ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಲಾಖಾ ಮಾಹಿತಿ

ಮುಂಬೈ | ಖಾಸಗಿ ಕಾಲೇಜು ಹೇರಿದ್ದ ಹಿಜಾಬ್ ನಿಷೇಧಕ್ಕೆ ಸುಪ್ರೀಂ ಕೋರ್ಟ್ ತಡೆ

Published

on

ಕ್ಯಾಂಪಸ್‌ನೊಳಗೆ ಹಿಜಾಬ್, ನಕಾಬ್, ಬುರ್ಖಾ, ಶಾಲು, ಟೋಪಿ ಇತ್ಯಾದಿಗಳನ್ನು ಧರಿಸುವುದನ್ನು ನಿಷೇಧಿಸಿದ್ದ ಮುಂಬೈ ಕಾಲೇಜಿನ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.

ಪ್ಯಾರಿಸ್ ಒಲಿಂಪಿಕ್ಸ್‌ನ 50 ಕೆಜಿ ಕುಸ್ತಿ ವಿಭಾಗದ ಫೈನಲ್ ಪಂದ್ಯಕ್ಕೂ ಮುನ್ನ ನಿಗದಿತ ತೂಕಕ್ಕಿಂತ 100 ಗ್ರಾಂ ಅಧಿಕವಾಗಿದ್ದ ಕಾರಣ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅನರ್ಹಗೊಂಡಿದ್ದರು. ಈ ನಿರ್ಧಾರವನ್ನು ಪ್ರಶ್ನಿಸಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ವಿನೇಶ್ ಅರ್ಜಿ ಸಲ್ಲಿಸಿದ್ದರು.

 

ಮುಂಬೈನ ಎನ್‌ಜಿ ಆಚಾರ್ಯ ಮತ್ತು ಡಿಕೆ ಮರಾಠೆ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ. ಕಾಲೇಜಿನ ನಿಯಮಗಳನ್ನು ಎತ್ತಿ ಹಿಡಿದಿದ್ದ ಬಾಂಬೆ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

 

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಸಂಜಯ್ ಕುಮಾರ್ ಅವರ ಪೀಠವು ಕಾಲೇಜು ವಿಧಿಸಿರುವ ಷರತ್ತುಗಳ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದೆ.

ವಿದ್ಯಾರ್ಥಿಗಳ ಧರ್ಮವನ್ನು ಬಹಿರಂಗಪಡಿಸಬಾರದು ಎಂಬ ಉದ್ದೇಶದಿಂದ ನಿಯಮ ವಿಧಿಸಲಾಗಿದೆ ಎಂಬ ಕಾಲೇಜಿನ ವಾದಕ್ಕೆ ಕಿಡಿಕಾರಿದ ನ್ಯಾಯಮೂರ್ತಿ ಖನ್ನಾ..”ಏನಿದು ನಿಯಮ? ಧರ್ಮ ಬಹಿರಂಗಪಡಿಸಬಾರದಾ? ಇಂತಹ ನಿಯಮಗಳನ್ನು ಹೇರಬೇಡಿ. ಅವರ (ವಿದ್ಯಾರ್ಥಿಗಳ) ಹೆಸರನ್ನೂ ನೀವು ಬಹಿರಂಗಪಡಿಸುವುದಿಲ್ವಾ? ಹಾಗಾದರೆ, ಅವರನ್ನು ಸಂಖ್ಯೆಗಳಿಂದ ಗುರುತಿಸುತ್ತೀರಾ?” ಎಂದು ಕೇಳಿದ್ದಾರೆ. “ಅವರು (ವಿದ್ಯಾರ್ಥಿಗಳು) ಒಟ್ಟಾಗಿ ಅಧ್ಯಯನ ಮಾಡಲಿ” ಎಂದಿದ್ದಾರೆ.

