Connect with us

ಸ್ಥಳೀಯ

ಪುತ್ತೂರಿನಲ್ಲಿಗಾಂಜಾ.. ಗಜಾ.. ಗಜಾ..!!! ಗಾಂಜಾ ಮಾರಾಟ ಮಾಡುತಿದ್ದ ಪ್ರಸಾದ್ ಬಂಧನ

Published

on

ಪುತ್ತೂರು: ಆಟೋದಲ್ಲಿ ಗಾಂಜಾ ಸಾಗಿಸುತ್ತಿದ್ದ ಆಟೋ ಚಾಲಕನನ್ನು ಪೊಲೀಸರು ಬಂಧಿಸಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಕಡಬ ತಾಲೂಕಿನ ಸವಣೂರು ನಿವಾಸಿ ಪ್ರಸಾದ್ ಇ (35) ಎಂದು ಗುರುತಿಸಲಾಗಿದೆ


ಪ್ರಸಾದ್ ನ.8ರಂದು ಮಧ್ಯಾಹ್ನ ಸವಣೂರು ಕಡೆಯಿಂದ ಪುತ್ತೂರು ಕಡೆಗೆ ಆಟೋ ರಿಕ್ಷಾ ಒಂದರಲ್ಲಿ ನಿಷೇದಿತ ಮಾದಕ ವಸ್ತು ಗಾಂಜಾವನ್ನು ಸಾಗಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಜನಾರ್ಧನ ಕೆ.ಎಂ ರವರು ಸಿಬ್ಬಂದಿಯೊಂದಿಗೆ ತೆರಳಿ ಆಟೋ ರಿಕ್ಷಾವನ್ನು ತಡೆದು ಪರಿಶೀಲಿಸಿದಾಗ, ಸುಮಾರು 1 ಕೆಜಿ ಗಿಂತಲೂ ಮೇಲ್ಪಟ್ಟ ನಿಷೇದಿತ ಮಾದಕ ವಸ್ತು ಗಾಂಜಾ ಹಾಗೂ ಮಾರಕಾಯುಧವಾದ ಸುಮಾರು ಅಂದಾಜು 25 ಇಂಚು ಉದ್ದದ ತಲವಾರು ಪತ್ತೆಯಾಗಿರುತ್ತದೆ.

 

ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version