Connect with us

ಇತರ

ಸಾಲ ವಾಪಸ್ ಕೊಡಲಿಲ್ಲ ಅಂತ ಕೊಡಗಿನ ಉದ್ಯಮಿ ಸುಸೈಡ್ : ಪತ್ನಿ ಸ್ಥಿತಿ ಗಂಭೀರ.

Published

on

ಇದು ಹಣದ ಕಥೆ ಅಲ್ಲ…ಇದು ನಂಬಿಕೆಯ ಕಥೆ…ಮತ್ತು ಆ ನಂಬಿಕೆ ಮುರಿದಾಗ ಒಂದು ಕುಟುಂಬ ಹೇಗೆ ನೆಲಕಚ್ಚಬಹುದು ಅನ್ನೋದ್ರ ಭೀಕರ ಉದಾಹರಣೆ.

ಕೊಡಗಿನ ಉದ್ಯಮಿ ಸಜೀರ್..ಸಾಧಾರಣ ವ್ಯಕ್ತಿ, ದುಡಿಯೋ ಮನುಷ್ಯ. ಯಾರಿಗೂ ಮೋಸ ಮಾಡುವವನಲ್ಲ,ಯಾರನ್ನೂ ಮೋಸ ಮಾಡುವವನಾಗಬೇಕು ಅನ್ನೋ ಮನಸ್ಸೂ ಇರಲಿಲ್ಲ.ಪರಿಚಯ, ನಂಬಿಕೆ, ಸ್ನೇಹ—ಇವನ್ನೇ ಆಧಾರ ಮಾಡಿಕೊಂಡು ಬದುಕುತ್ತಿದ್ದ ವ್ಯಕ್ತಿ.

ಅದೇ ನಂಬಿಕೆಯ ಮೇಲೆ ಕೇರಳದ ವಯನಾಡಿನ ಬಾಪು ಅನ್ನೋ ವ್ಯಕ್ತಿಗೆ ಸುಮಾರು 20 ಲಕ್ಷ ರೂಪಾಯಿ ಸಾಲ ಕೊಟ್ಟಿದ್ದ.“ಕಷ್ಟ ಇದೆ, ಬೇಗ ವಾಪಸ್ ಕೊಡ್ತೀನಿ” ಅನ್ನೋ ಮಾತು ಕೇಳಿ ಅದನ್ನ ನಂಬಿದ್ದ.
ಒಂದು ತಿಂಗಳಾಯಿತು …
ಎರಡು ತಿಂಗಳಾಯಿತು …
ಮೂರು ತಿಂಗಳಾಯಿತು …
ಹಣ ಮಾತ್ರ ಬರಲೇ ಇಲ್ಲ.
ಫೋನ್ ಮಾಡಿದ್ರೆ ತಪ್ಪಿಸಿಕೊಳ್ಳೋದು,
ಮೆಸೇಜ್ ಮಾಡಿದ್ರೆ ಉತ್ತರ ಇಲ್ಲ,
ಎದುರು ಬಂದಾಗ ನಾಳೆ-ನಾಡಿದ್ದು ಅಂತ ಹೇಳೋದು.ಇದೇ ಆತನ ದಿನಚರಿ ಆಗ್ಬಿಟ್ಟಿತ್ತು.ಸಜೀರ್‌ಗೆ ಹಣಕ್ಕಿಂತ ಹೆಚ್ಚು ನೋವು ಕೊಟ್ಟಿದ್ದು – ಅಪಮಾನ.“ನಾನು ಕೊಟ್ಟ ಹಣ ಕೇಳೋದೇ ತಪ್ಪಾ?” ಅನ್ನೋ ಪ್ರಶ್ನೆ ಪ್ರತಿದಿನ ಕಾಡ್ತಾ ಇತ್ತು.ಮನೆ ಪರಿಸ್ಥಿತಿ ಹದಗೆಟ್ಟಿತ್ತು.ಸಾಲ ಕೊಟ್ಟ ಹಣ ವಾಪಸ್ ಬರಲ್ಲ, ಜೊತೆಗೆ ಸಾಲ ಬೇರೆ.ಮನೆಯಲ್ಲಿ ಮಾತು ಕಡಿಮೆ ಆಯಿತು. ಚಿಂತೆಯೇ ಜಾಸ್ತಿಯಾಯಿತು.ಕೊನೆಗೆ ಸಜೀರ್ ಒಂದು ನಿರ್ಧಾರಕ್ಕೆ ಬಂದ.“ಇದು ನನ್ನ ಕೊನೆಯ ಪ್ರಯತ್ನ.ಮುಖಾಮುಖಿಯಾಗಿ ಕೇಳ್ತೀನಿ.” ಅಂತ ಡಿಸೈಡ್ ಮಾಡಿ ಪತ್ನಿ, ಮಕ್ಕಳ ಜೊತೆ ಕಾರಲ್ಲಿ ವಯನಾಡಿನ ಕಲ್ಪೆಟ್ಟಾಕ್ಕೆ ಹೊರಟ.

