Connect with us

ಇತರ

KSRTC Bus: ಕಣ-ಕಣದಲ್ಲೂ ಕೇಸರಿ, ಬಸ್‌ನಿಂದ ಜಾಹೀರಾತು ತೆಗೀರಿ! ಸಾರಿಗೆ ಸಚಿವರ ಖಡಕ್ ಆದೇಶ

Published

on

 ಬೆಂಗಳೂರು:ಸರ್ಕಾರಿ ಬಸ್‌ಗಳಲ್ಲಿ (government bus) ನೀವು ಪಾನ್ ಮಸಾಲ (pan masala), ಗುಟ್ಕಾ (gutka) ಸೇರಿದಂತೆ ತಂಬಾಕು ಉತ್ಪನ್ನಗಳ (tobacco products) ಜಾಹೀರಾತುಗಳನ್ನು (advertisements) ನೋಡಿರುತ್ತೀರಿ. ‘ಕಣಕಣದಲ್ಲೂ ಕೇಸರಿ’ ಅಂತ ಹೇಳುತ್ತಾ ಗುಟ್ಕಾ ಜಾಹೀರಾತುಗಳನ್ನು ಹೊತ್ತು ಇಡೀ ಊರಿನ ತುಂಬಾ ಬಸ್ ಓಡಾಡುತ್ತಿದ್ದರೆ ನೋಡೋ ಜನಗಳಿಗೂ ಇರುಸು ಮುರುಸು ಆಗ್ತಿತ್ತು.

ಆದರೆ ಇಂತಹಾ ಜಾಹೀರಾತುಗಳಿಗೆ ಇನ್ಮುಂದೆ ಕಡಿವಾಣ ಬೀಳಲಿದೆ. ಬಸ್‌ಗಳ ಮೇಲೆ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವ ಜಾಹೀರಾತು ನಿರ್ಬಂಧಕ್ಕೆ ಸಾರಿಗೆ ಸಚಿವ (Transport Minister) ರಾಮಲಿಂಗಾರೆಡ್ಡಿ (Ramalinga Reddy) ಆದೇಶ ನೀಡಿದ್ದಾರೆ.

 

ಬಸ್‌ಗಳಲ್ಲಿ ತಂಬಾಕು ಜಾಹೀರಾತಿಗೆ ಬ್ರೇಕ್

ನಾಲ್ಕು ನಿಗಮಗಳ ಸಾರಿಗೆ ಬಸ್ಸುಗಳು ಹಾಗೂ ಬಸ್ಸು ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತು ಹಾಕದಂತೆ ಸಾರಿಗೆ ಸಚಿವರು ಆದೇಶಿಸಿದ್ದಾರೆ. ತಂಬಾಕು ಉತ್ಪಾದಿಸುವ ಉತ್ಪನ್ನಗ ಸೇವನೆಗೆ ಪ್ರಚೋದಿಸುವ ನೇರವಾದ ಅಥವಾ ಪರೋಕ್ಷವಾದ ಜಾಹೀರಾತನ್ನು ನಿರ್ಬಂದಿಸುವಂತೆ ಸೂಚನೆ ನೀಡಿದ್ದಾರೆ.

ಸಾರಿಗೆ ಸಚಿವರ ಆದೇಶದಲ್ಲಿ ಏನಿದೆ?

ಸಾರ್ವಜನಿಕರ ಹಿತದೃಷ್ಟಿಯಿಂದ, ಈ ಕೂಡಲೇ ಜಾರಿಗೆ ಬರುವಂತೆ, ಸಾರಿಗೆ ಬಸ್ಸುಗಳಲ್ಲಿ/ ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೊ ನೇರವಾದ ಅಥವಾ ಪರೋಕ್ಷವಾದ ಯಾವುದೇ ಜಾಹೀರಾತುಗಳನ್ನು ಇನ್ನು ಮುಂದೆ ಮಾಡದಂತೆ ಸೂಚಿಸುತ್ತಿದ್ದೇನೆ.

ಜಾಹೀರಾತು ಹಾಕಿದ್ದರೆ ತೆಗೆಯಲು ಸೂಚನೆ

ಈಗಾಗಲೇ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವ ಜಾಹೀರಾತುಗಳನ್ನು ಬಸ್ಸುಗಳಲ್ಲಿ/ ಬಸ್ ನಿಲ್ದಾಣಗಳಲ್ಲಿ ಅಳವಡಿಸಿದ್ದರೆ, ತೆಗೆಯಲು ಒಂದು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿ. ಆ ನಿಗದಿತ ಸಮಯದೊಳ. ಜಾಹೀರಾತುಗಳನ್ನು ತೆಗೆದು ಹಾಕುವಂತೆ ಸಂಬಂಧಪಟ್ಟವರಿಗೆ ಕಟ್ಟುನಿಟ್ಟಾಗಿ ನಿದ ನೀಡುವುದು ಅಂತ ಸಾರಿಗೆ ಸಚಿವರ ಆದೇಶದಲ್ಲಿ ತಿಳಿಸಿದ್ದಾರೆ.

