Published
4 weeks agoon
By
Akkare News
ಮಂಗಳೂರು:ತಾಲೂಕಿನ ಬಜ್ಪೆ ಎಡಪದವಿನ ಮಚ್ಚೂರು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಕಾಮಗಾರಿ ನಡೆಯುತ್ತಿದ್ದು, ಇದೀಗ ಮಂಗಳೂರಿನಿಂದ ಮೂಡುಬಿದಿರೆ ಕಡೆಗೆ ಹಾಗೂ ಮೂಡುಬಿದಿರೆಯಿಂದ ಮಂಗಳೂರು ಕಡೆಗೆ ವಾಹನಗಳ ಓಡಾಟಕ್ಕೆ ಇದ್ದ ಹಳೆ ರಸ್ತೆಯು ಘನ ವಾಹನಗಳ ಓಡಾಟದಿಂದಾಗಿ ಬಿರುಕು ಬಿಟ್ಟು ಅಲ್ಲಲ್ಲಿ ಕುಸಿಯಲು ಪ್ರಾರಂಭಿಸಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಫೆ.
ಮಂಗಳೂರು ಕಡೆಯಿಂದ ಮೂಡುಬಿದಿರೆ ಕಡೆಗೆ ಸಂಚರಿಸುವ ಲಾರಿಗಳು ಇದೇ ರಸ್ತೆಯಲ್ಲಿ ಸಂಚರಿಸುವಂತೆ ಆಯುಕ್ತರು ತಿಳಿಸಿದ್ದಾರೆ.
ಮೂಡುಬಿದಿರೆ ಕಡೆಯಿಂದ ಮಂಗಳೂರು ಕಡೆಗೆ ಬರುವ ಸಾರ್ವಜನಿಕ ರೂಟ್ ಬಸ್ಸುಗಳು ಮತ್ತು ಸ್ಥಳೀಯರ ಲಘು ವಾಹನಗಳು ಮಾತ್ರ ದಡ್ಡಿ ಕ್ರಾಸ್ ಬಳಿ ಬಲಕ್ಕೆ ತಿರುಗಿ – ಪುಮಾರ್ ಪದವು ಕ್ರಾಸ್ – ಮಂಜನ ಕಟ್ಟೆ ಕ್ರಾಸ್ – ಅರ್ಜುನಕೋಡಿ – ಈಶ್ವರಕಟ್ಟೆ ಕ್ರಾಸ್ – ಮುಚ್ಚೂರು ಕ್ರಾಸ್ ಬಳಿ ಬಲಕ್ಕೆ ತಿರುಗಿ ಕೈಕಂಡ ಗುರುಪುರ ಮೂಲಕ ಮಂಗಳೂರು ಕಡೆಗೆ ಸಂಚರಿಸುವುದು.
ಮಂಗಳೂರು ಕಡೆಯಿಂದ ಗುರುಪುರ-ಕೈಕಂಬ ಮೂಲಕ ಮೂಡುಬಿದಿರೆ ಕಡೆಗೆ ಹೋಗುವ ಸಾರ್ವಜನಿಕ ರೂಟ್ ಬಸ್ಸುಗಳು ಮತ್ತು ಸ್ಥಳೀಯರ ಲಘು ವಾಹನಗಳು ಮಾತ್ರ ಗಂಜಿಮಠದಿಂದ ಮುಂದೆ ಮುಚ್ಚೂರು ಕ್ರಾಸ್ ಬಳಿ ಎಡಕ್ಕೆ ತಿರುಗಿ ಈಶ್ವರಕಟ್ಟೆ ಕ್ರಾಸ್-ಅರ್ಜುನಕೋಡಿ – ಮಂಜನ ಕಟ್ಟೆ ಕ್ರಾಸ್ -ಪುಮಾರ್ ಪದವು ಕ್ರಾಸ್- ದಡ್ಡಿ ಕ್ರಾಸ್ ಬಳಿ ಎಡಕ್ಕೆ ಸಂಚರಿಸಿ ಮೂಡಬಿದ್ರೆ ಕಡೆಗೆ ಹೋಗಬೇಕು.
ಮಂಗಳೂರು ಕಡೆಯಿಂದ ಮೂಡುಬಿದಿರೆ ಮೂಲಕ -ಕಾರ್ಕಳ ಕಡೆಗೆ ಸಂಚರಿಸುವ ಎಲ್ಲಾ ಲಾರಿಗಳು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸುರತ್ಕಲ್-ಮುಲ್ಕಿ-ಪಡುಬಿದ್ರೆಯಿಂದಾಗಿ ಕಾರ್ಕಳ ಕಡೆಗೆ ಸಂಚರಿಸುವುದು.ಮಾರ್ಗ ಬದಲಾವಣೆ ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆಗಳು ಇರುವುದರಿಂದ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸಿಎಚ್ ತಿಳಿಸಿದ್ದಾರೆ.