ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿವೃದ್ಧಿ ಕಾರ್ಯಗಳು

ಇನ್ನು ಮುಂದೆ ಲೋಕಲ್ ಪ್ರಾಧಿಕಾರದಲ್ಲೇ 9/11ಗೆ ಪರಿಹಾರ! – ನಗರಾಭಿವೃದ್ಧಿ ಪ್ರಾಧಿಕಾರಗಳ ಆಯುಕ್ತರಿಂದ ಸಭೆ

Published

on

25 ಸೆಂಟ್ಸ್‌ ಒಳಗಡೆ ಅಭಿವೃದ್ಧಿಗೆ ಹೆಚ್ಚಿನ ಕಂಡೀಷನ್ ಇಲ್ಲ

 

 

 

 

 

ಪುತ್ತೂರು: ಗ್ರಾಮ ಪಂಚಾಯತ್ ಮಟ್ಟದಲ್ಲಿ ನಡೆಸಲಾಗುತ್ತಿದ್ದ 9/11 ವ್ಯವಸ್ಥೆಯನ್ನು ಜಿಲ್ಲಾ ಕೇಂದ್ರಕ್ಕೆ ವರ್ಗಾಯಿಸಿ ಜನರಿಗೆ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಇನ್ನು ಮುಂದೆ ಲೋಕಲ್ ಪ್ರಾಧಿಕಾರದಲ್ಲೇ 9/11 ವ್ಯವಸ್ಥೆಗೆ ಪರಿಹಾರ ಸಿಗಲಿದೆ ಎಂದು ಪುತ್ತೂರು ಶಾಸಕ ಆಶೋಕ್ ಕುಮಾರ್ ರೈ ಅವರು ನಗರಾಭಿವೃದ್ಧಿ ಪ್ರಾಧಿಕಾರಿಗಳ ಆಯುಕ್ತ ಐಎಎಸ್ ಅಧಿಕಾರಿ ಆರ್ ವೆಂಕಟಾಚಲಪತಿ ಅವರ ಉಪಸ್ಥಿತಿಯಲ್ಲಿ ಸರಕಾರದ ಮಹತ್ವದ ಅದೇಶವನ್ನು ತಿಳಿಸಿದ್ದಾರೆ.

 

ಸೆ.17ರಂದು ಪುತ್ತೂರು ತಾಲೂಕು ಕಚೇರಿಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ 9/11 ಮತ್ತು ಕಟ್‌ಕನ್ವರ್ಷನ್ ಹಾಗೂ ಇತರ ವಿಚಾರಗಳ ಕುರಿತು ಅಧಿಕಾರಿಗಳ ಮಟ್ಟದಲ್ಲಿ ವಿಶೇಷ ಸಭೆ ನಡೆಯಿತು. ಈ ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರಿಗಳ ಆಯುಕ್ತ ಐಎಎಸ್ ಅಧಿಕಾರಿ ಆರ್ ವೆಂಕಟಾಚಲಪತಿ ಅವರು ಸರಕಾರದ ಆದೇಶವನ್ನು ತಿಳಿಸಿ ಕೆಲವೊಂದು ಸಮಸ್ಯೆಗಳನ್ನು ಖುದ್ದು ಆಲಿಸಿ ಸೂಕ್ತ ಪರಿಹಾರ ನೀಡುವಂತೆ ಭರವಸೆ ನೀಡಿದರು.

ಸಭೆಯ ಕೊನೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ, ಈ ಹಿಂದೆ ಪಂಚಾಯತ್ ಮಟ್ಟದಲ್ಲಿ ಮನೆ ಕಟ್ಟುವವರಿಗೆ 9/11 ನಲ್ಲಿ ಆದೇಶ ಕೊಡುತ್ತಿದ್ದರು. ಆನಂತರ ಯಾರೋ ಉಚ್ಛನ್ಯಾಯಾಲಯದ ಮೊರೆ ಹೋಗಿ ನಮಗೆ ಯಾವುದು ಅಭಿವೃದ್ಧಿಗಳು ಸಿಗುತ್ತಿಲ್ಲ ಎಂಬ ಅರ್ಜಿಗೆ ಸಂಬಂಧಿಸಿ ಜಾಗವನ್ನು ತುಂಡು ಮಾಡಿಕೊಡುವಾಗ ಅಭಿವೃದ್ಧಿ ಸರಿಯಾಗಿ ಆಗಿಲ್ಲ ಎಂಬ ವಿಚಾರವನ್ನು ಹಿಡಿದುಕೊಂಡು ಉಚ್ಛ ನ್ಯಾಯಾಲಯ ಒಂದು ಮನೆ ನಿವೇಶನಕ್ಕೆ ಅನುಮತಿ ಕೊಡಲು ನಗರಯೋಜನಾ ಪ್ರಾಧಿಕಾರದಿಂದ ಅಭಿವೃದ್ದಿ ಪ್ಲಾನ್ ತೆಗೆದುಕೊಂಡು ನಂತರ ಕೊಡಬೇಕೆಂಬ ಆದೇಶ ಹೊರಡಿಸಿತ್ತು.

