Connect with us

ಇತರ

ವಿಟ್ಲ: ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಲಾರಿಗಳು ವಶಕ್ಕೆ

Published

on

ವಿಟ್ಲ: ದಿನಾಂಕ:02-08-2025 ರಂದು ರಾಮಕೃಷ್ಣ ಪೊಲೀಸ್‌ ಉಪ ನಿರೀಕ್ಷಕರು ವಿಟ್ಲ ಪೊಲೀಸ್‌ ಠಾಣೆರವರು ಸಿಬ್ಬಂದಿಗಳೊಂದಿಗೆ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಕಾಶಿಮಠ ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಮಧ್ಯಾಹ್ನ ಸಮಯ ಸದ್ರಿ ಮಾರ್ಗವಾಗಿ, ಉಕ್ಕಡ ಕಡೆಯಿಂದ ವಿಟ್ಲ ಕಡೆಗೆ ಬರುತ್ತಿದ್ದ KA 01 AJ 9542 & KA 50 AF 3229 ಎರಡು ಲಾರಿಗಳು ಬರುತ್ತಿದ್ದನ್ನು ನೋಡಿ, ಅವುಗಳನ್ನು ನಿಲ್ಲಿಸಿ, ತಪಾಸಣೆ ನಡೆಸಲಾಗಿ ಅದರಲ್ಲಿ ತಲಾ 500 ಕೆಂಪು ಕಲ್ಲುಗಳಿದ್ದು, ಕೆಂಪು ಕಲ್ಲು ಸಾಗಾಟದ ಬಗ್ಗೆ ಪರವಾನಿಗೆಯನ್ನು ಸದ್ರಿ ಲಾರಿಗಳ ಚಾಲಕರಲ್ಲಿ ಕೇಳಲಾಗಿ ಪರವಾನಿಗೆ ಇಲ್ಲವೆಂದು ಹಾಗೂ KA 01 AJ 9542 ನೇ ಲಾರಿಗೆ ಕೇರಳ ರಾಜ್ಯದ ಪೆರ್ಲ ಎಂಬಲ್ಲಿಂದ ಕಲ್ಲುಗಳನ್ನು ಜಾಫ‌ರ್ ಎಂಬುವರು ಅಕ್ರಮವಾಗಿ ತುಂಬಿಸಿ , KA 50 AF 3229 2 ಲಾರಿಯಲ್ಲಿ ಕೇರಳ ರಾಜ್ಯದ ಧರ್ಮತ್ತಡ್ಕ ಎಂಬಲ್ಲಿಂದ ನಾಸೀ‌ರ್ ಎಂಬುವರು ಅಕ್ರಮವಾಗಿ ತುಂಬಿಸಿ ಕಳುಹಿಸಿರುವುದಾಗಿ ತಿಳಿಸಿರುತ್ತಾರೆ.

ಸದ್ರಿ ಲಾರಿಗಳನ್ನು ಹಾಗೂ ಚಾಲಕರುಗಳನ್ನು ವಶಕ್ಕೆ ಪಡೆದು, ಯಾವುದೇ ಪರವಾನಿಗೆ ಅಥವಾ ದಾಖಲಾತಿ ಇಲ್ಲದೆ ಅಕ್ರಮವಾಗಿ ಕೆಂಪು ಕಲ್ಲುಗಳನ್ನು ಕಳ್ಳತನದಿಂದ ತುಂಬಿಸಿಕೊಂಡು ಸಾಗಾಟ ಮಾಡಿದ ಹಿನ್ನೆಲೆಯಲ್ಲಿ ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ 94/2025 : 303(2) 2 2 4(1), 21, MMRD act and U/s 3,44 KMMCR Act ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version