Published
10 months agoon
By
Akkare News
ಪುತ್ತೂರು ತಾಲೂಕಿನ ಕೋಡಿಂಬಾಡಿಯಲ್ಲಿ ಬನ್ನೂರು ರೈತರ ಸಹಕಾರಿ ಸೇವಾ ಸಂಘದಿಂದ ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಹೊಸ ಕಟ್ಟಡ ಬಿರುಸುತ್ತಿನಿಂದ ನಿರ್ಮಾಣವಾಗುತ್ತಿದೆ. ಇದಕ್ಕೆ ಗ್ರಾಮ ಪಂಚಾಯತಿಯಿಂದ ಯಾವುದೇ ಪರವಾನಿಗೆ ಪಡೆದಿಲ್ಲ. ಸಂಬಂಧಿಸಿದ ಇಲಾಖೆಯಿಂದ 9/11 ಆಗಿಲ್ಲ. ಕನ್ವರ್ಷನ್ ಕೂಡ ಆಗಿಲ್ಲ. ಅನಧಿಕೃತವಾಗಿ ಕಟ್ಟಡ ಕಟ್ಟುತ್ತಿರುವ ಬಗ್ಗೆ ಸಾರ್ವಜನಿಕರ ಮೂಲಕ ಬೆಳಕಿಗೆ ಬಂದಿದೆ.
ಇಬ್ಬರು ಗ್ರಾಮಸ್ಥರಿಂದ ಈ ಬಗ್ಗೆ ಪಂಚಾಯತಿಗೆ ದೂರು ಬಂದಿದ್ದು, ಇವರು ಪಂಚಾಯತಿಗೆ ಅರ್ಜಿ ಕೊಟ್ಟಿದ್ದಾರ?ಪರವಾನಿಗೆ ಪಡೆದುಕೊಂಡಿದ್ದಾರ. ಪರವಾನಿಗೆ ಪಡೆಯದೆ ಹೇಗೆ ಇದನ್ನು ಕಟ್ಟುತ್ತಿದ್ದಾರೆ ಎಂದು ಪರಿಶೀಲಿಸಬೇಕೆಂದು ಸಾಮಾನ್ಯ ಸಭೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ದೂರುದಾರರು ಪರವಾನಿಗೆ ಪಡೆದ ಬಗ್ಗೆ ಮಾಹಿತಿ ಕೇಳಿರುತ್ತಾರೆ ಮತ್ತು ಬನ್ನೂರು ಸೊಸೈಟಿಯವರು ಕೊಟ್ಟ ದಾಖಲೆಯ ಬಗ್ಗೆ ಮಾಹಿತಿ ಕೇಳಿರುತ್ತಾರೆ ಇದಕ್ಕೆ ಸ್ಪಂದಿಸಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಬನ್ನೂರು ಸೊಸೈಟಿ ಅವರಿಂದ ಯಾವುದೇ ರೀತಿಯ ದಾಖಲೆ, ಅರ್ಜಿ ಪಂಚಾಯಿತಿಗೆ ಬಂದಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಸದಸ್ಯರೊಬ್ಬರು ಹಾಗಾದರೆ ಕಟ್ಟಡವನ್ನು ನಿಲ್ಲಿಸಿದವರು ಯಾರು ಎಂದು ಪ್ರಶ್ನೆ ಕೇಳಿರುತ್ತಾರೆ .
