Connect with us

ಇತರ

ಬಾಳ್ತಿಲ ಗ್ರಾಮ ಪಂಚಾಯತ್, ಕಲ್ಪ ವೃಕ್ಷ ಸಂಜೀವಿನಿ ಒಕ್ಕೂಟ ಬಾಳ್ತಿಲ, ಅಮರ್ ಬೊಳ್ಳಿಲು ಗ್ರೂಪ್ ದಾಸಕೋಡಿ ಹಾಗೂ ಹಸಿರು ದಳ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ದಾಸಕೋಡಿ ರಾಷ್ಟ್ರೀಯ ಹೆದ್ದಾರಿ ಬಳಿ ಸ್ವಚ್ಛತಾ ಅಭಿಯಾನ

Published

on

ಬಂಟ್ವಾಳ : ಬಾಳ್ತಿಲ ಗ್ರಾಮ ಪಂಚಾಯತ್, ಕಲ್ಪ ವೃಕ್ಷ ಸಂಜೀವಿನಿ ಒಕ್ಕೂಟ ಬಾಳ್ತಿಲ, ಅಮರ್ ಬೊಳ್ಳಿಲು ಗ್ರೂಪ್ ದಾಸಕೋಡಿ ಹಾಗೂ ಹಸಿರು ದಳ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ದಾಸಕೋಡಿ ರಾಷ್ಟ್ರೀಯ ಹೆದ್ದಾರಿಯ ಬಳಿ ಸ್ವಚ್ಛತಾ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲಾಯಿತು.

ಅಮರ್ ಬೊಳ್ಳಿ ಗ್ರೂಪ್ಸ್ ದಾಸಕೋಡಿ, ದಾಸಕೋಡಿ ಪರಿಸರದ ಸುತ್ತಮುತ್ತಲಿರುವ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಸ್ಥಾಪನೆಗೊಂಡಿರುತ್ತದೆ. ಇಂದಿಗೆ 6 ತಿಂಗಳು ಪೂರೈಸಿದೆ. ಇಂದು ದಿನಾಂಕ 01.02.2026ರಂದು ರಾಜಾರಾಮ್ ಐತಾಳ್ ರವರ ಮುಂದಾಳತ್ವದಲ್ಲಿ ದಾಸಕೋಡಿ ಪರಿಸರದಲ್ಲಿ ಸ್ಪಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಅಮರ್ ಬೊಳ್ಳಿ ಗ್ರೂಪಿನ ಸ್ವಚ್ಛತೆಯ ಕಾರ್ಯಕ್ರಮದ ಕರೆಗೆ ಬಾಳ್ತಿಲ ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಪಂಚಾಯತ್ ಅಧ್ಯಕ್ಷರು ಹಾಗೂ ಈ ಭಾಗದ ಸದಸ್ಯರು, ಕಲ್ಪವೃಕ್ಷ ಸಂಜೀವಿನಿ ಒಕ್ಕೂಟ ಹಾಗೂ ಹಸಿರು ದಳದ ನೇತೃತ್ವದಲ್ಲಿ ಈ ಸ್ವಚ್ಛತಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರೈಸಲಾಯಿತು.

ಸ್ವಚ್ಛತೆ ಮಾಡುವ ಸಂದರ್ಭದಲ್ಲಿ ಎನ್.ಎಚ್.75 ಇದರ 2 ಬದಿಯಲ್ಲಿ ನಾವು ಗಮನಿಸಿದಂತ ಅಂಶವೇನೆಂದರೆ 500ಕ್ಕಿಂತಲೂ ಹೆಚ್ಚು ಬೀರ್ ಬಾಟಲಿಗಳನ್ನು ಹಾಗೂ ಪಾನ್ ಮಸಾಲ ಪ್ಯಾಕೇಟ್ ಗಳನ್ನು ಹೆಕ್ಕುವಾಗ ನಮಗೆ ಬಂದ ಯೋಚನೆಯೆಂದರೆ ಜನರಿಗೆ ಸ್ವಚ್ಛತೆಯ ಬಗ್ಗೆ ಯಾವ ಮಟ್ಟದ ಕಾಳಜಿ ಇದೆ ಎಂಬುದು ತಿಳಿಯಿತು. ಜನರ ಬಳಿ ಕಳಕಳಿಯಿಂದ ಅಮರ್ ಬೊಳ್ಳಿ ಗ್ರೂಪ್ ಬೇಡಿಕೊಳ್ಳುವುದೇನೆಂದರೆ ” ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿತ್ವವಾಗಿಡಿ ಎಂಬುದಾಗಿದೆ”.

ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬಾಳ್ತಿಲ ಗ್ರಾಮ ಪಂಚಾಯತ್, ಕಲ್ಪ ವೃಕ್ಷ ಸಂಜೀವಿನಿ ಒಕ್ಕೂಟ ಬಾಳ್ತಿಲ, ಅಮರ್ ಬೊಳ್ಳಿಲು ಗ್ರೂಪ್ ದಾಸಕೋಡಿ ಹಾಗೂ ಹಸಿರು ದಳ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಈ ಅಭಿಯಾನವನ್ನು ಆಯೋಜಿಸಲಾಗಿತ್ತು. ರಾಷ್ಟ್ರೀಯ ಹೆದ್ದಾರಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಗ್ರಹವಾಗಿದ್ದ ಕಸವನ್ನು ತೆರವುಗೊಳಿಸಿ ರಸ್ತೆ ಪ್ರದೇಶವನ್ನು ಸ್ವಚ್ಛಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಅಮರ್ ಬೊಳ್ಳಿಲು ಸಂಘ ದ ಕಾರ್ಯಕರ್ತರು, ಗ್ರಾಮಸ್ಥರು, ಉಪಸ್ಥಿತರಿದ್ದು, ಸ್ವಚ್ಛತೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಸಾರ್ವಜನಿಕರು ಇಂತಹ ಜನಪರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ತಿಳಿಸಿದರು. ಈ ಸ್ವಚ್ಛತಾ ಅಭಿಯಾನವು ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ಜೊತೆಗೆ ಸಮುದಾಯದಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿತು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version