Published
3 weeks agoon
By
Akkare News
ಮೈಸೂರು ನಗರ ಸಿಸಿಬಿ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಕಾರ್ ಕಳ್ಳನನ್ನು ಬಂಧಿಸಿದ್ದಾರೆ.ಕೋಲಾರ ಜಿಲ್ಲೆ ಮುಳುಬಾಗಿಲು ತಾಲೂಕಿನ ಅರುಣ್ ಕುಮಾರ್ ಬಂಧಿತ. ಆರೋಪಿಯಿಂದ 14 ಲಕ್ಷ ಮೌಲ್ಯದ ಮಹೇಂದ್ರ ಥಾರ್ ವಾಹನ ಅಮಾನತ್ತು ಪಡಿಸಿಕೊಂಡಿದ್ದಾರೆ.ಬೆಂಗಳೂರಿನ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಥಾರ್ ಕಾರ್ ಕಳುವು ಮಾಡಿ ಇದೇ ವಾಹನವನ್ನ ಬಳಸಿಕೊಂಡು ಮೈಸೂರಿನ ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯ ಗೌಡ್ರು ಪೆಟ್ ಮೆಡಿಕಲ್ ಸ್ಟೋರ್ಸ್ ನಲ್ಲಿ 1,80,000/- ನಗದು,60 ಗ್ರಾಂ ಚಿನ್ನ ಹಾಗೂ 36 ಗ್ರಾಂ ಬೆಳ್ಳಿ ನಾಣ್ಯಗಳನ್ನ ಕಳವು ಮಾಡಿದ್ದ.ಸಿಸಿಬಿ ಪೊಲೀಸರು ಹಣೆದ ಬಲೆಗೆ ಅರುಣ್ ಕುಮಾರ್ ಸಿಕ್ಕಿಬಿದ್ದಿದ್ದಾನೆ.
ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿರುತ್ತದೆ.
ಸದರಿ ಕಾರ್ಯಾಚರಣೆಯಲ್ಲಿ ಸಿಸಿಬಿಯ ಪೊಲೀಸ್ ಇನ್ಸ್ಪೆಕ್ಟರ್ ನಾರಾಯಣಸ್ವಾಮಿ, ಪಿ.ಎಸ್.ಐ ಅನಿಲ್‌ಕುಮಾರ್.ಎನ್, ಎ.ಎಸ್.ಐ ಸುರೇಶ್.ಆರ್ ಹಾಗೂ ಸಿಬ್ಬಂದಿಗಳಾದ ಸಿಹೆಚ್‌ಸಿ 534 ಜಗದೀಶ್, ಸಿಹೆಚ್‌ಸಿ 132 ಪ್ರಕಾಶ್.ಟಿ, ಸಿಹೆಚ್‌ಸಿ 287 ಜಯರಾಮ್, ಸಿಪಿಸಿ 1128 ರಾಘವೇಂದ್ರ ಹಾಗೂ ಇತರೆ ಸಿಬ್ಬಂದಗಳು ಪಾಲ್ಗೊಂಡಿದ್ದು, ಸದರಿ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವೈಖರಿಯನ್ನು ಮೈಸೂರು ನಗರ ಪೊಲೀಸ್ ಆಯುಕ್ತರು ಶ್ಲಾಘಿಸಿರುತ್ತಾರೆ…