Connect with us

ಇತರ

ಕೋಡಿಂಬಾಡಿ : ಉಚಿತ ಆರೋಗ್ಯ ಮತ್ತು ದಂತ ಚಿಕಿತ್ಸಾ ಶಿಬಿರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ: ಶಾಸಕ ಅಶೋಕ್ ರೈ

Published

on

ಪುತ್ತೂರು: ನಾವು ಪ್ರತೀಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಬೇಕು, ಆಗಾಗ ನಮ್ಮ ಆರೋಗ್ಯವನ್ನು ತಪಾಸಣೆ ಮಾಡಿಜೊಳ್ಳುವ ಪೃವೃತ್ತಿಯನ್ನು ರೂಡಿಸಿಕೊಳ್ಳಿ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರುಶ್ರೀ ಮಹಿಷಮರ್ಧಿನಿ ದೇವಸ್ಥಾನ ಮಠಂತಬೆಟ್ಟು,ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರ ಸಂಘ,ಯುವಶಕ್ತಿ ಗೆಳೆಯರ ಬಳಗ ಹಾಗೂ ವನಿತಾ ಸಮಾಜ ಕೋಡಿಂಬಾಡಿ ಇವುಗಳ ವತಿಯಿಂದ ಮಂಗಳೂರು ಎ ಜೆ ಆಸ್ಪತ್ರೆ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಮತ್ತು ದಂತ‌ಚಿಕಿತ್ಸಾ ಶಿಭಿರವನ್ನು ಶಾಸಕ ಅಶೋಕ್ ರೈ ಉದ್ಘಾಟಿಸಿ ಮಾತನಾಡಿದರು.

ಆರೋಗ್ಯ ಚೆನ್ನಾಗಿದ್ರೆ ಅದುವೇ ದೊಡ್ಡ ಸಂಪತ್ತು. ಏನೇ ಆದರೂ ನಾವು ಟೆನ್ಸ್ಯನ್ ತೆಗೆದುಕೊಳ್ಖಬಾರದು, ಟೆನ್ಸ್ಯನ್ ಅನೇಕ ರೋಗಗಳಿಗೆ ಅಡಿಪಾಯ ಹಾಕುತ್ತದೆ . ಸಣ್ಣ ಪ್ರಾಯದಲ್ಲಿ ಯೇ ಕಾಳಜಿ ವಹಿಸಿಕೊಂಡಲ್ಲಿ ವೃದ್ದಾಪ್ಯದಲ್ಲಿ‌ನೆಮ್ಮದಿ ಕಾಣಲು ಸಾಧ್ಯ ಎಂದು ಹೇಳಿದರು.
ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಕಡಿಮೆ ಇದೆ ಎಂದು ಶಾಸಕರು ಹೇಳಿದರು.

ಆರೋಗ್ಯದ ಬಗ್ಗೆ ನಮ್ಮ ಕಾಳಜಿ ಕಡಿಮೆಯಾಗಿರುವುದೇ ನಮ್ಮಲ್ಲಿ ಅನೇಕ ಸಾವು ನೋವುಗಳಿಗೆ ಕಾರಣವಾಗುತ್ತಿದೆ,ನೀವು ಆರೋಗ್ಯವಂತರಾಗಿಯೇ ಇದ್ದರೂ ದೇಹವನ್ನು ಕಡ್ಡಾಯವಾಗಿ ತಪಾಸಣೆಗೊಳಪಡಿಸಿ ಎಂದು ಸಲಹೆ ಮಾಡಿದರು.

ಆಹಾರ ಪದ್ದತಿಯೇ ರೋಗಕ್ಕೆ ಕಾರಣ
ನಾವು ನಿತ್ಯ ಸೇವಿಸುವ ಆಹಾರವೇ ನಮ್ಮ ಆರೋಗ್ಉ ಕೆಡಲು ಕಾರಣವಾಗುತ್ತಿದೆ. ದೇಹಕ್ಕೆ ಸಮತೋಲನ ಆಹಾರವನ್ನು ನೀಡದೆ ಸಿಕ್ಕಿ ಸಿಕ್ಕಿದ್ದನ್ನೆಲ್ಲಾ ನಾವು ತಿನ್ನುತ್ತಾ ಹೊಟ್ಟೆ ತುಂಬಿಸಿಕೊಂಡಲ್ಲಿ ಅದನ್ನು ನಮ್ಮ ದೇಹ ಸ್ವೀಕರಿಸುವುದಿಲ್ಲ. ವೈದ್ಯರ ಸಲಹೆ ಪಡೆದು ನಾವು ದೇಹವನ್ನು ಸುರಕ್ಷಿತವಾಗಿಡಲು ಪ್ರಯತ್ನಿಸಿ. ಹೆಚ್ಷು ತರಕಾರಿ ಜೊತೆಗೆ ಮಾಂಸಾಹಾರವನ್ನು ತಿನ್ನಿ ಆದರೆ ಆಹಾರದಲ್ಲಿ ನಿಯಂತದರಣವಿರಲಿ ಎಂದು ಸಲಹೆ ನೀಡಿದರು.
ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರಿ‌ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ನಡುಮನೆ,ಯುವಶಕ್ತಿ ಗೆಳೆಯರ ಬಳಗದ ಅಧ್ಯಕ್ಷ ಪ್ರಭಾಕರ ಸಾಮಾನಿ, ವನಿತಾ ಸಮಾಜ ಕೋಡಿಂಬಾಡಿ ಅಧ್ಯಕ್ಷೆ ರಶ್ಮಿ, ಕೋಡಿಂಬಾಡಿ ಗ್ರಾಪಂ ಅಧ್ಯಕ್ಷೆ ಮಲ್ಲಿಕಾ, ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್, ಯಾಕೂಬ್ ಮುಲಾರ್,ಮುರಳೀದರ್ ರೈ ಮಠಂತಬೆಟ್ಟು, ಕೇಶವ ಭಂಡಾರಿ, ಸೀತಾರಾಮ ಶೆಟ್ಟಿ, ಡಾ. ಶಿವಪ್ರಕಾಶ್, ಕುಮಾರನಾಥ, ವಿಜಯಾ ನಾಯ್ಕ, ರೇಣುಕಾ ಮುರಳೀದರ್ ರೈ, ಸತೀಶ್ ನಾಯಕ್, ಯಮುನಾ ಡೆಕ್ಕಾಜೆ, ಮಹಾಬಲ ಶೆಟ್ಟಿ ವಲತ್ತಡ್ಕ, ನಳಿನಿ ಪಿ ಶೆಟ್ಟಿ ಉಪಸ್ಥಿತರಿದ್ದರು.
ನಿರಂಜನ್ ರೈ ಮಠಂತಬೆಟ್ಟು ಸ್ವಾಗತಿಸಿದರು. ವಂದನೆ ಸಂತೋಷ್ ಕುಮಾರ್ ರೈ ಕೆದಿಕಂಡೆ ವಂದಿಸಿದರು. ಕವಿತಾ ಕೈಪ ಕಾರ್ಯಕ್ರಮ ನಿರೂಪಿಸಿದರು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version