Connect with us

ಇತರ

ಬಿಲ್ಲವರ ಆಕ್ರೋಶಕ್ಕೆ ಕಾರಣವಾದ ಪ್ರಕರಣ ಬಿಲ್ಲವ ಸಮುದಾಯದ ನಿಂದನೆ ಆರೋಪ ಆರೋಪಿ ಅನಿತಾ’ಗೆ ಜೂನ್ 25 ರವರೆಗೆ ನ್ಯಾಯಾಂಗ ಬಂಧನ

Published

on

​ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಬಂಟ್ ಮತ್ತು ಬಿಲ್ಲವ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಅನಿತಾ ಕಾಸರಗೋಡು ಅವರನ್ನು ಬರ್ಕೆ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

 

​ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಜೂನ್ 25 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಿರುವೆರ್ ಕುಡ್ಲ ಸಂಘಟನೆಯ ರಾಕೇಶ್ ಪೂಜಾರಿ ಅವರು ಅನಿತಾ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

​ಪೊಲೀಸ್ ಮೂಲಗಳ ಪ್ರಕಾರ, ಅನಿತಾ ಕಾಸರಗೋಡು ಅವರನ್ನು ಬೆಂಗಳೂರಿನಲ್ಲಿರುವ ಅವರ ಸಹೋದರಿಯ ನಿವಾಸದಲ್ಲಿ ಪತ್ತೆಹಚ್ಚಿ ಅವರನ್ನು ಬಂಧಿಸಲಾಗಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version