Connect with us

ಇತರ

ಪುತ್ತೂರು: ಅಕ್ಷಯ್‌ ಕಲ್ಲೇಗ ಕೊಲೆ ಪ್ರಕರಣ: 3ನೇ ಮತ್ತು 4ನೇ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು

Published

on

ಪುತ್ತೂರು: ಕಲ್ಲೇಗ ಟೈಗರ್ಸ್‌ ತಂಡದ ಮುಖ್ಯಸ್ಥ ಅಕ್ಷಯ್‌ ಕಲ್ಲೇಗ ಕೊಲೆ ಪ್ರಕರಣದ ಮೂರನೇ ಮತ್ತು ನಾಲ್ಕನೇ ಆರೋಪಿಗಳಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ನವೆಂಬರ್‌ 6,2023 ರಂದು ಪುತ್ತೂರಿನ ನೆಹರು ನಗರದಲ್ಲಿ ರಾತ್ರಿ ವೇಳೆ ಅಕ್ಷಯ್‌ ಕಲ್ಲೇಗ ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಅಕ್ಷಯ್‌ ಕಲ್ಲೇಗ ಪರಿಚಿತರಿಂದಲೇ ಹತ್ಯೆಗೀಡಾಗಿದ್ದರು. ಈ ಪ್ರಕರಣ ಸಂಬಂಧ ಪಡೀಲು ನಿವಾಸಿ ಮನೀಶ್‌, ಕೃಷ್ಣನಗರದ ಚೇತನ್‌, ಬನ್ನೂರಿನ ಮಂಜುನಾಥ್‌ ಯಾನೆ ಹರಿ ಹಾಗೂ ಕೇಶವ ಪಡೀಲ್‌ ಎಂಬುವವರನ್ನು ಪೊಲೀಸರು ಬಂಧನ ಮಾಡಿದ್ದರು.

ಪ್ರಕರಣದ 3 ನೇ ಆರೋಪಿ ಮಂಜುನಾಥ್‌ ಶೆಣೈ ಮತ್ತು 4 ನೇ ಆರೋಪಿ ಕೇಶವ ಪರವಾಗಿ ಹಿರಿಯ ವಕೀಲ ನರಸಿಂಹ ಪ್ರಸಾದ್‌ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಲಯವು ಇಬ್ಬರಿಗೂ ಜಾಮೀನು ನೀಡಿ ಆದೇಶಿಸಿದ್ದಾರೆ.

ತಲಾ 1 ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್‌ ಸಲ್ಲಿಸುವುದು, ಪ್ರಕರಣದ ಸಾಕ್ಷಿಗಳಿಗೆ ಯಾವುದೇ ರೀತಿಯ ಬೆದರಿಕೆ ಹಾಕಬಾರದು ಅಥವಾ ಸಾಕ್ಷ್ಯ ನಾಶಕ್ಕೆ ಯತ್ನ ಮಾಡಬಾರದು. ವಿಚಾರಣಾ ಸಮಯದಲ್ಲಿ ತಪ್ಪದೇ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version