ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿವೃದ್ಧಿ ಕಾರ್ಯಗಳು

ಅಂಬಿಕಾ ವಿದ್ಯಾಲಯದ 13 ವರ್ಷಗಳ ಕಾಲ ಕೋರ್ಟು ಕಚೇರಿಯಲ್ಲಿ ಮುಗಿಯದ ರಸ್ತೆ ವಿವಾದವನ್ನು ಕೇವಲ ಅರ್ಧ ಗಂಟೆಯಲ್ಲಿ ಮಾತುಕತೆಯ ಮುಖಾಂತರ ಇತ್ಯರ್ಥ ಗೊಳಿಸಿದ : ಶಾಸಕ ಅಶೋಕ್ ಕುಮಾರ್ ರೈ

Published

on

ಪುತ್ತೂರು : ಶಾಲಾ ಆಡಳಿತ ಮಂಡಳಿ ಮತ್ತು ಖಾಸಗಿ ವ್ಯಕ್ತಿಯೊಬ್ಬರ ನಡುವೆ 12 ವರ್ಷಗಳಿಂದ ಇದ್ದ ರಸ್ತೆ ವಿವಾದವೊಂದು ಅರ್ಧ ಗಂಟೆಯಲ್ಲಿ ಪುತ್ತೂರಿನ ಶಾಸಕರು (Ashok Kumar Rai) ಇತ್ಯರ್ಥಗೊಳಿಸಿದ ಘಟನೆ ಎ.8 ರಂದು ನಡೆಯಿತು.ಬಪ್ಪಳಿಗೆ ಅಂಬಿಕಾ ಸಿಬಿಎಸ್‌ಇ ವಿದ್ಯಾಲಯ ಮತ್ತು ಪಿಯು ಕಾಲೇಜಿಗೆ ಹೋಗುವ ರಸ್ತೆ ಇಕ್ಕಟ್ಟಾಗಿದ್ದು, ಹಲವು ವರ್ಷಗಳಿಂದ ಈ ರಸ್ತೆಯನ್ನು ಅಗಲಗೊಳಿಸಲು ಅಂಬಿಕಾ ವಿದ್ಯಾಲಯದ ಮುಖ್ಯಸ್ಥರಾದ ಸುಬ್ರಹ್ಮಣ್ಯ ನಟ್ಟೋಜರು ಪ್ರಯತ್ನಿಸಿದರೂ ಆ ವ್ಯಕ್ತಿ ಒಪ್ಪಿಕೊಂಡಿರಲಿಲ್ಲ.









ಇಂದು ಬೆಳಿಗ್ಗೆ ನೇರ ಅಂಬಿಕಾ ವಿದ್ಯಾಲಯಕ್ಕೆ ಹೋದ ಪುತ್ತೂರು ಶಾಸಕರು ಎರಡು ಪಾರ್ಟಿಗಳಲ್ಲಿಯೂ ಮಾತುಕತೆ ನಡೆಸಿ ವಿವಾದವನ್ನು ಅರ್ದ ಗಂಟೆಯಲ್ಲಿ ಇತ್ಯರ್ಥಗೊಳಿಸಿದರು.

20 ಫೀಟ್ ಅಗಲದ ಸುಂದರ ರಸ್ತೆ ಶಾಲೆಗೆ ಸಿಗಲಿದೆ ಎಂದು ಅಶೋಕ್ ರೈ ಹೇಳಿದರು.ಶಾಸಕರಿಗೆ ಅಂಬಿಕಾ ವಿದ್ಯಾಲಯದ ಸಂಚಾಲಕರಾದ ಸುಬ್ರಹ್ಮಣ್ಯ ನಟ್ಟೋಜರು ಧನ್ಯವಾದ ಸಮರ್ಪಿಸಿದರು.





ಹಲವು ವರ್ಷಗಳಿಂದ ಇದ್ದ ಸಮಸ್ಯೆಯನ್ನು ಇತ್ಯರ್ಥಗೊಳಿಸಿದ ಅಶೋಕ್ ರೈ ಗಳಿಗೆ ಆಡಳಿತ ಮಂಡಳಿ ಮತ್ತು ವಿದ್ಯಾಸಂಸ್ಥೆಯ 1500 ವಿದ್ಯಾರ್ಥಿಗಳ ಪರವಾಗಿ ಧನ್ಯವಾದಗಳು ಎಂದರು.

ಶಾಸಕರ ಜೊತೆ ಪುಡಾ ಅಧ್ಯಕ್ಷ ಭಾಸ್ಕರ ಕೋಡಿಂಬಾಳ, ಉದ್ಯಮಿ ಶಿವರಾಮ್ ಆಳ್ವ ಎನ್ .ಕೆ ಜಗನ್ನಿವಾಸ ರಾವ್, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಡಾ. ರಾಜರಾಮ್, ಮುರಳೀಧರ್ ರೈ ಮಠಂತಬೆಟ್ಟು, ಪ್ರಸನ್ನ ಶೆಟ್ಟಿ ಸಿಜ್ಜರ್‌, ಜಯಪ್ರಕಾಶ್ ಬದಿನಾರು ಉಪಸ್ಥಿತರಿದ್ದರು.ಕೋಡಿಂಬಾಡಿಯ ಪರನೀರು ರಸ್ತೆಯ 30 ವರ್ಷಗಳ ವಿವಾದವನ್ನು ಮತ್ತು ಪಾಣಾಜೆಯ ಕಟ್ಟೆ ವಿವಾದವನ್ನು ಅಶೋಕ್ ರೈ ಇತ್ಯರ್ಥಗೊಳಿಸಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version