ಅಭಿವೃದ್ಧಿ ಕಾರ್ಯಗಳು ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಚುನಾವಣೆ ಜೀವನಶೈಲಿ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ವಿಶೇಷ ವರದಿ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಕಬಕ ಗ್ರಾಮದ ೨೪ ಮಂದಿಗೆ ನಿವೇಶನ ಹಕ್ಕುಪತ್ರ ವಿತರಣೆ ತಾಲೂಕಿನ ಪ್ರತೀ ಗ್ರಾಮದಲ್ಲೂ ಬಡವರಿಗೆ ನಿವೇಶನ ನೀಡುವಲ್ಲಿ ಕ್ರಮ: ಶಾಸಕ ಅಶೋಕ್ ರೈPublished
10 months agoon
By
Akkare Newsಪುತ್ತೂರು; ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿರುವ ಪ್ರತೀ ಗ್ರಾಮದಲ್ಲೂ ಸರಕಾರಿ ಜಾಗವನ್ನು ಗುರುತಿಸಿ ಅದನ್ನು ನಿವೇಶನ ರಹಿತ ಬಡವರಿಗೆ ಹಂಚುವಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.ಅವರು ಕಬಕ ಗ್ರಾಮದಲ್ಲಿ ಸುಮಾರು ೨೪ ಮಂದಿ ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಣೆ ಮಡಿ ಮಾತನಾಡಿದರು.
ನನ್ನ ಕಚೇರಿಗೆ ಸುಮಾರು ೨೫೦೦ ಮಂದಿ ಮನೆ ಇಲ್ಲ, ಜಾಗವಿಲ್ಲ ನಿವೆಶನ ಕೊಡಿ ಎಂದು ಕೇಳಿಕೊಂಡು ಬಂದಿದ್ದಾರೆ. ಟ್ರಸ್ಟ್ ಗೆ ಈಗಾಗಲೇ ಒಂದು ಸಾವಿರ ಅರ್ಜಿಗಳು ಬಂದಿದೆ. ಕ್ಷೇತ್ರದಲ್ಲಿ ಮನೆ ಇಲ್ಲದೆ ಬಾಡಿಗೆ ಮನೆಯಲ್ಲೇ ಕಾಲ ಕಳೆಯುವ ಅನೇಕ ಕುಟುಂಬಗಳಿವೆ ಅವರು ಸಂಕಷ್ಟದ ಜೀವನ ನಡೆಸುತ್ತಿದ್ದು ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯೊಇಂದ ಅವರಿಗೆ ಉಸಿರುಬಿಡುವಂತಾಗಿದೆ ಎಂದು ಶಾಶಕರು ಹೇಳಿದರು.
ನಿವಶೇನ ಪಡೆದುಕೊಂಡ ಪ್ರತೀ ಕುಟುಂಬಗಳಿಗೂ ಸರಕಾರದಿಂದ ಮನೆ ನಿರ್ಮಾಣಕ್ಕೆ ನೆರವನ್ನು ನೀಡಲಾಗುವುದ. ಮುಂದಿನ ಐದು ವರ್ಷದಲ್ಲಿ ಪುತ್ತೂರು ವಿಧಾನಸಭಾ ಕ್ಷೆತ್ರ ವ್ಯಾಪ್ತಿಯಲ್ಲಿ ಯಾರೂ ಮನೆ ಇಲ್ಲದವರು ಇರಬಾರದು ಎಂಬುದಕ್ಕೆ ನಾನು ಸಂಕಲ್ಪ ಮಾಡಿದ್ದೇನೆ ಎಂದು ಹೇಳಿದರು.
ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷೆ ಸುಶೀಲಾ ಉಪಾಧ್ಯಕ್ಷೆ ಗೀತಾ, , ತಾಪಂ ಕಾರ್ಯನಿರ್ವಹಣಾಧಿಕಾರಿ ವಿಎಚ್ ಇಬ್ರಾಹಿಂಪುರ್, ಗ್ರಾಪಂ ಸದಸ್ಯರಾದ ಸಾಬಾ, ವಿನಯ್ ಉಪಸ್ಥಿತರಿದ್ದರು. ಗ್ರಾಪಂ ಪಿಡಿಒ ಆಶಾ ಸ್ವಾಗತಿಸಿ ವಂದಿಸಿದರು.