Published
7 months agoon
By
Akkare News
ಚಹಾ ನಾವು ಇಷ್ಟಪಟ್ಟು ಕುಡಿಯುವ ಪೇಯ. ಆಹಾರ ಖದೀಮರು ಟೀ ಪುಡಿಯನ್ನು ಬಿಡದೆ ಕಲಬೆರಕೆ ಮಾಡುತ್ತಾರೆ ಅನ್ನುವ ಸ್ಪೋಟಕ ಅಂಶ ಬಯಲಾಗಿದೆ. ರಾಜ್ಯದ ಖಾಸಗಿ ಮಾಧ್ಯಮವೊಂದು ಇತ್ತೀಚೆಗೆ ಟೀ ಮಾಫಿಯಾದ ಸಮಗ್ರ ವಿವರಣೆಯನ್ನು ಬಯಲಿಗೆ ತಂದಿತ್ತು. ಟೀ ಪುಡಿಗೆ ಕೃತಕ ಬಣ್ಣ ಬಳಸಿ ದೊಡ್ಡ ಮಟ್ಟದಲ್ಲಿ ವಿತರಿಸುವ ಜಾಲ ಕರಾವಳಿಯಲ್ಲಿ ಸಕ್ರೀಯವಾಗಿದೆ. ಟೀ ಪುಡಿಯ ಆಕರ್ಷಕ ಬಣ್ಣಕ್ಕೆ ಮೈ ಮರೆತು ಹೋಟೆಲ್, ಕ್ಯಾಂಟೀನ್ ಮಾಲಕರು ಖರೀದಿಸುತ್ತಿದ್ದಾರೆ. ಇದು ಮಾರಕ ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತಿದೆ.
ಹೊರ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ನಕಲಿ ಟೀ ಪುಡಿ ಪೊರೈಕೆಯಾಗುತ್ತಿದೆ. ಬೆಂಗಳೂರು ಕಡೆಯಿಂದ ಹಲವು ಬ್ರ್ಯಾಂಡ್ ಹೆಸರಿನಲ್ಲಿ ಕಲಬೆರಕೆ ಟೀ ಪೌಡರ್ ಕರಾವಳಿಗೆ ಬರುತ್ತದೆ. ಉಡುಪಿ, ದಕ್ಷಿಣ ಕನ್ನಡ, ಬಂಟ್ವಾಳ, ವಿಟ್ಲ, ಸುಳ್ಯ ಸೇರಿದಂತೆ ಕೇರಳದ ಗಡಿ ಭಾಗಗಳಲ್ಲಿ ವಿತರಣೆಯಾಗುತ್ತಿದೆ. ಆಕರ್ಷಕ ಹೆಸರುಗಳಲ್ಲಿ ಲಭ್ಯವಾಗುತ್ತಿದೆ. ಇದು ಈ ಭಾಗದಲ್ಲಿ ದೊಡ್ಡ ಮಾಫಿಯಾ ದಂಧೆಯಾಗಿ ಬದಲಾಗಿದೆ. ಇತ್ತೀಚೆಗೆ ಸುಳ್ಯ ಭಾಗದಲ್ಲಿ ಹೆಚ್ಚು ಕ್ಯಾನ್ಸರ್, ಕಿಡ್ನಿ ರೋಗದ ಪತ್ತೆಯ ಹಿಂದೆ ನಕಲಿ ಟೀ ಪುಡಿಯು ಕಾರಣವಾಗಿದೆ ಎಂಬ ಮಾಹಿತಿ ಇದೆ. ಇತ್ತೀಚಿನ ದಿನಗಳಲ್ಲಿ ನಕಲಿ ಟೀ ಪುಡಿ ಜಾಲ ಉತ್ತರ ಕರ್ನಾಟಕ ಜಿಲ್ಲೆಗಳಿಗೂ ವ್ಯಾಪಿಸಿದೆ.
ಕಂಪನಿ ಲೇಬಲ್ ಹಾಕಿ ಇಂತಹ ಚಹಾ ಪುಡಿ ಮಾರಾಟ ಮಾಡುವುದಿಲ್ಲ. ಸಬ್ ವಿತರಕರ ಮೂಲಕ ಬೇರೆ ಆಹಾರ ವಸ್ತುಗಳ ಲೈನ್ ಸೇಲ್ ಜತೆಯಲ್ಲೇ ಈ ಟೀ ಪೌಡರ್ ಪೊಟ್ಟಣಗಳು ಸಣ್ಣ ಪುಟ್ಟ ಹೋಟೆಲ್, ಅಂಗಡಿ ಸೇರುತ್ತದೆ.
