Connect with us

ಇತರ

ನಗರಸಭೆ ಆಡಳಿತಾಧಿಕಾರಿಯಾಗಿ ಡಿ ಸಿ ಅಧಿಕಾರ ಸ್ವೀಕಾರ

Published

on

ಪುತ್ತೂರು: ನಗರಸಭೆ ಆಡಳಿತ ಅವಧಿ ಮುಗಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್ ವಿ ನ.14 ರಂದು ಅಧಿಕಾರ ಸ್ವೀಕಾರ ಮಾಡಿದ್ದಾರೆ.

ನ.2 ರಂದು ನಗರಸಭೆ ಸದಸ್ಯರ ಆಡಳಿತ ಅವಧಿ ಮುಕ್ತಾಯಯಾಗೊಂಡಿತ್ತು. ನ.14 ರಂದು ಅವರು ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿ ನಗರಸಭೆ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ನಗರಸಭೆ ಪೌರಾಯುಕ್ತ ವಿದ್ಯಾ ಎಂ ಕಾಳೆ ಅವರು ತಾಲೂಕು ಆಡಳಿತ ಸೌಧಕ್ಕೆ ತೆರಳಿ ಜಿಲ್ಲಾಧಿಕಾರಿಯವರಿಗೆ ಕಡತ ನೀಡಿದರು.

ಜಿಲ್ಲಾಧಿಕಾರಿಯವರು ಆಡಳಿತಾಧಿಕಾರಿಯಾಗಿ ಸಹಿ ಹಾಕಿದ್ದಾರೆ. ಜಿಲ್ಲಾಧಿಕಾರಿಯವರು ಸಂಜೆ ನಗರಸಭೆ ಕಚೇರಿಗೆ ಬರುವುದಾಗಿ ಮಾಹಿತಿ ಲಭ್ಯವಾಗಿತ್ತು. ಆದರೆ ಅವರು ನಗರಸಭೆ ಕಚೇರಿಗೆ ಬಾರದೆ ತಾಲೂಕು ಆಡಳಿತ ಸೌಧದಿಂದಲೇ ಮಂಗಳೂರಿಗೆ ತೆರಳಿದರು. ನ.3 ರಂದು ಅವರು ಅಧಿಕಾರ ಪಡೆಯಬೇಕಾಗಿತ್ತು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version