ವಿವಾದಕ್ಕೆ ಕಾರಣವಾಗಿದ್ದ ಜಾಹೀರಾತುಗಳು
ಕರ್ನಾಟಕದ ಸರ್ಕಾರಿ ಬಸ್‌ಗಳಲ್ಲಿ (ಮುಖ್ಯವಾಗಿ KSRTC, NWKRTC ಮತ್ತು BMTC ಬಸ್‌ಗಳಲ್ಲಿ) ಪಾನ್ ಮಸಾಲಾ, ಗುಟ್ಕಾ ಸೇರಿದಂತೆ ತಂಬಾಕು ಉತ್ಪನ್ನಗಳ ಜಾಹೀರಾತುಗಳು ಹಾಕಿರುವುದು ಇತ್ತೀಚಿನ ವರ್ಷಗಳಲ್ಲಿ ಹಲವು ವಿವಾದಗಳನ್ನು ಹುಟ್ಟುಹಾಕಿತ್ತು. ಇದು ಮುಖ್ಯವಾಗಿ 2023ರಿಂದ 2026ರವರೆಗೆ ಪದೇ ಪದೇ ಚರ್ಚೆಗೆ ಗ್ರಾಸವಾಗಿತ್ತು.

ಬಸ್‌ಗಳ ಮೇಲೆ ಜಾಹೀರಾತು

ಕರ್ನಾಟಕದಲ್ಲಿ ಗುಟ್ಕಾ ನಿಷೇಧಿಸಲಾಗಿದ್ದರೂ, ಪಾನ್ ಮಸಾಲಾ ಅಥವಾ ಇಲಾಚಿ ಎಂದು ಹೇಳಿ ಜಾಹೀರಾತುಗಳ ಮೂಲಕ ತಂಬಾಕು ಉತ್ಪನ್ನಗಳನ್ನು ಪ್ರಚಾರ ಮಾಡಲಾಗುತ್ತಿತ್ತು. ಹಲವು ಪ್ರಮುಖ ಬ್ರಾಂಡ್‌ಗಳ ಜಾಹೀರಾತುಗಳು ಬಸ್‌ಗಳ ಮೇಲೆ ಪೂರ್ಣ ವ್ರ್ಯಾಪ್ ಅಥವಾ ಬ್ಯಾನರ್‌ಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಇವುಗಳು ಬಾಲಿವುಡ್ ಸೆಲೆಬ್ರಿಟಿಗಳನ್ನು ಬಳಸಿ ಯುವಕರನ್ನು ಆಕರ್ಷಿಸುತ್ತವೆ ಎಂಬ ಆರೋಪವಿತ್ತು.

ಸಾರ್ವಜನಿಕರಿಂದ ಭಾರೀ ಆಕ್ರೋಶ

ಈ ಜಾಹೀರಾತುಗಳು ಸಾರ್ವಜನಿಕ ಸಾರಿಗೆಯಲ್ಲಿ ತಂಬಾಕು ಉತ್ಪನ್ನಗಳ ಪ್ರಚಾರಕ್ಕೆ ವಿರೋಧವಾಗಿ COTPA ಕಾಯ್ದೆಯನ್ನು ಉಲ್ಲಂಘಿಸುತ್ತವೆ ಎಂಬುದು ಸಾರ್ವಜನಿಕರ ವಾದ. ವಿಶೇಷವಾಗಿ, ಬಸ್‌ಗಳಲ್ಲಿ ತಂಬಾಕು ಬಳಕೆಗೆ ದಂಡ ವಿಧಿಸುವ NWKRTCಯಂತಹ ಸಂಸ್ಥೆಗಳೇ ಇಂತಹ ಜಾಹೀರಾತುಗಳನ್ನು ಅನುಮತಿಸುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿತ್ತು.

ಬ್ಯಾನರ್ ಹರಿದು ಯುವಕರ ಆಕ್ರೋಶ

ಈ ವಿಷಯಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವೀಡಿಯೊಗಳಲ್ಲಿ ಯುವಕರು ಬಸ್‌ಗಳ ಮೇಲಿನ ಗುಟ್ಕಾ ಮತ್ತು ಪಾನ್ ಮಸಾಲಾ ಜಾಹೀರಾತುಗಳನ್ನು ಹರಿದು ಹಾಕುತ್ತಿರುವ ದೃಶ್ಯಗಳು ಕಾಣಿಸಿವೆ. ಇದು ವಿದ್ಯಾನಗರದಿಂದ ಆರಂಭವಾಗಿ ಮುಧೋಳ್, ಹುಬ್ಬಳ್ಳಿ-ಧಾರವಾಡಕ್ಕೆ ಹರಡಿದೆ. ನೆಟಿಜನ್‌ಗಳು ಇದನ್ನು “ಸಾರ್ವಜನಿಕ ಆರೋಗ್ಯಕ್ಕಾಗಿ ನಾಗರಿಕರ ಹೋರಾಟ” ಎಂದು ಕೊಂಡಾಡಿದ್ದಾರೆ, ಆದರೆ ಕೆಲವರು ಬಸ್‌ಗಳನ್ನು ಹಾಳುಮಾಡುವುದು ಕಾನೂನುಬಾಹಿರ ಎಂದು ಎಚ್ಚರಿಸಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version