ಅಭಿವೃದ್ಧಿ ಕಾರ್ಯಗಳು ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ಧಾರ್ಮಿಕ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಆರ್ಲಪದವು ಪೂಮಾಣಿ-ಕಿನ್ನಿಮಾಣಿ , ಪಿಲಿಭೂತ ದೈವಸ್ಥಾನದ ಜೀರ್ಣೋದ್ಧಾರ ಕೆಲಸಕಾರ್ಯಗಳಿಗೆ ಆರ್ಲಪದವು ಪುಲಿತ್ತಡಿ ಬಳಗದಿಂದ ದೇಣಿಗೆ.Published
10 months agoon
By
Akkare Newsಪಾಣಾಜೆ : ಈ ಸಲದ 2024 ರ ಜಾತ್ರೋತ್ಸವ ಸಂದರ್ಭದಲ್ಲಿ ಆರ್ಲಪದವು ದೈವಸ್ಥಾನದ ವಠಾರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಸಲುವಾಗಿ ಜನವರಿ 26 ರಂದು ಗೆಂದಗಿಡಿ ಎಂಬ ನಾಟಕವನ್ನು ಪುಲಿತ್ತಡಿ ಬಳಗ ಸಾದರಪಡಿಸಡಿಸಿ ಈ ಕಾರ್ಯಕ್ರಮಗಳ ಖರ್ಚು ವೆಚ್ಚಗಳನ್ನು ಭರಿಸಿ ಉಳಿತಾಯವಾದ ರೂ 20,000 ಹಣವನ್ನು ದೈವಸ್ಥಾನದಲ್ಲಿ ಫೆಬ್ರವರಿಯ ಸಂಕ್ರಮಣದ ಸೇವೆ ನಡೆಯುತ್ತಿರುವ ಸಂದರ್ಭದಲ್ಲಿ ಜಗನ್ಮೋಹನ್ ರೈ ಸೂರಂಬೈಲು ಹಾಗೂ
ಶಿವಕುಮಾರ್ ಭಟ್ ಗುವೆಲುಗದ್ದೆ ಅವರ ಸಮ್ಮುಖದಲ್ಲಿ ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀಕೃಷ್ಣ ಬೋಳಿಲ್ಲಾಯರವರ ಕೈ ಗೆ ಆರ್ಲಪದವು ಪುಲಿತ್ತಡಿ ಬಳಗದ ಸದಸ್ಯರು ನೀಡಿದರು. ಈ ಸಂದರ್ಭದಲ್ಲಿ ಪುಲಿತ್ತಡಿ ಬಳಗದ ನಂದಕುಮಾರ್ ಅರ್ಲಪದವು, ಪ್ರಕಾಶ್ ಕುಲಾಲ್ ಆರ್ಲಪದವು, ಕಿಶೋರ್ ಕುಮಾರ್ ಆರ್ಲಪದವು, ಜಿ.ಎಸ್ ಹರೀಶ್ ಆರ್ಲಪದವು ಹಾಗೂ ಅಭಿ ಆರ್ಲಪದವು ಉಪಸ್ಥಿತರಿದ್ದರು.