ಬಾಪು ಮನೆಯ ಮುಂದೆ ಕಾರು ನಿಲ್ಲಿಸಿದ.ಅಲ್ಲೇ…ಅದೇ ಮನೆಯ ಮುಂದೆ…ಆ ನಂಬಿಕೆ ಮುರಿದ ಜಾಗದಲ್ಲೇ…ಸಜೀರ್ ಮಾನಸಿಕವಾಗಿ ಸಂಪೂರ್ಣ ಕುಸಿದುಹೋಗಿದ್ದ.ಆ ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರವೇ ಭೀಕರ.
ಕಾರಿನಲ್ಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡ.

ಒಂದು ಕ್ಷಣದಲ್ಲೇ ಎಲ್ಲವೂ ಗೊಂದಲ.ಬೆಂಕಿ, ಕೂಗು, ಓಡಾಟ…
ಅದೃಷ್ಟವಶಾತ್ ಸ್ಥಳೀಯರು ತಕ್ಷಣ ಧಾವಿಸಿ ಬಂದರು.ಮಕ್ಕಳನ್ನು ಕಾರಿನಿಂದ ಹೊರಗೆ ಎಳೆದು ಜೀವ ಉಳಿಸಿದರು.ಇಲ್ಲದಿದ್ದರೆ ಇನ್ನೊಂದು ದೊಡ್ಡ ದುರಂತ ಆಗಬಹುದಿತ್ತು.
ಆದರೆ…ಸಜೀರ್ ಮಾತ್ರ ಬದುಕಲಿಲ್ಲ.
ತೀವ್ರವಾಗಿ ಸುಟ್ಟು ಸ್ಥಳದಲ್ಲೇ ಸಾವನ್ನಪ್ಪಿದರು.ಪತ್ನಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡ್ತಿದ್ದಾರೆ.ಒಂದು ಕುಟುಂಬ ಸಂಪೂರ್ಣ ನಾಶ.ಮಕ್ಕಳ ಮುಂದೆ ತಂದೆಯ ಅಂತ್ಯ.ಒಬ್ಬ ಹೆಣ್ಣಿಗೆ ಬದುಕೋದೇ ಯುದ್ಧ.

ಇದೀಗ ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
“ಸಾಲಗಾರನ ಕಿರುಕುಳವೇ ಆತ್ಮಹತ್ಯೆಗೆ ಕಾರಣವೇ?” ಅನ್ನೋ ವಿಚಾರದಲ್ಲಿ ತನಿಖೆ ನಡೆಯುತ್ತಿದೆ.
ಕೊಡಗು–ವಯನಾಡ್ ಗಡಿ ಭಾಗದಲ್ಲಿ ಈ ಘಟನೆ ಜನರನ್ನೇ ಬೆಚ್ಚಿಬೀಳಿಸಿದೆ.
ಹೌದು ಹಣ ವಾಪಸ್ ಕೊಡದೇ ಸತಾಯಿಸುವುದು ಕೂಡ ಒಂದು ಅಪರಾಧ ಅಲ್ಲವಾ? ನಂಬಿಕೆ ಮೇಲೆ ಆಟ ಆಡುವವರಿಗೆ ಹೊಣೆಗಾರಿಕೆ ಇರಬಾರ್ದಾ?
ಈ ಕಥೆ ಹಣದ ಬಗ್ಗೆ ಅಲ್ಲ…
ಇದು ಮಾನಸಿಕ ಒತ್ತಡ, ಅಪಮಾನ, ನಿರಾಶೆ ಇವತ್ತಿನ ಸಮಾಜದಲ್ಲಿ ಎಷ್ಟು ಅಪಾಯಕಾರಿ ಅನ್ನೋದ್ರ ಬಗ್ಗೆ ಎಚ್ಚರಿಕೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version