದಸ್ಯರು…ಆಗಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರ್ದೇಶಿಸಿ ಉಚಿತವಾಗಿ ವೇದಿಕೆ ಯಲ್ಲಿ ಪ್ರದರ್ಶನ ನೀಡಿರುತ್ತಾರೆ…… ಸುಮಾರು 12 ವರ್ಷಗಳಿಂದ ಪ್ರತಿಷ್ಠಿತ ಬಿಲ್ಲವ ಸಂಘ ದ ಸದಸ್ಯರಾಗಿದ್ದು. ಹಲವಾರು ಮಹಿಳೆಯರಿಗೆ ಉಚಿತವಾಗಿ ನೃತ್ಯಭಾಸ ಮಾಡಿಸಿ ಮಹಿಳೆಯ ರೆಲ್ಲರೂ ವೇದಿಕೆ ಏರುವಂತೆ ಮಾಡಿರುವ ಹಿರಿಮೆ ಇವರದ್ದು……ಮಹಿಳೆಯರು ಯಾರಿಗೂ ಕಮ್ಮಿ ಇಲ್ಲ ಕಷ್ಟ ಪಟ್ಟು, ಮನಸ್ಸಿತ್ತು ಸಾಧಿಸಿದರೆ ಎಲ್ಲವೂ ಸಾಧ್ಯ ಇದೆ

..ಎನ್ನುವ ಇವರು….. ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿಯ ಮಾಜಿ ಅಧ್ಯಕ್ಷರಾಗಿರುತ್ತಾರೆ.ರಾಷ್ಟ್ರೀಯ ಬಿಲ್ಲವರ ಮಹಾಮಂಡಲ (ರಿ) ಸಂಚಾಲಕರು ಆಗಿರುತ್ತಾರೆ. ಜವಾಹರ್ ಬಾಲ್ ಮಂಚ್ ನ ಜಿಲ್ಲಾ ಅಧ್ಯಕ್ಷರಾಗಿ ಮಕ್ಕಳ ಶ್ರೇಯೋಭಿವೃದ್ಧಿ ಗಾಗಿ ಶ್ರಮಿಸುತ್ತಿದ್ದಾರೆ ಇವರ ನೇತೃತ್ವದಲ್ಲಿ 25ಮಕ್ಕಳು ಜವಾಹರ್ ಬಾಲ್ ಮಂಚ್ ನ ವತಿಯಿಂದ ನಡೆದ ರಾಜ್ಯಮಟ್ಟದ ಮಕ್ಕಳೋತ್ಸವ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದು 5ಜನ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ರಾಜಸ್ಥಾನದಲ್ಲಿ ನಡೆದ ರಾಷ್ಟ್ರಮಟ್ಟದ ಮಕ್ಕಳೋತ್ಸವ ಕಾರ್ಯಕ್ರಮ ದಲ್ಲಿ ರಾಜ್ಯಮಟ್ಟದಲ್ಲಿ ಆಯ್ಕೆಯಾದ ಮಕ್ಕಳೊಂದಿಗೆ ಕರ್ನಾಟಕ ರಾಜ್ಯದಿಂದ ಆಯ್ಕೆಯಾಗಿರುತ್ತಾರೆ ಅಲ್ಲದೆ ಜಿಲ್ಲೆಯದ್ಯಂತ ಬೇರೆ ಬೇರೆ ತಾಲೂಕುಗಳಲ್ಲಿ ಮಕ್ಕಳ ಪ್ರತಿಭೆ ,ವ್ಯಕ್ತಿತ್ವ ವಿಕಸನ .ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಕ್ರೀಡಾ ಕ್ಷೇತ್ರಗಳಲ್ಲಿ ಅವಕಾಶಗಳನ್ನು ನೀಡುತ್ತಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version