Published
9 months agoon
By
Akkare News
ಕಡಬ ತಾಲೂಕಿನ ಎಡಮಂಗಲ ಸಮೀಪದ ಚಾರ್ವಾಕ ಗ್ರಾಮದಲ್ಲಿ ಪಂಪ್‌ಗೆ ಸ್ವಿಚ್ ಹಾಕಲು ತೆರಳಿದ್ದ ಮಹಿಳೆಯೊಬ್ಬರು ವಿದ್ಯುತ್ ಶಾಕ್ ಹೊಡೆದು ಮೃತಪಟ್ಟ ದುರ್ಘಟನೆ ಜೂನ್ 16ರ ಸಂಜೆ ನಡೆದಿದೆ.
ದೋಳ್ವಾಡಿ ನಿವಾಸಿ ಪುರಂದರ ಎಂಬವರ ಪತ್ನಿ ರೇಖಾ(35ವ) ಮೃತಟ್ಟವರು ಎಂದು ತಿಳಿದು ಬಂದಿದೆ.
ತಮ್ಮ ಮನೆಯಲ್ಲಿ ನೀರಿನ ಪಂಪ್ ಚಾಲನೆ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ಪಂಪ್ ರನ್ ಆಗಿಲ್ಲವೆಂದು ಕೇಬಲ್ ಮುಟ್ಟಿದ ವೇಳೆ ಅಚಾನಕರಾಗಿ ವಿದ್ಯುತ್ ಶಾಕ್ ಹೊಡೆದು ಬಿದ್ದಿದ್ದಾರೆ ಎನ್ನಲಾಗಿದೆ.
ತಕ್ಷಣ ಅವರನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರಿಕ್ಷೇಗಾಗಿ ಆರೋಗ್ಯ ಕೇಂದ್ರದ ಶವಗಾರದಲ್ಲಿ ಇರಿಸಲಾಗಿದ್ದು, ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.