Connect with us

ಇತರ

ವೆನ್ ಲಾಕ್: ರೋಗಿಗಳೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸಲು ಸೂಚನೆ

Published

on

​ಮಂಗಳೂರು, ಜೂನ್ 08 :- ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಗೆ ದಕ್ಷಿಣ ಕನ್ನಡ ಹಾಗೂ ಇತರ ಜಿಲ್ಲೆಗಳಿಂದ ಬಡವರು, ಹೆಚ್ಚಾಗಿ ಕನ್ನಡ ಮಾತನಾಡುವ, ಇತರ ಭಾಷೆಗಳ ಅರಿವಿಲ್ಲದ 90% ರೋಗಿಗಳು ಚಿಕಿತ್ಸೆಗಾಗಿ ಬರುತ್ತಿದ್ದು, ಕೆಲವೊಂದು ವೈದ್ಯರು, ಸ್ನಾತಕೋತ್ತರ ವಿದ್ಯಾರ್ಥಿಗಳು, ಇಂಟರ್ನ್‍ಗಳು ಕನ್ನಡದಲ್ಲಿ ವ್ಯವಹರಿಸದೇ ಇರುವುದರಿಂದ ರೋಗಿಗಳಿಗೆ ತೊಂದರೆಯಾಗುತ್ತಿರುವುದಾಗಿ ಹಾಗೂ ಕೆಲವೊಂದು ವೈದ್ಯರುಗಳು ಹಾಗೂ ವಿದ್ಯಾರ್ಥಿಗಳು ರೋಗಿಗಳಿಗೆ/ರೋಗಿಗಳ ಸಂಬಂಧಿಕರಿಗೆ ರೋಗಿಗೆ ನೀಡಲಾಗುತ್ತಿರುವ ಚಿಕಿತ್ಸೆಯ ವಿಧಾನ ಮತ್ತು ಪ್ರಗತಿಯ ಮಾಹಿತಿಯನ್ನು ತಿಳಿಸದೇ ಇರುವುದರಿಂದಲೂ ಜನಪ್ರತಿನಿಧಿಗಳಿಗೆ ಹಾಗೂ ನೇರವಾಗಿ ಕೆಳಸಹಿದಾರರಿಗೆ ಸಾಕಷ್ಟು ದೂರುಗಳು ಬರುತ್ತಿರುವುದು ಕಂಡು ಬಂದಿರುತ್ತದೆ.

 

ಆದುದರಿಂದ ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬರುವ ರೋಗಿಗಳೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸಬೇಕು. ಹೊರರಾಜ್ಯದಿಂದ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ 3 ತಿಂಗಳ ಒಳಗೆ ಕನ್ನಡವನ್ನು ಕಲಿಯಲೇಬೇಕು. ಅಲ್ಲಿಯವರೆಗೆ ರೋಗಿಗಳೊಂದಿಗೆ ವ್ಯವಹರಿಸಲು ವಿಭಾಗಗಳಲ್ಲಿರುವ ಇತರ ಸಿಬ್ಬಂದಿಗಳ ಸಹಾಯ ಪಡೆಯುವಂತೆ ವೆನ್‍ಲಾಕ್ ಅಧೀಕ್ಷಕ ಸೂಚಿಸಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version