Connect with us

ಇತರ

ಸರಕಾರಿ ಪ್ರೌಢಶಾಲೆ ಕಲ್ಪಣೆ ಸರ್ವೆ ರಾಜ್ಯೋತ್ಸವ , ಐ. ಡಿ. ವಿತರಣೆ

Published

on

ಸರ್ವೆ… ಸರಕಾರಿ ಪ್ರೌಢಶಾಲೆ ಕಲ್ಪಣೆ ಇದರಲ್ಲಿ ಕನ್ನಡ ರಾಜ್ಯೇೋತ್ಸವ ಕಾರ್ಯಕ್ರಮ ಶಾಲಾಭಿವೃದ್ದಿ ಸಮಿತಿ ಕಾರ್ಯಾದ್ಯಕ್ಷರಾದ ಸಿದ್ದೀಕ್ ಸುಲ್ತಾನ್ ಅವರ ಅದ್ಯಕ್ಷತೆಯಲ್ಲಿ ಜರುಗಿತು.

ಕನ್ನಡ ಪ್ರಾಧ್ಯಾಪಕರಾದ ನಳಿನಿ. ಡಿ. ಯವರು ರಾಜ್ಯೋತ್ಸವದ ಮಹತ್ವದ ಬಗ್ಗೆ ಮಾತನಾಡಿ ಸಂದೇಶ ಭಾಷಣ ಮಾಡಿದರು. ಮುಖ್ಯ ಅಧ್ಯಾಪಕಿ ಉಮಾವತಿ.ಎಲ್.ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿದರು.

 

ಪುತ್ತೂರು ರೋಟರಿ ಕ್ಲಬ್ ಸಂಸ್ಥೆಯ ಉಪಾದ್ಯಕ್ಷರಾದ ಪ್ರೊ. ದತ್ತಾತ್ರೇಯ ರಾವ್ , ಸದಸ್ಯರಾದ ಶ್ರೀಧರ ಕಣಜಾಲ್ , ಹೆರಾಲ್ಡ್ ಮಾಡ್ತಾ , ನಿವೃತ್ತ ಶಾರೀರಿಕ ಶಿಕ್ಷಕರಾದ ಸಹದೈವ್ ಹೆರಾಜೆ ಸಭೆಯನ್ನು ಉದ್ದೇಶಿಸಿ ಶುಭ ಹಾರೈಸಿ ಮಾತನಾಡಿದರು.

ರೋಟರಿ ಕ್ಲಬ್ ಸಂಸ್ಥೆಯ ವತಿಯಿಂದ ಮಕ್ಕಳಿಗೆ ಉಚಿತ ಐ. ಡಿ. ವಿತರಣೆ ಮಾಡಿದರು. ವಿದ್ಯಾರ್ಥಿಗಳಿಗೆ ಸರಕಾರ ಕೊಡಮಾಡಲಾದ ಶೂ , ಸಾಕ್ಸ್ ವಿತರಣೆ ಮಾಡಲಾಯಿತು.

ವೇದಿಕೆಯಲ್ಲಿ ಶಾಲಾಭಿವೃದ್ದಿ ಸಮಿತಿ ಸದಸ್ಯರಾದ ಅಝೀಝ್ ರೆಂಜಲಾಡಿ , ಅಬೂಬಕರ್ ಮುಸ್ಲಿಯಾರ್ , ಪೋಷಕರಾದ ಅಬ್ದುಲ್ ರಹೀಂ , ಹಸನ್ , ಅಧ್ಯಾಪಕರಾದ ಜಾರ್ಜ್ . ಕೆ. ವಿ, ಕಾಂಚನಾ. ಕೆ. ಸಿ, ಜ್ಯೋತಿ. ವಿ. ಪ್ರಭು ಉಪಸ್ಥಿತರಿದ್ದರು.

ಅಧ್ಯಾಪಕರಾದ ಉಮಾಶಂಕರ್.ಡಿ ಯವರು ಕಾರ್ಯಕ್ರಮ ನಿರೂಪಿಸಿ , ವೆಂಕಟೇಶ್. ಬಿ. ಯವರು ಧನ್ಯವಾದ ಗೈದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version