ಇದಕ್ಕೆ ಸಂಬಂಧಪಟ್ಟಂತೆ ಪಂಚಾಯತಿ ಅಧಿಕಾರಿಗಳು ಕಟ್ಟಡವನ್ನು ನಿಲ್ಲಿಸಲು ತಿಳಿಸಿಲ್ಲ .ಅವರಿಗೆ ಬೇರೆ ಇಲಾಖೆಯಿಂದ ಮಾಹಿತಿ ಬಂದಿರಬಹುದೆಂದು ಗಮನ ತಂದರು. ಕೋಡಿಂಬಾಡಿ ಗ್ರಾಮ ಪಂಚಾಯತಿಯಿಂದ ಬನ್ನೂರು ಸೊಸೈಟಿಯ ನೂತನ ಕಟ್ಟಡವನ್ನು ನಿಲ್ಲಿಸಲು ನೋಟಿಸಿ ನೀಡಿರುವುದಿಲ್ಲ, ಕೆಲವರು ಕಟ್ಟಡ ಪರವಣಿಗೆಗೆ ಪಂಚಾಯತಿಗೆ ಅರ್ಜಿಯನ್ನು , ಸಂಬಂಧ ಪಟ್ಟ ದಾಖಲೆ ಗಳನ್ನು ಕೊಟ್ಟು ಪಡೆದುಕೊಳ್ಳಬೇಕೆಂಬ ಮಾಹಿತಿ ಇಲ್ಲದ ಕಾರಣ ಕಟ್ಟುತ್ತಾರೆ,ಎಂದು ತಿಳಿದು ಬಂದಿರುತ್ತದೆ,,ಬನ್ನೂರು ಸೊಸೈಟಿಯವರಿಗೆ ಯಾವುದೇ ಮಾಹಿತಿ ಕೊರತೆಯಿಂದ ಕಾರಣ ಕಟ್ಟಡವನ್ನು ಕಟ್ಟಿರುತ್ತಾರೆ ಅಂತ ತಿಳಿದು ಬಂದಿದೆ. ಸಭೆಯಲ್ಲಿ ಚರ್ಚೆಯಾಗಿ ಸೊಸೈಟಿ ಕಟ್ಟಡಕ್ಕೆ ಯಾವುದೇ ನೋಟಿಸ್ ನ್ನು ಕೊಡುವುದು ಬೇಡ ಎಂದು ನಿರ್ಣಯಿಸಲಾಗಿದೆ.
ದೂರುದಾರರ ಹೇಳಿಕೆ :
ನಾನು ಬನ್ನೂರು ರೈತ ಸಹಕಾರಿ ಸಂಘದ ಕೋಡಿಂಬಾಡಿ ನಿರ್ಮಿಸುತ್ತಿರುವ ಅಕ್ರಮ ಕಟ್ಟಡದ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್, ಸಹಕಾರ ಆಯುಕ್ತ ಕಚೇರಿ, ಕಾರ್ಮಿಕ ಇಲಾಖೆ ಗಳಿಗೆ ದೂರು ನೀಡಿದ್ದು, ಇದರ ಬಗ್ಗೆ ಕೆಲವು ಇಲಾಖೆಯೂ ನನಗೆ ಮಾಹಿತಿ ನೀಡಿರುತ್ತಾರೆ. ಬನ್ನೂರು ಸೊಸೈಟಿಯವರು ನಮಗೆ “ತಿಳುವಳಿಕೆ “ಇಲ್ಲದ ಕಾರಣ ಕಟ್ಟಿದ್ದೇವೆ ಎಂಬ, “ತಪ್ಪೋಪ್ಪಿಗೆ” ನೀಡಿರುತ್ತಾರೆ ಎಂಬ ಮಾಹಿತಿಯನ್ನು ನಮಗೆ ಕೊಟ್ಟಿದ್ದಾರೆ, ಸೊಸೈಟಿಯ ಅಧ್ಯಕ್ಷರು+ ಕಾರ್ಯನಿರ್ವನಧಿಕಾರಿಗಳಿಗೆ ಇಂತಹ ಸಾಮಾನ್ಯ ಜ್ಞಾನವಿಲ್ಲದೆ ವಿದ್ದರೆ, ಕೋಟ್ಯಂತರ ರೂಪಾಯಿ ವ್ಯವಹಾರ ಮಾಡುವ ನಮ್ಮ ಸಂಘದ ರೈತ ಶೇರ್ ದಾರರ ಭವಿಷ್ಯ ಏನೆಂದು ಅಚ್ಚರಿ ವ್ಯಕ್ತಪಡಿಸಿ, ಹೋರಾಟ ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ.