Published
3 months agoon
By
Akkare News
ವಜ್ರಾದಪಿ ಕಠೋರಾಣಿ’ ಎಂಬ ಮಾತಿದೆ. ಅಂದರೆ ಲೋಹಗಳಲ್ಲೇ ವಜ್ರ ಅತ್ಯಂತ ಕಠಿಣವಾದದ್ದು ಎಂಬುದು ಇದರ ಅರ್ಥ. ಆದರೆ ವಿಶೇಷವೆಂದರೆ ಸುಕೋಮಲೆಯಾದ ಸ್ತ್ರೀ ಆಕರ್ಷಕ ವಜ್ರಾಭರಣಗಳನ್ನು ತೊಟ್ಟುಕೊಂಡ ಸಂದರ್ಭದಲ್ಲಿ ಈ ಗಾದೆಗೆ ಒಂದು ಪರಿಪೂರ್ಣತೆ ಸಿಗುತ್ತದೆ. ‘ವಜ್ರಾದಪಿ ಕಠೋರಾಣಿ, ಮೃದೂನಿ ಕುಸುಮಾದಪಿ’ – ಕುಸುಮದಂತೆ ಮೃದುವಾಗಿರುವ ಸ್ತ್ರೀಯ ಅಂದವನ್ನು ಇನ್ನಷ್ಟು ಇಮ್ಮಡಿಗೊಳಿಸುವುದು ವಜ್ರಾಭರಣಗಳು. ಪ್ರಾಚಿನ ಕಾಲದಿಂದಲೂ ವಜ್ರ ತನ್ನದೇ ಆದ ಮೌಲ್ಯವನ್ನು ಉಳಿಸಿಕೊಂಡು ಬಂದಿದೆ. ಇತ್ತೀಚಿನ ದಿನಗಳಲ್ಲಿ ವಜ್ರಾಭರಣಗಳ ಖರೀದಿ ಒಂದು ಟ್ರೆಂಡ್ ಆಗಿ ಬದಲಾಗಿದೆ. ಈ ಟ್ರೆಂಡನ್ನು ಇನ್ನಷ್ಟು ಝಗಮಗಿಸಲು ಬಂದಿದೆ ಜಿ.ಎಲ್. ಆಚಾರ್ಯ ಗ್ಲೋ ಫೆಸ್ಟ್, ವಿನೂತನ ವಜ್ರಾಭರಣಗಳ ಪ್ರದರ್ಶನ ಹಾಗೂ ಮಾರಾಟ ಮೇಳ. ಪುತ್ತೂರು ಸೇರಿದಂತೆ ಹತ್ತೂರಿನಲ್ಲೂ ಚಿನ್ನಾಭರಣ ಮಾರಾಟ ಕ್ಷೇತ್ರದಲ್ಲಿ ವಜ್ರದಂತೆ ಬೆಳಗುತ್ತಿರುವ ಜೆ.ಎಲ್. ಆಚಾರ್ಯ ಜ್ಯುವೆಲ್ಸ್‌ನಲ್ಲಿ ‘ಗ್ಲೋ ಫೆಸ್ಟ್’ ಪ್ರಭೆ ಬೆಳಗಲಿದೆ.
ಹೌದು, ಡಿ.15 ರಂದು ಪುತ್ತೂರಿನ ಮುಖ್ಯರಸ್ತೆಯಲ್ಲಿರುವ ಜಿಎಲ್ ಆಚಾರ್ಯ ಜ್ಯುವೆಲ್ಲರ್‍ಸ್‌ನಲ್ಲಿ ವಜ್ರಾಭರಣಗಳ ವಾರ್ಷಿಕ ಮಹೋತ್ಸವ ಪ್ರಾರಂಭಗೊಳ್ಳಲಿದ್ದು, ಜ.15ರ ವರೆಗೆ ಗ್ರಾಹಕರು ತಮಗಿಷ್ಟವಾದ ವಜ್ರಾಭರಣಗಳನ್ನು ಆಫರ್ ಮೂಲಕ ಖರೀದಿಸಬಹುದಾಗಿದೆ.
ಅಚ್ಚರಿಯ ಕೊಡುಗೆ, ಉಡುಗೊರೆ
ಈ ವಜ್ರಾಭರಣಗಳ ವಾರ್ಷಿಕ ಮಹೋತ್ಸವದ ಪ್ರಯುಕ್ತ ಅಚ್ಚರಿಯ ಕೊಡುಗೆ ಹಾಗೂ ಉಡುಗೊರೆಯೊಂದಿಗೆ ವಜ್ರಾಭರಣಗಳನ್ನು ಖರೀದಿಸುವ ಸುವರ್ಣಾವಕಾಶ ಗ್ರಾಹಕರದ್ದಾಗಿದೆ. ವಜ್ರಾಭರಣಗಳ ಮೇಲೆ ಪ್ರತೀ ಕ್ಯಾರೆಟ್‌ಗೆ 7 ಸಾವಿರದ ವರೆಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ವೈವಿದ್ಯಮಯ ವಜ್ರಾಭರಣಗಳ ವಿನೂತನ ಸಂಗ್ರಹ 3500 ರೂ.ನಿಂದ ಪ್ರಾರಂಭವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 8748877360 ಸಂಪರ್ಕಿಸಿ.