Connect with us

ಇತರ

ಪುತ್ತೂರು: ವಿಶ್ವನಾಥ ಪೂಜಾರಿ ಮುಂಡೋಡಿ ಸೇನೆಯಿಂದ ನಿವೃತ್ತಿ..!!

Published

on

ಪುತ್ತೂರು: ತಾಲೂಕಿನ ಶಾಂತಿಗೋಡು ಗ್ರಾಮದ ಮುಂಡೋಡಿ ದಿ. ಜತ್ತಪ್ಪ ಪೂಜಾರಿ ಮತ್ತು ಪುಷ್ಪಾವತಿ ದಂಪತಿ ಪುತ್ರ ವಿಶ್ವನಾಥ ಪೂಜಾರಿ ಅವರು ಮಾ 31ರಂದು ಭಾರತೀಯ ಸೇನೆಯಿಂದ ನಿವೃತ್ತಿ ಹೊಂದಲಿದ್ದಾರೆ.

ವಿಶ್ವನಾಥ ಪೂಜಾರಿ ಅವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಡ್ಕದಲ್ಲಿ ಹಾಗೂ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಎಸ್ .ಜಿ. ಎಂ ಶಾಲೆ ಭಕ್ತಕೋಡಿಯಲ್ಲಿ ಮುಗಿಸಿ 14 ಮಾರ್ಚ್ 2002ರಲ್ಲಿ ಭಾರತೀಯ ಸೇನೆಗೆ ನೇಮಕಗೊಂಡಿರುತ್ತಾರೆ. ಸೇನಾ ತರಬೇತಿಯನ್ನು ಆಂಧ್ರಪ್ರದೇಶದ ಹೈದರಾಬಾದ್‌ನಲ್ಲಿ ಮುಗಿಸಿ 113 medium regimentನಲ್ಲಿ ದೇಶದ ವಿವಿಧ ಕಡೆಗಳಲ್ಲಿ ತನ್ನ ಸೇವೆಯನ್ನು ಮಾಡಿರುತ್ತಾರೆ. ಸಿಕ್ಕಿಮ್, ಪಂಜಾಬ್, ಮಹಾರಾಷ್ಟ್ರ, ಉತ್ತರಖಂಡ, ಜಮ್ಮು ಕಾಶ್ಮೀರ, ರಾಜಸ್ಥಾನ್‌, ಡೆಲ್ಲಿ ಮತ್ತು ಲಡಾಕ್ ನಂತಹ ಹಿಮಬಾಧಿತ ಪ್ರದೇಶಗಳಲ್ಲಿ ಸುದೀರ್ಘ 24 ವರ್ಷಗಳ ಸೇವೆಯನ್ನು ಸಲ್ಲಿಸಿ 2026 31ರಂದು ನಿವೃತ್ತಿಯನ್ನು ಹೊಂದಲಿದ್ದಾರೆ.


Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version