Connect with us

ಇತರ

ಕಂಕನಾಡಿ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಮಹಾತ್ಮ ಗಾಂಧಿ ಮತ್ತು ಶ್ರೀ ನಾರಾಯಣ ಗುರು ಸಂವಾದ ಶತಮಾನೋತ್ಸವ ಕಾರ್ಯಕ್ರಮದ ಯಶಸ್ವಿಗೆ ವಿಶೇಷ ಪ್ರಾರ್ಥನೆ

Published

on

ಭಾರತದ ರಾಷ್ಟ್ರಪಿತಮಹಾತ್ಮ ಗಾಂಧಿ ಮತ್ತು ಮಹಾನ್ ದಾರ್ಶನಿಕ ಸಂತ ಶ್ರೀ ನಾರಾಯಣ ಗುರು ಇವರಿಬ್ಬರಿಗೂ ಒಟ್ಟಾಗಿ ಪೂಜೆ ಸಲ್ಲಿಕೆಯಾಗುವ ಏಕೈಕ ಪವಿತ್ರ ಕ್ಷೇತ್ರ ಬ್ರಹ್ಮ ಬೈದರ್ಕಳ ಕಂಕನಾಡಿ ಗರಡಿ ಕ್ಷೇತ್ರದಲ್ಲಿ ಡಿಸೆಂಬರ್ 2 ಮಂಗಳವಾರ ಶತಮಾನದ ಮಹಾ ಪ್ರಸ್ಥಾನ ಗುರು-ಗಾಂಧಿ ಸಂವಾದದ ಕಾರ್ಯಕ್ರಮದ ಯಶಸ್ವಿಗೆ ಗರಡಿ ಕ್ಷೇತ್ರದ ಅಧ್ಯಕ್ಷರಾದ ಚಿತ್ತರಂಜನ್ ಕೆ ಇವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ಪೂಜಾರಿ, ಶ್ರೀ ಗೆಜ್ಜೆಗಿರಿ ಕ್ಷೇತ್ರದ ಅಧ್ಯಕ್ಷರಾದ ರವಿಪೂಜಾರಿ ಚಿಲಿಂಬಿ, ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಕದ್ರಿ ಶ್ರೀ ಮಂಜುನಾಥ ಕ್ಷೇತ್ರದ ಮುಕ್ತೇಸರ ರಾಜೇಂದ್ರ ಚಿಲಿಂಬಿ, ವಕೀಲರಾದ ಸುಧೀರ್ ಮರೊಳ್ಳಿ, ಗರಡಿ ಕ್ಷೇತ್ರದ ಮುಕ್ತೇಸರುಗಳಾದ ಕಿಶೋರ್ ಮಜಿಲ, ದಿವರಾಜ್, ಜೆ ದಿನೇಶ್ ಅಂಚನ್, ಚಂದ್ರನಾಥ ಅತ್ತಾವ,ರ ಮಂಗಳೂರು ಮಹಾನಗರ ಪಾಲಿಕೆಯ ನಿಕಟಪೂರ್ವ ಸದಸ್ಯರುಗಳಾದ ಪ್ರವೀಣ್ ಚಂದ್ರ ಆಳ್ವ ಕೇಶವ ಮರೋಲಿ ಸಂದೀಪ್ ಗರೋಡಿ, ಹೇಮಂತ್ ಗರೋಡಿ, ಕಂಕನಾಡಿ ಬಿಲ್ಲವ ಸಂಘದ ಅಧ್ಯಕ್ಷ ಜನಾರ್ದನ ಎಸ್ ಕೋಟ್ಯಾನ್, ವಸಂತ ಪೂಜಾರಿ, ಹರೀಶ್ ಕೆ ಪೂಜಾರಿ,ರವಿರಾಜ್ ದಂಬೆಲ್,ಯೋಗೀಶ್ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version