ಕಾಲೇಜು ಪರ ವಾದ ಮಂಡಿಸಿದ ಹಿರಿಯ ವಕೀಲೆ ಮಾಧವಿ ದಿವಾನ್ ” ಅದು ಖಾಸಗಿ ಸಂಸ್ಥೆ ಎಂದಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಸಂಜಯ್ ಕುಮಾರ್ “ಯಾವಾಗಿನಿಂದ ಆ ಕಾಲೇಜು ಕಾರ್ಯ ನಿರ್ವಹಿಸುತ್ತಿದೆ? ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ವಕೀಲೆ ” 2008ರಿಂದ ಕಾಲೇಜು ನಡೆಯುತ್ತಿದೆ” ಎಂದು ಉತ್ತರಿಸಿದ್ದಾರೆ. ಈ ವೇಳೆ ಮರುಪ್ರಶ್ನೆ ಕೇಳಿದ ನ್ಯಾಯಮೂರ್ತಿಗಳು “ಇಷ್ಟು ವರ್ಷಗಳಲ್ಲಿ ಯಾವುದೇ ನಿಯಮಗಳು ಇರಲಿಲ್ಲ. ಈಗ ಹಠಾತ್ ಆಗಿ ನಿಮಗೆ ಧರ್ಮ ನೆನಪಾಯಿತಾ? ಎಂದು ಕೇಳಿದ್ದು, ಬಹಳ ವರ್ಷಗಳ ನಂತರ ನೀವು ಅಂತಹ ಸೂಚನೆಗಳನ್ನು ನೀಡುತ್ತಿರುವುದು ದುರದೃಷ್ಟಕರ” ಎಂದಿದ್ದಾರೆ.

“ತಿಲಕ ಧರಿಸಬೇಡಿ” ಎಂದು ನೀವು ಹೇಳುತ್ತೀರಾ? ಎಂದು ನ್ಯಾಯಮೂರ್ತಿ ಖನ್ನಾ ಪ್ರಶ್ನಿಸಿದ್ದಾರೆ.

441 ಮುಸ್ಲಿಂ ವಿದ್ಯಾರ್ಥಿಗಳು ‘ಸಂತೋಷದಿಂದ ಕಾಲೇಜಿಗೆ ಹಾಜರಾಗುತ್ತಿದ್ದಾರೆ’ ಎಂದು ವಕೀಲೆ ದಿವಾನ್ ನ್ಯಾಯಾಲಯಕ್ಕೆ ತಿಳಿಸಿದ್ದು, ಕೆಲವು ಮುಸ್ಲಿಂ ವಿದ್ಯಾರ್ಥಿಗಳಿಂದ ಮಾತ್ರ ಆಕ್ಷೇಪಣೆ ವ್ಯಕ್ತವಾಗಿದೆ. ವಿದ್ಯಾರ್ಥಿಗಳು ಯಾವಾಗಲೂ ಹಿಜಾಬ್ ಧರಿಸುವುದಿಲ್ಲ” ಎಂದು ಹೇಳಿದ್ದಾರೆ.

 

” ಕಾಲೇಜಿನ ನಿಯಮ ಹುಡುಗಿ ಏನು ಧರಿಸಬೇಕೆಂದು ಸೂಚಿಸಿದಂತೆ ಆಗುವುದಿಲ್ಲವೇ? ಎಂದು ನ್ಯಾಯಮೂರ್ತಿ ಖನ್ನಾ ಕೇಳಿದ್ದು, ಮಹಿಳೆಯರಿಗೆ ಏನು ಧರಿಸಬೇಕೆಂದು ಹೇಳುವ ಮೂಲಕ ನೀವು ಹೇಗೆ ಸಬಲೀಕರಣ ಮಾಡುತ್ತೀರಿ? ಎಂದು ಪ್ರಶ್ನಿಸಿದ್ದಾರೆ.

“ವಿದ್ಯಾರ್ಥಿಗಳ ಹಿನ್ನೆಲೆಯನ್ನು ಅಧಿಕಾರಿಗಳು ಅರ್ಥಮಾಡಿಕೊಳ್ಳಬೇಕು. ಕುಟುಂಬದ ಸದಸ್ಯರು ಹುಡುಗಿ ಏನನ್ನು ಧರಿಸಬೇಕು ಎಂದು ಹೇಳಬಹುದು ಮತ್ತು ಅವರು ಧರಿಸಬಹುದು” ಎಂದು ನ್ಯಾಯಮೂರ್ತಿ ಖನ್ನಾ ಹೇಳಿದ್ದಾರೆ.“ವಿದ್ಯಾರ್ಥಿನಿಯರಿಗೆ ಕಾಲೇಜು ಬಿಟ್ಟು ಹೋಗುವಂತೆ ಹೇಳಬೇಡಿ. ನಿಮ್ಮ ನಿಯಮಗಳ ಆದೇಶವನ್ನು ತಡೆ ಹಿಡಿಯಿರಿ ಎಂದು ಆದೇಶಿಸಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version