Connect with us

ಇತರ

ಬ್ಯಾನರ್ ಹರಿದ ಅದೇ ಜಾಗದಲ್ಲಿ ನಿಂತು ರಸ್ತೆ ಉದ್ಘಾಟಿಸಿದ ಶಾಸಕ ಅಶೋಕ್ ರೈ ಅಭಿವೃದ್ದಿಗೆ ಯಾರೂ ಅಡ್ಡಿಪಡಿಸಬಾರದು ಎಂದ ಶಾಸಕ ಅಶೋಕ್ ರೈ

Published

on

ಪುತ್ತೂರು: ರಸ್ತೆಯಿಲ್ಲದೆ ಪರದಾಡುತ್ತಿದ್ದ ನರಿಮೊಗರು ಗ್ರಾಮದ ಅಲಂಗ- ಶಿಬರ-ನಡುವಾಲ್ ನಿವಾಸಿಗಳಿಗ ೨೫ ವರ್ಷಗ ಹಿಂದಿನ ಬೇಡಿಕೆ ಈಡೇರಿದೆ, ರಸ್ತೆ ಸಂಪರ್ಕವೇ ಇಲ್ಲದ ಈ ಪ್ರದೇಶಕ್ಕೆ ಸ್ಥಳೀಯರ ಜೊತೆ ಮಾತುಕತೆ ನಡೆಸಿ ರಸ್ತೆ ನಿರ್ಮಿಸಿಕೊಟ್ಟಿದ್ದಾರೆ. ಈ ರಸ್ತೆ ನಿರ್ಮಾಣ ಮಾಡಿಕೊಟ್ಟ ಖುಷಿಯಲ್ಲಿ ಗ್ರಾಮಸ್ಥರು ಶಾಸಕರನ್ನು ಅಭಿನಂದಿಸಿ ಬ್ಯಾನರ್ ಹಾಕಿದ್ದರು ಆದರೆ ಆ ಬ್ಯಾನರನ್ನು ಯಾರೋ ಹರಿದು ಹಾಕಿದ್ದರು. ಶನಿವಾರದಂದು ಅದೇ ಸ್ಥಳದಲ್ಲಿ ಶಾಸಕರು ನೂತನ ರಸ್ತೆಯನ್ನು ಉದ್ಘಾಟನೆ ಮಾಡುವ ಮೂಲಕ ನೀವು ಏನೇ ಮಾಡಿದರೂ ನಾವು ಅಭಿವೃದ್ದಿ ಪರ, ಜನರ ಪರ ಎಂಬುದನ್ನು ಸಾರಿ ಹೇಳಿದರು.

ಅಲಂಗ-ಶಿಬರ-ನಡುವಾಲ್ ಪ್ರದೇಶದಲ್ಲಿ ಅನೇಕ ಮನಗಳಿವೆ, ಈ ಮನೆಗಳಿಗೆ ತೆರಳಲು ರಸ್ತೆಯೇ ಇರಲಿಲ್ಲ. ಕಳೆದ ಒಂದು ತಿಂಗಳ ಹಿಂದೆ ಶಾಸಕರ ಕಚೇರಿಗೆ ಬಂದ ಇಲ್ಲಿನ ನಿವಾಸಿಗಳು ತಮ್ಮ ಸಂಕಷ್ಟವನ್ನು ಹೇಳಿಕೊಂಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ರಸ್ತೆ ನಿರ್ಮಾಣವಾಗುವಲ್ಲಿ , ರಸ್ತೆ ಹಾದುಹೋಗುವ ಜಾಗದ ಮಾಲಿಕರ ಜೊತೆ ಸೌಹಾರ್ಧ ಮಾತುಕತೆ ನಡೆಸಿದ್ದಾರೆ. ಶಾಸಕರ ಮಾತಿಗೆ ಬೆಲೆ ನೀಡಿ ರಸ್ತೆ ಜಾಗ ಬಿಟ್ಟು ಕೊಡಲು ಜಾಗ ಮಾಲಿಕರು ಒಪ್ಪಿಗೆ ನೀಡಿದ್ದರು. ರಸ್ತೆ ನಿರ್ಮಾಣಕ್ಕೆ ಶಾಸಕರು ೫ ಲಕ್ಷ ಅನುದಾನವನ್ನು ಒದಗಿಸಿದ್ದರು.

ರಸ್ತೆ ನಿರ್ಮಾಣವೂ ಆಗಿದೆ . ಆ ರಸ್ತೆಯನ್ನು ಶಾಸಕರು ಶನಿವಾರ ಉದ್ಘಾಟಿಸಿದ್ದಾರೆ. ಈ ವೇಳೆ ಮತನಾಡಿದ ಶಾಸಕರು ರಸ್ತೆ ನಿರ್ಮಾಣಕ್ಕೆ ಜಾಗ ಬಿಟ್ಟು ಕೊಟ್ಟವರನ್ನು ಸ್ಮರಿಸಿದರು. ರಸ್ತೆ ನಿರ್ಮಾಣವಾಗಿರುವ ಬಗ್ಗೆ ಮತ್ಸರದಿಂದ ಶಾಸಕರಿಗೆ ಅಭಿನಂದನೆ ಕೋರಿ ಹಾಕಿದ್ದ ಬ್ಯಾನರನ್ನು ಹರಿದು ಹಾಕಿದ್ದರು. ಕಾರ್ಯಕ್ರಮದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ವಲಯ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ಪೂಜಾರಿ ಕೈಂದಾಡಿ, ಪಕ್ಷದ ಪ್ರಮುಖರಾದ ವೇದನಾಥ ಸುವರ್ಣ, ಯಾಕೂಬ್ ಮುಲಾರ್, ಬಾಬು ಶೆಟ್ಟಿ ನರಿಮೊಗರು, ರಾಘವೇಂದ್, ರವೀಂದ್ರ ನೆಕ್ಕಿಲು, ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಗ್ರಾಮಸ್ಥರು, ರಸ್ತೆಯ ಫಲಾನುಭವಿಗಳು ಉಪಸ್ಥಿತರಿದ್ದರು. ರಸ್ತೆಯಲ್ಲಿ ಸಂಚಾರ ಮಾಡಿದ ಶಾಸಕರು ಈ ರಸ್ತೆಯ ಕಾಂಕ್ರಿಟೀಕರಣಕ್ಕೆ ಅನುದಾನವನ್ನು ನೀಡುವುದಾಗಿ ಭರವಸೆ ನೀಡಿದರು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version