ಮರದ ಬೊಟ್ಟು, ನಕಲಿ ಟೀ ಎಲೆ, ಮತ್ತುಬರಲು ಮದ್ದು ಸೇರಿಸುತ್ತಾರೆ, ಅಜಿಲಮೊಟಾನೂ ಸೇರಿಸುತ್ತಾರೆ. ಇಂತಹ ಟೀ ದಿನನಿತ್ಯ ಸೇರಿಸಿದರೆ ನಾನಾ ಕಾಯಿಲೆಗೆ ತುತ್ತಾಗಬೇಕಿದೆ. ಕ್ಯಾನ್ಸರ್ ಗೂ ಕಾರಣವಾಗುತ್ತದೆ. ಸಾಮಾನ್ಯವಾಗಿ ಕೆ.ಜಿ ಗೆ 170 ರಿಂದ 180 ರೂಪಾಯಿಗೆ ಚಹಾ ಪುಡಿ ವಿತರಣೆಯಾಗುತ್ತದೆ. ಆದರೆ ಕಲಬೆರಕೆ ಮಾಡುವವರು ಕಳಪೆ ಗುಣಮಟ್ಟದ ಟೀ ಪೌಡರನ್ನು ಕೆಲ ಎಸ್ಟೇಟ್ ಗಳಿಂದ 80-100 ರೂಪಾಯಿಗೆ ಪಡೆಯುತ್ತಾರೆ. ಅದಕ್ಕೆ ಒಂದಷ್ಟು ಪರ್ಷಿಯನ್ ಬ್ಲೂ , ಬಿಸ್ಮಾರ್ಕ್ ಬ್ರೌನ್, ಇಂಡಿಗೋ ದಂತಹ ಡೆಡ್ಲಿ ಕೆಮಿಕಲ್ ಬಳಸುತ್ತಾರೆ.
ಟೀ ಮಾಫಿಯಾದ ವಿರುದ್ಧ ಆಹಾರ ಸುರಕ್ಷತಾ ಅಧಿಕಾರಿಗಳು ಮೌನಕ್ಕೆ ಜಾರಿರುವುದು ಖೇದಕರ. ಆಹಾರ ಸುರಕ್ಷತಾ ಕಾಯ್ದೆ ಪ್ರಕಾರ ಚಹಾ ಪುಡಿಗೆ ಬಣ್ಣ ಸೇರಿಸುವಂತಿಲ್ಲ. ಆದರೆ ಡೆಡ್ಲಿ ಕೆಮಿಕಲ್ ಬಳಸಿ ಕೃತಕ ಟೀ ಪುಡಿ ಮಾರಾಟ ಮಾಡುವ ಜಾಲ ಸಕ್ರೀಯವಾಗಿದೆ. ಸುಳ್ಯ, ಪುತ್ತೂರು ಕೆಲವು ಭಾಗಗಳಲ್ಲಿ ಇಂತಹ ಜಾಲ ಬೃಹದಾಕಾರವಾಗಿ ಬೆಳೆದಿದೆ. ಸಾರಿಗೆ ನಿಗಮದ ಬಸ್ ಗಳಲ್ಲಿ ಇಂತಹ ನಕಲಿ ಚಾ ಹುಡಿ ಸುಳ್ಯಕ್ಕೆ ಬರುತ್ತದೆಯಂತೆ. ಈ ಮಾಪಿಯಾದ ಹಿಂದೆ ಸರಕಾರಿ ಸಾರಿಗೆ ನಿಗಮದ ಸಿಬ್ಬಂದಿಯ ಶಾಮಿಲಾತಿ ಕೇಳಿ ಬರುತ್ತಿದೆ. ಮಾಫಿಯಾ ರೀತಿ ಬದಲಾಗಿದೆ. ಮುಂದಿನ ದಿನಗಳಲ್ಲಿ ಮೀಡಿಯಾ ಇಂತಹ ನಕಲಿ ಟೀ ಪುಡಿಯ ವ್ಯವಹಾರ ನಡೆಸುವವರ ಬಣ್ಣ ಕಳಚಲಿದೆ.