Connect with us

ಸ್ಥಳೀಯ

ಪುತ್ತೂರು ನಗರ ಸಭೆ ಆಡಳಿತ ಅವಧಿ ಮುಕ್ತಾಯ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿಯನ್ನು ನೇಮಕ ಮಾಡಿದ ಸರಕಾರ

Published

on

ಪುತ್ತೂರು:ಚುನಾಯಿತ ಕೌನ್ಸಿಲ್ ಅವಧಿಯು ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಪುತ್ತೂರು ನಗರಸಭೆ ಸೇರಿದಂತೆ 118 ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕಗೊಳಿಸಲಾಗಿದೆ.ಸ್ಥಳೀಯ ಸಂಸ್ಥೆಗಳಲ್ಲಿ ಹೊಸ ಚುನಾಯಿತ ಕೌನ್ಸಿಲ್ ಅಸ್ತಿತ್ವಕ್ಕೆ ಬರುವವರೆಗೂ ದಿನನಿತ್ಯದ ಕಾರ್ಯನಿರ್ವಹಣೆಗಾಗಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಆಡಳಿತದ ಹಿತದೃಷ್ಟಿಯಿಂದ ಆಡಳಿತಾಧಿಕಾರಿಗಳನ್ನು ನೇಮಿಸಿ ಸರ್ಕಾರ ಆದೇಶಿಸಿದೆ.


ಪುತ್ತೂರು ನಗರಸಭೆ ಸಹಿತ 42 ನಗರಸಭೆ, 53 ಪುರಸಭೆ ಮತ್ತು 23 ಪಟ್ಟಣ ಪಂಚಾಯತ್‌ಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ನಗರಾಭಿವೃದ್ಧಿ ಇಲಾಖೆ ಅಧಿನ ಕಾರ್ಯದರ್ಶಿ(ಎಂಎ-13)ಟಿ.ಮಂಜುನಾಥ ಅವರು ನ.6ರಂದು ಆದೇಶ ಹೊರಡಿಸಿದ್ದಾರೆ.ಈ ಕುರಿತ ಸರ್ಕಾರದ ಅಧಿಸೂಚನೆ(ಸಂಖ್ಯೆ:ನಅಇ 287 ಎಂಎಲ್‌ಆರ್ 2025) ನ.6ರ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾಗಿದೆ.ಪುತ್ತೂರು ನಗರಸಭೆಗೆ ಸಂಬಂಧಿಸಿ ನ.3ರಿಂದ ಅನ್ವಯವಾಗುವಂತೆ ದ.ಕ.ಜಿಲ್ಲಾಧಿಕಾರಿಯವರನ್ನು ಆಡಳಿತಾಧಿಕಾರಿಯಾಗಿ ನೇಮಕಗೊಳಿಸಲಾಗಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version