Published
3 months agoon
By
Akkare News
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ಎಸ್.ಐಟಿ ಅಧಿಕಾರಿಗಳಿಂದ ಬಂಧಿತನಾಗಿ ಶಿವಮೊಗ್ಗ ಜೈಲಿನಲ್ಲಿರುವ ಚಿನ್ನಯ್ಯ ನಿಗೆ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಕಾನೂನು ಬಾಹಿರವಾಗಿ ಹೂತುಹಾಕಲಾಗಿದೆ ಎಂದು ದೂರು ನೀಡಿದ್ದನು. ಬಳಿಕ ಸಾಕ್ಷಿ ದೂರುದಾರನಾಗಿ ಉತ್ಪನನಕ್ಕೆ ಕಾರಣವಾಗಿದ್ದ ಚಿನ್ನಯ್ಯನನ್ನು ಆರೋಪಿ ಎಂಬ ಹೆಸರಿನಲ್ಲಿ ಬಂಧಿಸಲಾಗಿತ್ತು. ಆತನ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು.
ಆರೋಪಿ ಚೆನ್ನಯ್ಯಗೆ ಜಾಮೀನು ನೀಡಬೇಕೆಂದು ಕಾನೂನು ಸೇವ ಪ್ರಾಧಿಕಾರದ ಪ್ರತಿ ಕ್ಷಣ ವಕೀಲರು ಬೆಳ್ತಂಗಡಿ ಕೋಟಿಗೆ ಅರ್ಜಿ ಸಲ್ಲಿಸಿದರು. ಇದಕ್ಕೆ ತಕರಾರು ತೆಗೆದ ಎಸ್ಐಟಿ ಪರ ಸರ್ಕಾರಿ ವಕೀಲರಾದ ದಿವ್ಯಜ ಹೆಡ್ಡೆ ಈ ಪ್ರಕರಣದ ಬಗ್ಗೆ ಎಸ್ಐಟಿ ತನಿಖೆ ಮಾಡಿ ಸಂಪೂರ್ಣ ಮಾಹಿತಿ ಉಳ್ಳ ವರದಿ ಕೋಟಿಗೆ ಸಲ್ಲಿಸಿದ್ದು, ಇದರಲ್ಲಿ ಆರೋಪಿ ಚಿನ್ನಯ್ಯ ವಿರುದ್ಧ ಸಾಕ್ಷಾಧಾರ ಕಂಡುಬಂದಿದ್ದು ಆರೋಪಿಗೆ ಜಾಮೀನು ನೀಡಬಾರದು ಹಾಗೂ ಹೆಚ್ಚಿನ ಲಿಖಿತ ತಕರಾರು ಮತ್ತು ವಾದ ಮಂಡಿಸಲು ಸಮಯಾವಕಾಶ ನೀಡಬೇಕು ಎಂದು ಕೋರಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ವಿಜಯೇಂದ್ರ ಟಿ ಎಚ್ ಅವರು ನ.24ರ ಸೋಮವಾರಕ್ಕೆ (ಇಂದು) ಸಮಯ ನಿಗದಿಪಡಿಸಿದ್ದರು. ಇದೀಗ ಆತನ ಜಾಮೀನು ಅರ್ಜಿ ಜಿಲ್ಲಾ ನ್ಯಾಯಾಲಯದಲ್ಲಿ ಪುರಸ್ಕೃತಗೊಂಡಿರುವುದಾಗಿ ಮಾಹಿತಿ ಲಭ್ಯವಾಗಿದೆ. 12 ಷರತ್ತುಗಳನ್ನಿಟ್ಟು ಜಾಮೀನು ಮಂಜೂರುಗೊಂಡಿದ್ದು, 1 ಲಕ್ಷ ಬಾಂಡ್ ಇಡಲು ತಿಳಿಸಲಾಗಿದೆ.