Connect with us

ಇತರ

2026ರ ಜೂನ್​ 30ರೊಳಗೆ ಸಂಪೂರ್ಣ ರೈತರ ಸಾಲ ಮನ್ನಾ ಕುರಿತು ಅಂತಿಮ ನಿರ್ಧಾರ: ಮಹಾ ಸಿಎಂ ಘೋಷಣೆ

Published

on

ಪ್ರತಿಭಟನೆಗೆ ಸಿಕ್ಕ ಯಶಸ್ಸು: ಕೃಷಿ ಸಾಲ ಮನ್ನಾ ಮಾಡುವಂತೆ ಸರ್ಕಾರದ ಮುಂದೆ ಬೇಡಿಕೆ ಇಟ್ಟು ನಾಗ್ಪುರದಲ್ಲಿ ಮಾಜಿ ಶಾಸಕ ಬಚ್ಚು ಕಾಡು ಪ್ರತಿಭಟನೆ ನಡೆಸಿದ್ದರು. ಗುರುವಾರ ರಾತ್ರಿ ಬಚ್ಚು ಕಾಡು ನೇತೃತ್ವದಲ್ಲಿ ನಡೆದ ಸಭೆಯ ನಂತರ ಫಡ್ನವೀಸ್ ಈ ಘೋಷಣೆ ಮಾಡಿದ್ದಾರೆ. ಸಿಎಂ ಅವರ ಘೋಷಣೆ ನಮ್ಮ ಪ್ರತಿಭಟನೆಯ ದೊಡ್ಡ ಯಶಸ್ಸು ಎಂದು ಬಚ್ಚು ಕಾಡು ಹೇಳಿದ್ದಾರೆ.

ಸಭೆಯಲ್ಲಿ ಸಿಎಂ ಚರ್ಚೆಯ ಮೂಲಕ ಪರಿಹಾರವನ್ನು ಕಂಡುಕೊಳ್ಳುವಂತೆ ವಿನಂತಿಸಿದರು. ರೈತ ನಾಯಕರಾದ ರಾಜು ಶೆಟ್ಟಿ, ಡಾ. ಅಜಿತ್ ನವಲೆ, ವಾಮನ್‌ರಾವ್ ಚಟಪ್, ಸಂಸದ ಅಮರ್ ಕಾಳೆ, ಮಹಾದೇವ್ ಜಂಕರ್, ರವಿಕಾಂತ್ ತುಪ್ಕರ್ ಮತ್ತು ಇತರರು ಈ ಚರ್ಚೆಯಲ್ಲಿ ಭಾಗವಹಿಸಿದ್ದರು.

ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಕೃಷಿ ಸಾಲ ಮನ್ನಾ ಮಾಡುವ ಬಗ್ಗೆ ಭರವಸೆ ನೀಡಿದ್ದೆವು. ನಾವು ಅದಕ್ಕೆ ಬದ್ಧರಾಗಿದ್ದೇವೆ. MITRA CEO ಪ್ರವೀಣ್ ಪರದೇಶಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದೇವೆ, ಅದು ಏಪ್ರಿಲ್ 1ರೊಳಗೆ ನಮಗೆ ವರದಿಯನ್ನು ನೀಡುತ್ತದೆ. ಅದರ ಆಧಾರದ ಮೇಲೆ 2026 ಜೂನ್ 30ರೊಳಗೆ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version