ಮನೆ ಕಟ್ಟುವವರು ಪ್ರತಿಯೊಂದು ಅನುಮೋದನೆ ಪಡೆದು ಮನೆ ಕಟ್ಟುವ ಪರಿಸ್ಥಿತಿ ಗ್ರಾಮೀಣ ಪ್ರದೇಶದಲ್ಲಿ ಜನರು ತುಂಬಾ ತೊಂದರೆ ಎದುರಿಸುತ್ತಿದ್ದರು. ಈ ಸಮಸ್ಯೆ ಕರಾವಳಿ ಭಾಗದಲ್ಲಿ ಆಗುವುದಿಲ್ಲ ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಯು.ಟಿ.ಖಾದರ್, ಐವನ್ ಡಿಸೋಜ, ಸುರೆಶ್ ಕುಮಾರ್, ಸದಸ್ಯರು, ಬಿಜೆಪಿ ಸದಸ್ಯರು, ಮಂತ್ರಿಗಳು ಅಧಿಕಾರಿಗಳು ಸೇರಿಕೊಂಡು ಸಭೆ ನಡೆಸಿ ಪರಿಹಾರ ಕೊಡಬೇಕೆಂಬ ದೃಷ್ಟಿಯಿಂದ ಎರಡು ಆದೇಶಗಳನ್ನು ಸರಕಾರ ಹೊರಡಿಸಿದೆ.

ಪ್ರತಿಯೊಂದು ತಾಲೂಕಿನಲ್ಲೂ ಪ್ರಾಧಿಕಾರದ ಒಬ್ಬ ಸದಸ್ಯರನ್ನು ಗ್ರಾಮೀಣ ಪ್ರದೇಶದಲ್ಲಿ ಬರುವ 9/11 ಗೆ ಸಂಬಂಧಿಸಿ ಪ್ರತಿ ಪಂಚಾಯತ್‌ನಲ್ಲಿ ಅರ್ಜಿ ಸ್ವೀಕಾರ ಮಾಡಿ. ಲೋಕಲ್ ಪ್ರಾಧಿಕಾರಕ್ಕೆ ಕೊಡಬೇಕು. ಬೆಳ್ತಂಗಡಿ, ಸುಳ್ಯ, ಪುತ್ತೂರು, ಕಡಬ, ವಿಟ್ಲದವರಿಗೆ ಪ್ರಯೋಜನ ಆಗಲಿದೆ. 25 ಸೆಂಟ್ಸ್ ಒಳಗಡೆ ಯಾರೆಲ್ಲ ಅಭಿವೃದ್ದಿ ಮಾಡುತ್ತಾರೆ. ಅದಕ್ಕೆ ಯಾವುದೇ ಕಡತಗಳಲ್ಲಿ ಹೆಚ್ಚಿನ ಕಂಡಿಷನ್ ಇಲ್ಲ. ದಾನ ಪತ್ರ ಕೊಡಬೇಕಾಗಿಲ್ಲ. ಕನ್ವರ್ಷನ್‌ನಲ್ಲಿ ಸಂಪರ್ಕ ರಸ್ತೆ ಇದ್ದರೆ ಸಾಕು.

 

 

ಮುಂದಿನ ದಿನ ಎಲ್ಲಾ ಅಧಿಕಾರಿಗಳು ಅಯಾ ಭಾಗಕ್ಕೆ ಹೋಗಿ ಅನುಮೋದನೆ ಕೊಡುವ ಕೆಲಸ ಮಾಡುತ್ತಾರೆ. 12 ರಿಂದ 15 ದಿವಸದೊಳಗೆ ಅನುಮೋದನೆ ಕೊಡುವ ಕೆಲಸ ಆಗಲಿದೆ. ಒಟ್ಟಿನಲ್ಲಿ 9/11 ಸಮಸ್ಯೆಗೆ ಪರಿಹಾರ ಸರಕಾರ ನೀಡಿದೆ ಎಂದರು. ಸಭೆಯಲ್ಲಿ ತಹಸೀಲ್ದಾರ್ ಪುರಂದರ ಹೆಗ್ಡೆ, ಪುತ್ತೂರು ನಗರಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಭಿಲಾಷ್ ಸಹಿತ ಮೈಸೂರು ವಿಭಾಗೀಯ ಅಧಿಕಾರಿಗಳು ಹಾಗು ಪುತ್ತೂರು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ, ಪೌರಾಯುಕ್ತ ಮಧು ಎಸ್ ಮನೋಹರ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version