Connect with us

ಇತರ

ಕೊಡಿಮರದ ಅಡಿಯಲ್ಲಿ ಕುಳಿತುಕೊಂಡು ಪ್ರತಿಭಟಿಸುವುದು ಎಂಬುದು ಸತ್ಯಕ್ಕೆ ದೂರವಾದದ್ದು : ವಿಕ್ರಂ ಮಯ್ಯ ಆಚಾರ್ಯ ಅಧ್ಯಕ್ಷರ ಹೇಳಿಕೆ. ಪಿ. ಜಿ ಜಗನ್ನಿವಾಸ್ ರಾವ್ ನ್ನು ಓಲೈಕೆ ಮಾಡುವಂಥದ್ದು

Published

on

ಪುತ್ತೂರು ಏ 09: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಧ್ವಜಸ್ತಂಭದ ಬಳಿ ಪ್ರತಿಭಟನೆ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸತ್ಯಕ್ಕೆ ದೂರುವಾದದ್ದು ಎಂದು ವಿಶ್ವಕರ್ಮ ಯುವ ಮಿಲನ ಸ್ಪಷ್ಟಣೆ ನೀಡಿದೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ವಿಶ್ವಕರ್ಮ ಯುವ ಮಿಲನದ ಅಧ್ಯಕ್ಷ ವಿಕ್ರಂ ಮಯ್ಯ ಆಚಾರ್ಯ, ವಿಶ್ವಕರ್ಮ ಸಮುದಾಯದ ಹೆಣ್ಣು‌ಮಗಳಿಗೆ ಅನ್ಯಾಯ ಆಗಿದೆ.

ಸಂತ್ರಸ್ತೆಯ ಮನೆಯವರಿಗೆ ಪಿ.ಜಿ.ಜಗನ್ನಿವಾಸ ರಾವ್ ಅವರು ಮಾತುಕೊಟ್ಟು ಈಗ ಮೌನವಾಗಿದ್ದಾರೆ. ಇದನ್ನ ಪ್ರಶ್ನಿಸಿ ನಾವು ಪತ್ರಿಕಾಗೋಷ್ಠಿಯಲ್ಲಿ ಪಿ.ಜಿ ಜಗನ್ನಿವಾಸ ರಾವ್ ಅವರನ್ನ ದೇವಳದ ಚಾಕರಿ ಕೆಲಸದಿಂದ ತೆಗೆದುಹಾಕಬೇಕೆಂದಿದ್ದೆವು. ಹಾಗೆಯೇ ದೇವಾಲಯದಲ್ಲಿ ಈ ಬಗ್ಗೆ ಪ್ರಾರ್ಥನೆ ಮಾಡಿ ನ್ಯಾಯ ಕೇಳುವುದಾಗಿ ಹೇಳಿದ್ದೆವು. ಅದರಂತೆ ಇಂದು ಮಹಾಲಿಂಗೇಶ್ವರ ದೇವಾಲಯದಲ್ಲಿ ಪ್ರಾರ್ಥನೆ ಮಾಡಿ, ಆ ಸಂತ್ರಸ್ತೆ ಹೆಣ್ಣು ಮಗಳಿಗೆ ಆದ ಅನ್ಯಾಯಕ್ಕೆ ಯಾರು ಸಾಕ್ಷಿಯಾಗಿದ್ದಾರೋ ಅವರಿಗೆ ಬುದ್ಧಿ ಕೊಡಲಿ ಎಂದು ದೇವರ ಬಳಿ ಕೇಳಿಕೊಂಡಿದ್ದೇವೆ. ಅದು ಬಿಟ್ಟು ನಾಳೆ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಆರಂಭದ ಸಲುವಾಗಿ ನಡೆಯುವ ಧ್ವಜಾರೋಹಣ ಸಂದರ್ಭ ಧ್ವಜಸ್ತಂಭದ ಅಡಿಯಲ್ಲಿ ಕುಳಿತುಕೊಂಡು ಪ್ರತಿಭಟಿಸುವುದು ಎಂಬುದು ಸತ್ಯಕ್ಕೆ ದೂರವಾದದ್ದು ಎಂದು ಹೇಳಿದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version