Connect with us

ಇತರ

ಇಂದು (ನ19) ಕೋಡಿಂಬಾಡಿಯಲ್ಲಿ ಅಶೋಕ ಜನ-ಮನ 2025 ಕೋಡಿಂಬಾಡಿ,ಬೆಳ್ಳಿಪ್ಪಾಡಿ ಗ್ರಾಮದವರಿಗೆ ಉಡುಗೋರೆ ವಿತರಣೆಗೆ ಚಾಲನೆ ಬೆಳಿಗ್ಗೆ 10 ರಿಂದ 12 ರ ವರೆಗೆ ಮಾತ್ರ

Published

on

ಪುತ್ತೂರು: ಅ.20ರಂದು ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದ ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ದೀಪಾವಳಿ ಪ್ರಯುಕ್ತ ನಡೆದ ಅಶೋಕ ಜನಮನ 2025 ದೀಪಾವಳಿ ವಸ್ತ್ರ ವಿತರಣಾ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕ ಬಂಧುಗಳಿಗೆ ವಸ್ತ್ರ ಹಾಗೂ ಉಡುಗೋರೆಯನ್ನು ನೀಡಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಹಲವು ಗಣ್ಯರು ಭಾಗವಹಿಸಿದ್ಧರು. ಈ ಕಾರ್ಯಕ್ರಮದಲ್ಲಿ ನಿರೀಕ್ಷೆಗೂ‌ಮೀರಿದ ಜನ ಹಾಗೂ ವಿಪರೀತ ಮಳೆಯ ಕಾರಣಕ್ಕೆ ಕಾರ್ಯಕ್ರಮಕ್ಕೆ ಬಂದಿದ್ದ ಹಲವಾರು ಮಂದಿ ಉಡುಗೋರೆ ಪಡೆಯಲು ಸಾಧ್ಯವಾಗದೆ ಮರಳಿದ್ದಾರೆ. ಹಲವು ಮಂದಿ ಸುಮಾರು ಹೊತ್ತಿನ ವರೆಗೆ ಕಾದರೂ ಜನಸಂದಣಿಯ ನಡುವೆ ಉಡುಗೋರೆ ಪಡೆಯಲು ಸಾಧ್ಯವಾಗದೆ ಇರುವ ಕಾರಣ ದಿಂದ ಈ ಉಡುಗೋರೆಯನ್ನು ಪ್ರತೀ ಗ್ರಾಮಕ್ಕೆ ತೆರಳಿ ವಿತರಣೆ ಮಾಡಲು ನಿರ್ಧರಿಸಲಾಗಿದೆ.

ಇಂದು ಕೋಡಿಂಬಾಡಿಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾಣ ಕೈಗೊಳ್ಳಲಾಗಿದೆ. ನವೆಂಬರ್ 19 ರಂದು ಪ್ರಾರಂಭಿಕ ಹಂತವಾಗಿ ಕೋಡಿಂಬಾಡಿ ಮತ್ತು ಬೆಳ್ಳಿಪ್ಪಾಡಿ ಗ್ರಾಮದಲ್ಲಿ ಉಡುಗೋರೆ ವಿತರಿಸಲು ತೀರ್ಮಾನ ಮಾಡಲಾಗಿದೆ.

ವಿತರಣೆ ಹೇಗೆ?

. ಈ ಉಡುಗೊರೆ ವಿತರಣೆಗೆ ಯಾವುದೇ ಜಾತಿ, ಧರ್ಮ, ಪಕ್ಷ, ಹಾಗೂ ಬಡವ-ಬಲ್ಲಿದ ಎಂಬ ನಿರ್ಬಂಧವಿರುವುದಿಲ್ಲ.

ಕೋಡಿಂಬಾಡಿ ಮತ್ತು ಬೆಳ್ಳಿಪ್ಪಾಡಿ ಗ್ರಾಮಸ್ಥರನ್ನು ಹೊರತುಪಡಿಸಿ ಬೇರೆ ಗ್ರಾಮದವರಿಗೆ ಇಲ್ಲಿ ಅವಕಾಶವಿಲ್ಲ

ಪುರಾವೆಗಾಗಿ ಆಧಾರ್ ಕಾರ್ಡ್ ಅಥವಾ ಓಟರ್ ಐಡಿಯನ್ನು ಕಡ್ಡಾಯವಾಗಿ ತರಬೇಕಾಗಿದೆ

ಗ್ರಾಮದ ಪ್ರತೀ ಮನೆಯ ಮಕ್ಕಳು, ಹಿರಿಯರು ಸೇರಿದಂತೆ ಎಲ್ಲಾ ಸದಸ್ಯರಿಗೂ ಅವಕಾಶವಿರುತ್ತದೆ.

