ಅಭಿವೃದ್ಧಿ ಕಾರ್ಯಗಳು ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಚುನಾವಣೆ ಜೀವನಶೈಲಿ ತಂತ್ರಜ್ಞಾನ ಧಾರ್ಮಿಕ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಕುದ್ಮಾರು ಕೆಡೆಂಜಿಗುತ್ತು ಧರ್ಮ ಚಾವಡಿಯಲ್ಲಿ ಪುನರ್ ಪ್ರತಿಷ್ಠಾ ಕಲಶ, ಗೃಹಪ್ರವೇಶ, ಶ್ರೀ ಮದ್ಭಾಗವತ ಸಪ್ತಾಹಕ್ಕೆ ಚಾಲನೆPublished
1 year agoon
By
Akkare Newsಕಡಬ : ತಾಲೂಕಿನ ಕುದ್ಮಾರು ಗ್ರಾಮದ ಕೆಡೆಂಜಿಗುತ್ತು ಧರ್ಮ ಚಾವಡಿಯಲ್ಲಿ ಪುನರ್ ಪ್ರತಿಷ್ಠಾ ಕಲಶ, ಗೃಹಪ್ರವೇಶ ಹಾಗೂ ಶ್ರೀ ಮದ್ಭಾಗವತ ಸಪ್ತಾಹಕ್ಕೆ ಬುಧವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅಂಗವಾಗಿ ಏ.24 ರಂದು ಬೆಳಿಗ್ಗೆ 6ಕ್ಕೆ ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ವಿಷ್ಣುಸಹಸ್ರನಾಮ ಪಾರಾಯಣ ಆರಂಭ, 6. 30ಕ್ಕೆ ಶ್ರೀ ಮದ್ಭಾಗವತ ಪಾರಾಯಣ ಆರಂಭ, ಕೃಷ್ಣ ಪೂಜೆ, 8.30 ಕ್ಕೆ ಮಹಾಮಂಗಳಾರತಿ ನಡೆದು ಬಳಿಕ ಪ್ರಸಾದ ವಿತರಣೆ ನಡೆಯಿತು.
9.30 ರಿಂದ 12.30 ರ ತನಕ ಪಾರಾಯಣ, ಕಲ್ಲೋಕ್ತ ಪೂಜೆ, ಮಧ್ಯಾಹ್ನ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆಯಾಗಿ ಬಳಿಕ ಅನ್ನಸಂತರ್ಪಣೆ ಸಂಕೀರ್ತನೆ, ಬಳಿಕ 8.30 ರ ತನಕ ಕಥಾಪ್ರವಚನ, 8.45 ಕ್ಕೆ ಕಥಾ ಮಂಗಳ, ಪೂಜೆ, ಪ್ರಸಾದ ವಿತರಣೆ ನಡೆದು ಬಳಿಕ ಪ್ರಸಾದ ಭೋಜನೆ ನಡೆಯಿತು.