Connect with us

ಸ್ಥಳೀಯ

ಕಾವಳಕಟ್ಟೆಯಲ್ಲಿ ಕಾರು – ದ್ವಿಚಕ್ರ ನಡುವೆ ಭೀಕರ ಅಪಘಾತ : ವಿದ್ಯಾರ್ಥಿನಿ ಸಾವು,ಓರ್ವ ಗಂಭೀರ

Published

on

ಬಂಟ್ವಾಳ: ಕಾವಳಕಟ್ಟೆ ಎನ್.ಸಿ‌.ರೋಡ್ ಎಂಬಲ್ಲಿ ಕಾರು ಹಾಗೂ ದ್ವಿಚಕ್ರ ವಾಹನಗಳ ನಡುವೆ ಅಪಘಾತದಲ್ಲಿ ದ್ವಿಚಕ್ರ ಸವಾರಿ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿನಿಯರ ಪೈಕಿ ಓರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದ್ದು, ಇನ್ನೊಬ್ಬರು ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಡಬ ನಿವಾಸಿ ಅನನ್ಯ (21)ಎಂಬವರು ಸ್ಥಳದಲ್ಲಿ ಮೃತಪಟ್ಟರೆ, ಬೆಳ್ತಂಗಡಿ ನಿವಾಸಿ ಪೃಥ್ವಿ ರಾವ್ ಅವರು ಮಂಗಳೂರು ಆಸ್ಪತ್ರೆಯಲ್ಲಿ ‌ಚಿಕಿತ್ಸೆ ಪಡೆಯುತ್ತಿದ್ದಾರೆ.

ಎನ್.ಸಿ.ರೋಡ್ ತಿರುವು ಅಪಾಯಕಾರಿಯಾಗಿದ್ದು ಅನೇಕ ಅಪಘಾತಗಳು ಸಂಭವಿಸಿವೆ.

ಇಬ್ಬರೂ ‌ಕೂಡ ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿನಿಯರಾಗಿದ್ದು ಬೆಳ್ತಂಗಡಿಯಿಂದ ಕಾಲೇಜಿಗೆ ಹೋಗುವ ವೇಳೆ ಎನ್.ಸಿ.ರೋಡ್ ತಿರುವಿನಲ್ಲಿ ವ್ಯಾಗನಾರ್ ಕಾರು ಮತ್ತು ಹೊಂಡಾ‌ಆಕ್ಟೀವ್ ಮಧ್ಯೆ ಅಪಘಾತ ಸಂಭವಿಸಿದೆ.

‌‌‌‌ಸ್ಥಳಕ್ಕೆ ಪುಂಜಾಲಕಟ್ಟೆ ಎಸ್.ಐ.ರಾಜೇಶ್ ಕೆ.ವಿ. ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version