Connect with us

ಇತರ

ವಿಟ್ಲ: ಜೆಸಿಐ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಅಂಕುರ್ ಝನ್ ಝನ್ ವಾಲಾ ಭೇಟಿ..

Published

on

ವಿಟ್ಲ: ಜೆಸಿಐ ವಿಟ್ಲ ಘಟಕಕ್ಕೆ ಆ. 05ರಂದು ರಾಷ್ಟ್ರೀಯ ಅಧ್ಯಕ್ಷ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ವಿಟ್ಲ ಜೆ.ಸಿ.ಐ ಸಂಸ್ಥೆಯು ತನ್ನ ವಾರ್ಷಿಕ ಶಾಶ್ವತ ಕೊಡುಗೆಯಾಗಿ ಮೈಕ್ ಸೆಟ್ ಅನ್ನು ಜೆಸಿ ಆಂಗ್ಲಮಾಧ್ಯಮ ಸಂಸ್ಥೆಯ ಅಧ್ಯಕ್ಷ ಶ್ರೀಧರ್ ಶೆಟ್ಟಿರವರಿಗೆ ಹಸ್ತಾಂತರಿಸಿದರು. ಸಮಾರಂಭದಲ್ಲಿ ಶಾಲಾ ಪ್ರಿನ್ಸಿಪಾಲ್ ಜಯರಾಮ ರೈ ಯವರು ಶಾಲೆಯು ಬೆಳೆದು ಬಂದ ರೀತಿ, ಅದರ ಯಶಸ್ಸನ್ನು ಕುರಿತು ವಿವರಿಸಿದರು.

ವಿಟ್ಲ ಜೆ ಸಿ ಐ ಅಧ್ಯಕ್ಷೆ ಜೇಸಿ ಸೆನೆಟರ್ ಸೌಮ್ಯಾ ಚಂದ್ರಹಾಸ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

 

ಜೇ ಸಿ ಐ ವಲಯ ಅಧ್ಯಕ್ಷ ಜೇ ಸಿ ಸೆನೆಟರ್ ಅಭಿಲಾಶ್ ಬಿ.ಎ. ಯವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

 

ಕಾರ್ಯಕ್ರಮದ ಮುಖ್ಯ ಅತಿಥಿ JFS ಅಂಕುರ್ ಝನ್ ಝನ್ ರವರ ಪರಿಚಯವನ್ನು  ಹೇಮಾ ಜೈ ಕಿಶನ್ ನಡೆಸಿದರು. ಮುಖ್ಯ ಅತಿಥಿ JFS ಅಂಕುರ್ ಝುನ್ ಝುನ್ ವಾಲಾರವರು ಯಶಸ್ಸಿನ ಮೂರು ಸೂತ್ರಗಳನ್ನು ವಿದ್ಯಾರ್ಥಿಗಳಿಗೆ ಚೆನ್ನಾಗಿ ಮನದಟ್ಟು ಮಾಡಿದರು.

ವಿಠಲ್ ಜೇಸೀಸ್ ಶಾಲೆಯು ಉನ್ನತ ಸಾಧನೆಗೈಯುವಂತಾಗಲಿ ಎಂದು ಶುಭ ಹಾರೈಸಿದರು. ಸಂಸ್ಥೆಯ ಹಿರಿಯ ನಿರ್ದೇಶಕ ಹಸನ್ ವಿಟ್ಲ ರವರು ಶುಭಹಾರೈಸಿದರು. ಚಂದ್ರಹಾಸ ಕೊಪ್ಪಳ  ಜೇಸಿ ವಾಣಿ ಹೇಳಿದರು.

ಕಾರ್ಯಕ್ರಮದಲ್ಲಿ ZVP ಸಂತೋಷ್ ಶೆಟ್ಟಿ, ಜೇಸಿ ಕಾಶಿನಾಥ ಗೋಗಾಟಿ, ಸಂಸ್ಥೆಯ ಅಧ್ಯಕ್ಷರಾದ ಜೇಸಿ ಶ್ರೀಧರ ಶೆಟ್ಟಿ, ಜೇಸಿ ಸುಹಾಸ್ ಮರಿಕೆ, ಜೇಸಿ ಅಶ್ವಿನಿ ಐತಾಳ್, ವಿಟ್ಲ ಜೇಸೀಸ್ ಸಂಸ್ಥೆಯ ಕೋಶಾಧಿಕಾರಿ ಪ್ರಭಾಕರ ಶೆಟ್ಟಿ, ಜಿ ಸಿ ಐ ಸಂಸ್ಥೆಯ ಪದಾಧಿಕಾರಿಗಳು, ಸಂಸ್ಥೆಯ ಆಡಳಿತ ಅಧಿಕಾರಿ ರಾಧಾಕೃಷ್ಣ ಎರಂಬು, ಉಪಪ್ರಾಂಶು ಪಾಲೆ ಜ್ಯೋತಿ ಶೆಣೈ, ಎಲ್ಲಾ ಶಿಕ್ಷಕರು ಶಿಕ್ಷಕೇತರರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version