Published
9 months agoon
By
Akkare News
ಹಾಸನದಲ್ಲಿ:ಜೂನ್ 16: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ (rain) ಆರ್ಭಟ ಜೋರಾಗಿದೆ. ಎರಡು ವಾರಗಳ ಬಿಡುವಿನ ಬಳಿಕ ಮತ್ತೆ ಶುರುವಾಗಿರುವ ಧಾರಾಕಾರ ಮಳೆ, ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ನ (Shiradi Ghat) ಸಕಲೇಶಪುರದಿಂದ ಮಾರನಹಳ್ಳಿವರೆಗೆ ಆತಂಕ ಹೆಚ್ಚಿದೆ.
ಭಾರೀ ಗಾಳಿ, ಮಳೆಗೆ ಬೃಹದಾಕಾರದ ಮರಗಳು ರಸ್ತೆಗೆ ಉರುಳುತ್ತಿದ್ದು, ಕೊಂಚ ಎಡವಟ್ಟಾದರೂ ಪ್ರಾಣಕ್ಕೆ ಕುತ್ತು ಬರುವ ಭೀತಿ ಎದುರಾಗಿದೆ. ಸದ್ಯ ಒಂದು ಪಥದ ಸಂಚಾರ ಸ್ಥಗಿತಗೊಳಿಸಲಾಗಿದೆ.
ಮಲೆನಾಡು ಭಾಗದಲ್ಲಿ ಮಳೆ ಆರ್ಭಟ ಹೆಚ್ಚಾಗಿದ್ದು, ಶಿರಾಡಿ ಘಾಟ್ನಲ್ಲಿ ಸಂಚಾರಕ್ಕೆ ಸಂಕಷ್ಟ ಎದುರಾಗಿದೆ. ಗಾಳಿ, ಮಳೆಯಿಂದಾಗಿ ನೂರಾರು ಮರಗಳು ರಸ್ತೆ ಮೇಲೆ ಕುಸಿಯುವ ಭೀತಿ ಶುರುವಾಗಿದೆ. ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಗುಡ ಕೊರೆದಿರುವ ಹಿನ್ನೆಲೆಯಲ್ಲಿ ಆತಂಕ ಶುರುವಾಗಿದ್ದು, ಕಾಫಿ ತೋಟದ ಮರಗಳು ರಸ್ತೆಗೆ ಉರುಳುತ್ತಿವೆ. ಭಾನುವಾರ ಕೂಡ ಶಿರಾಡಿ ಘಾಟ್ನ ದೋಣಿಗಲ್ ಬಳಿ ಬೃಹತ್ ಮರವೊಂದು ಬಿದ್ದಿತ್ತು.
ಹಾಸನದಿಂದ ಸಕಲೇಶಪುರ ತಾಲ್ಲೂಕಿನ ಮಾರನಹಳ್ಳಿವರೆಗೆ ಒಟ್ಟು 45 ಕಿ,ಮೀ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಹಾಸನದಿಂದ ಸಕಲೇಶಪುರದವರೆಗಿನ ಕಾಮಗಾರಿ ಬಹುತೇಕ ಮುಗಿದಿದೆ. ಆದರೆ ಸಕಲೇಶಪುರದಿಂದ ಮಾರನಹಳ್ಳಿ ವರೆಗಿನ 12 ಕಿ.ಮೀ ರಸ್ತೆ ಕಾಮಗಾರಿ ಬರೋಬ್ಬರಿ 8 ವರ್ಷಗಳಿಂದ ನಡೆಯುತ್ತಲೇ ಇದೆ. ಇನ್ನೂ ಶೇಕಡ 40 ರಿಂದ 50 ರಷ್ಟು ಕೆಲಸ ಬಾಕಿ ಇದೆ.
ಈ ಮಾರ್ಗದ ಹಲವು ಕಡೆ ಭೂ ಕುಸಿತದ ಭೀತಿ ಇದೆ. ಅಧಿಕಾರಿಗಳು ಭೂ ಕುಸಿತದ ಸ್ಥಳವೆನ್ನುವ ಎಚ್ಚರಿಕೆ ಫಲಕ ಹಾಕಿದ್ದರೂ ಮಳೆಯಿಂದ ಯಾವಾಗ ಏನಾಗುತ್ತೋ ಎನ್ನೋ ಆತಂಕ ಎಲ್ಲರನ್ನು ಕಾಡುತ್ತಿದೆ. ಕಳೆದ ಮೇ ತಿಂಗಳು ಕೇವಲ ಒಂದೇ ಒಂದು ಮಳೆಗೆ ದೊಡ್ಡ ಅನಾಹುಗಳ ಸರಣಿಯೇ ಸೃಷ್ಟಿಯಾಗಿ ಸಂಸದರು, ಲೋಕೋಪಯೋಗಿ ಸಚಿವರು, ವಿಪಕ್ಷ ನಾಯಕರು ಬಂದು ಸ್ಥಳ ಪರಿಶೀಲನೆ ನಡೆಸಿ ಹೋಗಿದ್ದರು. ಇದಾದ ಬಳಿಕ ಎರಡು ವಾರ ಮಳೆ ಬ್ರೇಕ್ ನೀಡಿತ್ತು. ಹಾಗಾಗಿ ಸಮಸ್ಯೆಯೂ ತಗ್ಗಿತ್ತು. ಆದರೆ ಇದೀಗ ಮತ್ತೆ ಮಳೆ ಆರಂಭವಾಗಿದೆ.
‘ಕೆಲವು ಪ್ರಕರಣಗಳನ್ನು ಗಂಭೀರ ಎಂದು ಪರಿಗಣಿಸಲಾಗುತ್ತದೆ. ಮದ್ಯ ಸೇವಿಸಿ ಕರ್ತವ್ಯ ನಿರ್ವಹಿಸುವುದು, ಟಿಕೆಟ್ ನೀಡದೇ ₹ 100ಕ್ಕಿಂತ ಅಧಿಕ ವಂಚನೆ ಮಾಡುವುದೆಲ್ಲ ಇದರಲ್ಲಿ ಒಳಗೊಂಡಿದೆ. ಗಂಭೀರ ಸ್ವರೂಪದ ಪ್ರಕರಣ ಪತ್ತೆಯಾದ ತಕ್ಷಣವೇ ಅಂಥವರನ್ನು ಅಮಾನತು ಮಾಡಲಾಗುತ್ತದೆ’ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.