Connect with us

ಇತರ

ಪಡುಮಲೆ : ಧಗಧಗಿಸಿದ ಕಾರು,

Published

on

ಪುತ್ತೂರು: ಗ್ಯಾಸ್‌ ಬಲೂನೊಂದು ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಕಿಡಿ ಹತ್ತಿ ಕಾರು ಬೆಂಕಿಗಾಹುತಿಯಾದ ಘಟನೆ ಪಡುಮಲೆ ಶ್ರೀ ಪೂಮಾಣಿ -ಕಿನ್ನಿಮಾಣಿ ಹಾಗೂ ವ್ಯಾಘ್ರ ಚಾಮುಂಡಿ ದೈವಸ್ಥಾನದ ವಠಾರದಲ್ಲಿ ಜ.18ರಂದು ನಡೆದಿದೆ.
ಪಡುಮಲೆ ಶ್ರೀ ಪೂಮಾಣಿ -ಕಿನ್ನಿಮಾಣಿ ಹಾಗೂ ವ್ಯಾಘ್ರ ಚಾಮುಂಡಿ ದೈವಸ್ಥಾನದಲ್ಲಿ ಜಾತ್ರೋತ್ಸವ ಜರುಗುತ್ತಿದ್ದು, ಈ ವೇಳೆ ಬಲೂನ್ ವೊಂದು ಗಾಳಿಯಲ್ಲಿ ಹಾರಿ ವಿದ್ಯುತ್‌ ತಂತಿಗೆ ತಾಗಿತ್ತು. ಈ ವೇಳೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಕಾಣಿಸಿಕೊಂಡ ಬೆಂಕಿ ಕಿಡಿಯೊಂದು ರಸ್ತೆ ಬದಿ ನಿಂತಿದ್ದ ಕಾರಿನ ಮೇಲೆ ಬಿದ್ದಿದೆ. ಈ ವೇಳೆ ಬೆಂಕಿ ತಗುಲಿದ ಕಾರು ತನ್ನಷ್ಟಕ್ಕೇ ಮುಂಭಾಗಕ್ಕೆ ಚಲಿಸಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ತಕ್ಷಣವೇ ಸ್ಥಳೀಯರು ನೀರು ಹಾಯಿಸುವ ಮೂಲಕ ಬೆಂಕಿ ನಂದಿಸಿದ್ದು, ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಕಾರು ಸಂಪೂರ್ಣ ಸುಟ್ಟು ಹೋಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version