ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿವೃದ್ಧಿ ಕಾರ್ಯಗಳು

ಆರ್ಲಪದವು ಪೂಮಾಣಿ-ಕಿನ್ನಿಮಾಣಿ , ಪಿಲಿಭೂತ ದೈವಸ್ಥಾನದ ಜೀರ್ಣೋದ್ಧಾರ ಕೆಲಸಕಾರ್ಯಗಳಿಗೆ ಆರ್ಲಪದವು ಪುಲಿತ್ತಡಿ ಬಳಗದಿಂದ ದೇಣಿಗೆ.

Published

on

ಪಾಣಾಜೆ : ಈ ಸಲದ 2024 ರ ಜಾತ್ರೋತ್ಸವ ಸಂದರ್ಭದಲ್ಲಿ ಆರ್ಲಪದವು ದೈವಸ್ಥಾನದ ವಠಾರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಸಲುವಾಗಿ ಜನವರಿ 26 ರಂದು ಗೆಂದಗಿಡಿ ಎಂಬ ನಾಟಕವನ್ನು ಪುಲಿತ್ತಡಿ ಬಳಗ ಸಾದರಪಡಿಸಡಿಸಿ ಈ ಕಾರ್ಯಕ್ರಮಗಳ ಖರ್ಚು ವೆಚ್ಚಗಳನ್ನು ‌ಭರಿಸಿ ಉಳಿತಾಯವಾದ ರೂ 20,000 ಹಣವನ್ನು ದೈವಸ್ಥಾನದಲ್ಲಿ ಫೆಬ್ರವರಿಯ ಸಂಕ್ರಮಣದ ಸೇವೆ ನಡೆಯುತ್ತಿರುವ ಸಂದರ್ಭದಲ್ಲಿ ಜಗನ್ಮೋಹನ್ ರೈ ಸೂರಂಬೈಲು ಹಾಗೂ





ಶಿವಕುಮಾರ್ ಭಟ್ ಗುವೆಲುಗದ್ದೆ ಅವರ ಸಮ್ಮುಖದಲ್ಲಿ ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀಕೃಷ್ಣ ಬೋಳಿಲ್ಲಾಯರವರ ಕೈ ಗೆ ಆರ್ಲಪದವು ಪುಲಿತ್ತಡಿ ಬಳಗದ ಸದಸ್ಯರು ನೀಡಿದರು. ಈ ಸಂದರ್ಭದಲ್ಲಿ ಪುಲಿತ್ತಡಿ ‌ಬಳಗದ ನಂದಕುಮಾರ್ ಅರ್ಲಪದವು, ಪ್ರಕಾಶ್ ಕುಲಾಲ್ ಆರ್ಲಪದವು, ಕಿಶೋರ್ ಕುಮಾರ್ ಆರ್ಲಪದವು, ಜಿ.ಎಸ್ ಹರೀಶ್ ಆರ್ಲಪದವು ಹಾಗೂ ಅಭಿ‌ ಆರ್ಲಪದವು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version