Connect with us

ಇತರ

ಪುತ್ತೂರು | ತಲುವಾರು ಪ್ರದರ್ಶಿಸಿದ ವ್ಯಕ್ತಿಯ ವಿರುದ್ಧ ಪ್ರಕರಣ

Published

on

ಪುತ್ತೂರು :ನಗರದ ಹೊರವಲಯದ ಮುಕ್ವೆ ಜಂಕ್ಷನ್‌ನಲ್ಲಿ ರಾತ್ರಿ ತಲವಾರು ಝಳಪಿಸಿ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಗೆ ಸಂಬಂಧಿಸಿ ಮಹಮ್ಮದ್ ಸಿರಾಜುದ್ದೀನ್ ಎಂಬುವರು ನೀಡಿರುವ ದೂರಿನಂತೆ ಆರೋಪಿ ಮುಕ್ವೆಯ ಅಬ್ದುಲ್ ರಹಿಮಾನ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.

ಆರೋಪಿ ಅಬ್ದುಲ್ ರಹಿಮಾನ್ ಶುಕ್ರವಾರ ರಾತ್ರಿ ಮುಕ್ವೆ ಮಸೀದಿಯ ಬಳಿ ಬಂದು, ಗಲಾಟೆ ಎಬ್ಬಿಸಿದ್ದ. ಈ ವೇಳೆ ಮಸೀದಿ ಸಮಿತಿ ಸದಸ್ಯರು ಅಲ್ಲಿಂದ ಆತನನ್ನು ಕಳುಹಿಸಿದ್ದರು. ಮತ್ತೆ ಅಲ್ಲಿಗೆ ಬಂದ ಅಬ್ದುಲ್ ರಹಿಮಾನ್ ಕೈಯಲ್ಲಿ ತಲವಾರು ಹಿಡಿದು ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ. ಬಳಿಕ ಜನ ಸೇರುವುದನ್ನು ನೋಡಿ ಅಲ್ಲಿಂದ ರಿಕ್ಷಾವೊಂದರಲ್ಲಿ ತೆರಳಿದ್ದ ಎಂದು ಪೊಲೀಸರಿಗೆ ದೂರು ನೀಡಲಾಗಿತ್ತುಜನೆಯಡಿ ಉಚಿತವಾಗಿ ವಿತರಿಸಬೇಕಾದ ಈ ಅಕ್ಕಿಯನ್ನು ಅಪರಿಚಿತ ಮೂಲಗಳಿಂದ ಪಡೆದು, ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿಡಲಾಗಿತ್ತು ಎಂದು ಆರೋಪಿಸಲಾಗಿದೆ.ಒಟ್ಟು 9,200 ರೂ. ಮೌಲ್ಯದ 15 ಚೀಲಗಳಲ್ಲಿದ್ದ 400 ಕೆಜಿ ಅಕ್ಕಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಅಕ್ಕಿಯನ್ನು ತಲ್ಲೂರು ಟಿಎಎಂಪಿಎಂಸಿ ಗೋದಾಮಿನಲ್ಲಿ ಇರಿಸಲಾಗಿದೆ.
ಆಹಾರ ನಿರೀಕ್ಷಕರ ದೂರಿನ ಆಧಾರದ ಮೇಲೆ ಬೈಂದೂರು ಪೊಲೀಸರು ಅಗತ್ಯ ವಸ್ತುಗಳ ಕಾಯ್ದೆಯ ಸೆಕ್ಷನ್ 3, 6 ಮತ್ತು 7 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version