Published
12 hours agoon
By
Akkare News

ಬಕ್ರೀದ್ ಸಂದರ್ಭ ಮುಸ್ಲಿಮರು ಕುರ್ಬಾನಿ ಆಚರಣೆ ಮಾಡಲು ರಾಜ್ಯದ ಗೋಹತ್ಯೆ ನಿಷೇಧ ಕಾನೂನನ್ನು ಸಡಿಲಿಸ ಬೇಕು. ಪ್ರಾಣಿ ಬಲಿ ಅಥವಾ ಪ್ರಾಣಿಗಳ ಸಾಗಣೆಗೆ ಯಾವುದೇ ಸಂಘಟನೆಗಳು ಅಡ್ಡಿಪಡಿಸದಂತೆ ಸೂಕ್ತ ಭದ್ರತೆ ಒದಗಿಸಬೇಕು. ಮಂಗಳೂರಿನ ಕುದ್ರೋಳಿಯಲ್ಲಿರುವ ಕಸಾಯಿಖಾನೆಯನ್ನು 4 ವರ್ಷಗಳಿಂದ ಮುಚ್ಚಲಾಗಿದೆ. ಪರವಾನಗಿ ಪಡೆದ ಸೌಲಭ್ಯಗಳಲ್ಲಿ ಕಸಾಯಿ ಮಾಡಲು ಅವಕಾಶವಿದ್ದರೂ ಅದು ಮುಚ್ಚಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕೂಡಲೇ ಅದನ್ನು ಪುನಾರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.
ಲೀಗ್ ಮುಖಂಡರಾದ ರಿಯಾಝ್ ಹರೇಕಳ, ಮುಹಮ್ಮದ್ ಇಸ್ಮಾಯಿಲ್ ಹಾಜಿ, ಬಿ.ಎ. ಮುಹಮ್ಮದ್ ಹಾಜಿ, ಕೆ.ಸಿ. ಖಾದರ್ ಕಾವೂರು ನಿಯೋಗದಲ್ಲಿದ್ದರು. 