ಕಾರ್ಯಕ್ರಮದ ಸಂದರ್ಭ ಸ್ಥಳದಲ್ಲಿ ಉಪಸ್ಥಿತರಿಗೆ ಮಾತ್ರ ಅವಕಾಶವಿರುತ್ತದೆ.

ಅಶೋಕ ಜನಮನ ಕಾರ್ಯಕ್ರಮದಲ್ಲಿ‌ ನಿರೀಕ್ಷೆಗೂ ಮೀರಿದ‌ಜನ ಮತ್ತು ವಿಪರೀತ ಮಳೆಯ ಕಾರಣಕ್ಕೆ ಕಾರ್ಯಕ್ರಮಕ್ಕೆ ಬಂದಿದ್ದ ಹಲವಾರು‌ಮಂದಿಗೆ ಉಡುಗೋರೆ ನೀಡಲು ಸಾಧ್ಯವಾಗಿಲ್ಲ ಈ ಬಗ್ಗೆ ನಾನು ವಿಷಾಧವನ್ನೂ ವ್ಯಕ್ತಪಡಿಸಿ, ಉಡುಗೋರೆ ಸರಿಯಾಗಿ ವಿತರಣೆಯಾಗದ ಕಾರಣ ಗ್ರಾಮ ಗ್ರಾಮಕ್ಕೆ ತೆರಳಿ ಉಡುಗೋರೆ ವಿತರಣೆ ಮಾಡುವುದಾಗಿ ಹೇಳಿದ್ದೆ. ಇದೀಗ ಆರಂಭಿಕವಾಗಿ ನ.19 ಕ್ಕೆ ಕೋಡಿಂಬಾಡಿ ಮತ್ತು ಬೆಳ್ಳಿಪ್ಪಾಡಿ ಗ್ರಾಮಸ್ಥರಿಗೆ ಉಡುಗೋರೆ ವಿತರಿಸಲು ತೀರ್ಮಾನಿಸಿದ್ದು ,ಮುಂದಿನ ದಿನಗಳಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತೀ ಗ್ರಾಮದಲ್ಲೂ ಉಡುಗೋರೆ ವಿತರಣೆ ಮಾಡಲಿದ್ದೇವೆ. ಗ್ರಾಮಸ್ಥರು ಹೆಚ್ಷಿನ‌ಸಂಖ್ಯೆಯಲ್ಲಿ ಭಾಗವಹಿಸಿ ಉಡುಗೋರೆ ಪಡೆದುಕೊಳ್ಳುವಂತೆ ವಿನಂತಿ ಮಾಡುತ್ತಿದ್ದೇನೆ.

ಅಶೋಕ್ ರೈ ಶಾಸಕರು,ಪುತ್ತೂರು

ಶಾಸಕ ಅಶೋಕ್ ರೈ ಸೂಚನೆಯಂತೆ ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಶೋಕ ಜನಮನದಲ್ಲಿ ಉಡುಗೋರೆ ವಿತರಣೆಯಲ್ಲಿ ಸ್ಚಲ್ಪ ತೊಂದರೆಯಾಗಿತ್ತು. ಉಡುಗೋರೆ ಸಿಗದ ಗ್ರಾಮಸ್ಥರಿಗೆ‌ ಪ್ರತೀ ಗ್ರಾಮಕ್ಕೆ ತೆರಳಿ ಉಡುಗೋರೆ ವಿತರಣೆ ಮಾಡಲಿದ್ದು ಸಾರ್ವಜನಿಕರು ಸಹಕರಿಸಿ ಕಾರ್ಯಕ್ರಮದಲ್ಲಿ‌ಭಾಗವಹಿಸಬೇಕಾಗಿ ವಿನಂತಿ

ಸುದೇಶ್ ಶೆಟ್ಟಿ, ಕಾರ್ಯಾಧ್ಯಕ್ಷರು, ರೈ ಚಾರಿಟೇಬಲ್ ಟ್ರಸ್ಟ್

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version