ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿವೃದ್ಧಿ ಕಾರ್ಯಗಳು

ಮಂಗಳೂರು: ಇನ್ಫೊಸಿಸ್‌ ಸ್ಪ್ರಿಂಗ್ ಬೋರ್ಡ್ ವೇದಿಕೆಯು ಇತ್ತೀಚಿಗೆ ಬಿಡುಗಡೆಗೊಳಿಸಿರುವ ಜಾಹೀರಾತಿನಲ್ಲಿ ಪುತ್ತೂರಿನ ಬನ್ನೂರು ನಿವಾಸಿ ದೀಕ್ಷಿತ್ ಕುಮಾರ್

Published

on

ಮಂಗಳೂರು: ಇನ್ಫೊಸಿಸ್‌ ಸ್ಪ್ರಿಂಗ್ ಬೋರ್ಡ್ ವೇದಿಕೆಯು ಇತ್ತೀಚಿಗೆ ಬಿಡುಗಡೆಗೊಳಿಸಿರುವ ಜಾಹೀರಾತಿನಲ್ಲಿ ಪುತ್ತೂರಿನ ಬನ್ನೂರು ನಿವಾಸಿ ದೀಕ್ಷಿತ್ ಕುಮಾರ್ ಕಾಣಿಸಿಕೊಂಡಿದ್ದಾರೆ.ಇನ್ಫೊಸಿಸ್ ಸಂಸ್ಥೆಯು ಉಚಿತವಾಗಿ ಒದಗಿಸುವ ಕಲಿಕಾ ವೇದಿಕೆ ‘ಇನ್ಫೊಸಿಸ್‌ ಸ್ಪ್ರಿಂಗ್ ಬೋರ್ಡ್’ಗೆ ಕೊಡುಗೆ ನೀಡಿದ ನಾಲ್ವರನ್ನು ಆಯ್ಕೆ ಮಾಡಿ ಜಾಹೀರಾತನ್ನು ಸಿದ್ಧಪಡಿಸಿತ್ತು.

ಒಬ್ಬ ಶಿಕ್ಷಕ ವಿದ್ಯಾರ್ಥಿಗಳಿಗೆ ತರಗತಿಯಿಂದ ಆಚೆಗೆ ಆನ್ಲೈನ್ ಶಿಕ್ಷಣವನ್ನು ಹೇಗೆ ಪರಿಚಯಿಸಬಹುದು ಎಂಬ ನೈಜ ಘಟನೆ ಆಧರಿತ ಜಾಹೀರಾತು ಇದಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಜಗತ್ತಿನೆಲ್ಲೆಡೆ ಇದು ಪ್ರಸಾರವಾಗಲಿದೆ.







ಯಾವುದೇ ವಿದ್ಯಾರ್ಥಿಗಳು ‘ಇನ್ಫೊಸಿಸ್‌ ಸ್ಪ್ರಿಂಗ್ ಬೋರ್ಡ್’ ವೇದಿಕೆಯಲ್ಲಿ ನೋಂದಾಯಿಸಿಕೊಂಡು ತಮ್ಮ ಪಠ್ಯ ಹಾಗೂ ಪಠ್ಯೇತರ ವಿಷಯಗಳಿಗೆ ಸಂಬಂಧಿಸಿದಂತೆ 20 ಸಾವಿರಕ್ಕೂ ಅಧಿಕ ಕೋರ್ಸುಗಳನ್ನು ಉಚಿತವಾಗಿ ಕಲಿಯಲು ಅವಕಾಶವಿದೆ. ಕಾಲೇಜುಗಳಲ್ಲಿ ವಿಶೇಷ ಕಾರ್ಯಾಗಾರಗಳ ಮೂಲಕ ದೇಶಾದ್ಯಂತ 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈ ವೇದಿಕೆಯನ್ನು ಪರಿಚಯಿಸಲಾಗಿದೆ.

ಚಿಕ್ಕಮಗಳೂರಿನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ದೀಕ್ಷಿತ್‌, ಸ್ಪ್ರಿಂಗ್ ಬೋರ್ಡ್‌ನಲ್ಲಿ ನೋಂದಣಿ ಮಾಡಿಸುವ ಕುರಿತ ವಿಡಿಯೊವನ್ನು ಸಿದ್ಧಪಡಿಸಿದ್ದರು. ಅದನ್ನು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಹಂಚಿಕೊಂಡಿದ್ದರು. ಇದು ಇನ್ಫೊಸಿಸ್ ಸಂಸ್ಥೆಯ ಪ್ರಶಂಸೆಗೆ ಪಾತ್ರವಾಗಿತ್ತು ಎಂದು ಪ್ರಕಟಣೆ ತಿಳಿಸಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version