Connect with us

ಇತರ

ಸೇವಾಹೆಜ್ಜೆಯ ಹೊಸ ಆಯಾಮಕ್ಕೆ ಮುನ್ನುಡಿ ಬರೆದ ಯುವಶಕ್ತಿ ಸೇವಾಪಥ

Published

on

ಬೆಳ್ತಂಗಡಿ: ಯುವಶಕ್ತಿ ಸೇವಾಪಥ ಬಹುಮಹತ್ವದ ಸೇವಾನಿಧಿ ಯೋಜನೆಯಲ್ಲಿ ಪ್ರಮುಖವಾದುದು ಶುಭನಿಧಿ ಯೋಜನೆಯಾಗಿದೆ. ಸೇವಾಹೆಜ್ಜೆಯ ಹೊಸ ಆಯಾಮಕ್ಕೆ ಮುನ್ನುಡಿ ಬರೆದ ಯುವಶಕ್ತಿ ಸೇವಾಪಥ ಸಂಸ್ಥೆಯು ಈ ಬಾರಿ ಶುಭನಿಧಿ ಸೇವಾಭಿಯಾನದಲ್ಲಿ ಬೆಳ್ತಂಗಡಿ ತಾಲೂಕಿನ ಉಜಿರೆ ಕಲ್ಮಂಜ ಸರ್ಕಾರಿ ಶಾಲೆಗೆ ಬಣ್ಣ ಬಳಿಯುವ ಮೂಲಕ ಹೊಸ ಮೆರುಗು ನೀಡಿದ್ದಾರೆ.

ಯುವಶಕ್ತಿ ತಂಡದ ಸುಮಾರು 25 ಕಾರ್ಯಕರ್ತರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸುಮಾರು 70,000 ಮೌಲ್ಯದ ಪೈಂಟ್ ಬಳಿಯುವ ಮೂಲಕ ಸೇವಾಪಥದ ಪಥಕ್ಕೆ ಹೊಸ ಅಧ್ಯಾಯ ಬರೆದಿದ್ದಾರೆ.
ಯುವಶಕ್ತಿಯ ಕಾರ್ಯಕರ್ತರು ತಮ್ಮ ಹುಟ್ಟುಹಬ್ಬ, ಮದುವೆಯ ಸಂಭ್ರಮ‌, ವಿವಾಹ ವಾರ್ಷಿಕೋತ್ಸವ,ಮನೆಗೆ ಹೊಸ ವಾಹನ, ಕ್ರೀಡಾ ವಿಜಯ ಇತ್ಯಾದಿ ಸಂಭ್ರಮಗಳನ್ನು ಯುವಶಕ್ತಿ ಸೇವಾಪಥದ ಶುಭನಿಧಿಗೆ ಸೇವಾನಿಧಿ ಸಮರ್ಪಿಸುವ ಮೂಲಕ ಸಂಭ್ರಮಿಸುತ್ತಾರೆ..

ಮಾತ್ರವಲ್ಲದೆ, ಈ ಶುಭನಿಧಿಯಲ್ಲಿ ಸಂಗ್ರಹಿಸಲ್ಪಟ್ಟ ಮೊತ್ತದಲ್ಲಿ ಬಡಸಹೋದರಿಯರ ವಿವಾಹಕ್ಕೆ ಸಹಾಯಹಸ್ತ, 5 ಸರ್ಕಾರಿ ಶಾಲೆಗಳಿಗೆ ಕುಡಿಯುವ ನೀರಿನ ಯುನಿಟ್ ಪೂರೈಕೆಯಾಗಿದೆ. ಜೊತೆಗೆ ಸಾಮಾಜಿಕ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ವೈಯಕ್ತಿಕ ಹೆಸರಿನ ಹಂಬಲವಿಲ್ಲದೆ‌ ಹೊಸಬಗೆಯ ಸೇವಾಕ್ರಾಂತಿಗೆ ಕೈಜೋಡಿಸುತ್ತಿರುವುದು ಯುವಶಕ್ತಿಯ ಎಲ್ಲಾ ಯುವಶಕ್ತಿ ಕಾರ್ಯಕರ್ತರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version